ಬೈಕ್‌ಗಳಿಗೆ ಟ್ರಕ್ ಡಿಕ್ಕಿ: 24 ವರ್ಷದ ಮುಂಬೈ ಮಹಿಳಾ ಬೈಕರ್ ದುರಂತ ಸಾವು; Riddhi Thakkar ಕೊನೆಯ ಪೋಸ್ಟ್ ವೈರಲ್!
ಭೀಕರ ರಸ್ತೆ ಅಪಘಾತದಲ್ಲಿ ಮುಂಬೈನ 24 ವರ್ಷದ ಬೈಕರ್ ರಿದ್ಧಿ ದಿವ್ಯೇಶ್ ಥಕ್ಕರ್ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಿಂದ ಛತ್ತೀಸ್‌ಗಢದ ಬಸ್ತಾರ್‌ಗೆ ಪ್ರಯಾಣಿಸುತ್ತಿದ್ದಾಗ ಟ್ರಕ್ ವೊಂದು ಡಿಕ್ಕಿ ಹೊಡೆದಿದೆ.

ಬಲೋಡ್: ಭೀಕರ ರಸ್ತೆ ಅಪಘಾತದಲ್ಲಿ ಮುಂಬೈನ 24 ವರ್ಷದ ಬೈಕರ್ ರಿದ್ಧಿ ದಿವ್ಯೇಶ್ ಥಕ್ಕರ್ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಿಂದ ಛತ್ತೀಸ್‌ಗಢದ ಬಸ್ತಾರ್‌ಗೆ ಪ್ರಯಾಣಿಸುತ್ತಿದ್ದಾಗ ಟ್ರಕ್ ವೊಂದು ಡಿಕ್ಕಿ ಹೊಡೆದಿದೆ. ಧಮತರಿ ಮತ್ತು ಬಲೋಡ್ ಜಿಲ್ಲೆಗಳ ಗಡಿಯಲ್ಲಿರುವ ಜಗತಾರಾ ಕಣಿವೆ ಪ್ರದೇಶದಲ್ಲಿ ಅಪಘಾತ ಸಂಭವಿಸಿದೆ. ರಿದ್ಧಿ ಅವರ ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.
ದೇಶದ ವಿವಿಧ ಭಾಗಗಳಿಂದ 23 ಮಹಿಳಾ ಬೈಕರ್‌ಗಳು ಸವಾರಿ ಕೈಗೊಂಡಿದ್ದರು. ಈ ಗುಂಪು ರಾಯ್‌ಪುರದಿಂದ ಬಸ್ತಾರ್‌ಗೆ 20 ಬೈಕ್ ಮತ್ತು ಕಾರಿನಲ್ಲಿ ಪ್ರಯಾಣಿಸುತ್ತಿತ್ತು. ಪ್ರವಾಸಕ್ಕೆ ಕೇವಲ 15 ಗಂಟೆಗಳ ಮೊದಲು, ರಿದ್ಧಿ Instagram ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಬುಧವಾರ ಬೆಳಿಗ್ಗೆ ಬಲೋಡ್ ಜಿಲ್ಲೆಯಲ್ಲಿ ಟ್ರಕ್ ವೊಂದು ಹಲವು ಬೈಕ್ ಗಳಿಗೆ ಡಿಕ್ಕಿ ಹೊಡೆದಿದ್ದು ಇದರಲ್ಲಿ ಮಹಾರಾಷ್ಟ್ರದ 24 ವರ್ಷದ ಮಹಿಳಾ ಮೋಟಾರ್ ಸೈಕಲ್ ಸವಾರ ಸಾವನ್ನಪ್ಪಿದ್ದಾರೆ.
Riddhi Thakkar ಛತ್ತೀಸ್‌ಗಢದ ಬಸ್ತಾರ್ ಪ್ರದೇಶದಲ್ಲಿ ಪ್ರವಾಸಕ್ಕೆಂದು ತೆರಳುತ್ತಿದ್ದ ಮೋಟಾರ್ ಸೈಕಲ್ ಸವಾರರ ಗುಂಪಿನ ಭಾಗವಾಗಿದ್ದರು. ರಾಷ್ಟ್ರೀಯ ಹೆದ್ದಾರಿ 30ರ ಪುರೂರ್ ಪೊಲೀಸ್ ಠಾಣೆ ಪ್ರದೇಶದ ಮಾರ್ಕಟೋಲಾ ಘಾಟ್‌ನಲ್ಲಿ ಬೆಳಿಗ್ಗೆ 6 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಇನ್ನು ಅಪಘಾತದಲ್ಲಿ ಕೆಲವರು ಗಂಭೀರವಾಗಿ ಗಾಯಗೊಂಡಿದ್ದು, ಅವರ ಕಾಲುಗಳಿಗೆ ತೀವ್ರ ಗಾಯಗಳಾಗಿವೆ. ಅಪಘಾತದ ಬಳಿಕ ಚಾಲಕ ಟ್ರಕ್ ಬಿಟ್ಟು ಪರಾರಿಯಾಗಿದ್ದಾನೆ. ಘಟನೆ ನಡೆದ ಸ್ಥಳವು ರಾಜ್ಯ ರಾಜಧಾನಿ ರಾಯ್‌ಪುರದಿಂದ ಸುಮಾರು 90 ಕಿಲೋಮೀಟರ್ ದೂರದಲ್ಲಿದೆ. ವಾಹನ ಮತ್ತು ಅದರ ಚಾಲಕನನ್ನು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ರಿದ್ಧಿ ಜೊತೆ ಪ್ರಯಾಣಿಸುತ್ತಿದ್ದ ಇತರ ಮೋಟಾರ್‌ಸೈಕಲ್ ಸವಾರರು ಪೊಲೀಸ್ ಸಹಾಯವಾಣಿ ಡಯಲ್ -112 ಗೆ ಕರೆ ಮಾಡಿ ಮಾಹಿತಿ ನೀಡಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ. ನಂತರ ಅವರನ್ನು ತುರ್ತು ವಾಹನದ ಮೂಲಕ ನೆರೆಯ ಕಾಂಕೇರ್ ಜಿಲ್ಲೆಯ ಚರಮಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆಕೆಯ ಸ್ಥಿತಿ ಗಂಭೀರವಾಗಿರುವುದರಿಂದ, ನಂತರ ಅವರನ್ನು ಧಮ್ತಾರಿ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



