Resign

ಬರ ಪೀಡಿತ ಪಟ್ಟಿಯಿಂದ ಇಂಡಿ ಕೈಬಿಟ್ಟಿದ್ದಕ್ಕೆ ಬೇಸರ: ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ
ಬರಗಾಲ ಪೀಡಿತ ಪಟ್ಟಿಯಿಂದ ವಿಜಯಪುರ ಜಿಲ್ಲೆಯ ಇಂಡಿ, ಚಡಚಣ ತಾಲೂಕು ಕೈಬಿಟ್ಟ ಹಿನ್ನೆಲೆಯಲ್ಲಿ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ವಾಲ್ಮೀಕಿ ನಿಗಮ ಹಗರಣ: ರಾಜೀನಾಮೆಗೆ ಸಚಿವ ನಾಗೇಂದ್ರ ಮುಂದು? ಇಂದು ಹೈಕಮಾಂಡ್ ಜೊತೆ ಡಿಕೆಶಿ ಚರ್ಚೆ ಸಾಧ್ಯತೆ..!
ಈ ವಿಚಾರವಾಗಿ ಡಿಕೆ ಶಿವಕುಮಾರ್ ಅವರು ಗುರುವಾರ ನವದೆಹಲಿಗೆ ತೆರಳಲಿದ್ದು, ಕಾಂಗ್ರೆಸ್ ಹೈಕಮಾಂಡ್ ನಾಯಕರೊಂದಿಗೆ ಚರ್ಚಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್ ಚಂದ್ರಶೇಖರನ್ ರಾಜೀನಾಮೆ; 2027 ಫೆಬ್ರವರಿ 20ಕ್ಕೆ ಅಧಿಕಾರಾವಧಿ ಅಂತ್ಯ
ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್. ಚಂದ್ರಶೇಖರನ್ ರಾಜೀನಾಮೆ ನೀಡಿದ್ದಾರೆ. ತಮ್ಮ ಹಾಲಿ ಅಧಿಕಾರಾವಧಿ 2027ರ ಫೆಬ್ರವರಿ 20ರಂದು ಕೊನೆಗೊಂಡ ಬಳಿಕ ಮರುನೇಮಕ ಬಯಸುವುದಿಲ್ಲ ಎಂದು ಬುಧವಾರ ತಿಳಿಸಿದ್ದಾರೆ.

CM ಡಿ.ಕೆ ಶಿವಕುಮಾರ್ ಮನೆಯಿಂದ ಸಿಟ್ಟಿನಿಂದಲೇ ಹೊರ ನಡೆದ ಬಸವರಾಜ್ ಹೊರಟ್ಟಿ!
ಸಿಎಂ ಡಿಕೆ ಶಿವಕುಮಾರ್ ಅವರನ್ನು ಹೊರಟ್ಟಿ ಇಂದು ಮತ್ತೆ ಬೇಟಿಯಾಗಿದ್ದರು. 10 ನಿಮಿಷಗಳ ಕಾಲ ಸಿಎಂ ಜೊತೆ ಮಾತುಕತೆ ನಡೆಸಿದರು. ಅಸಮಾಧಾನದಿಂದಲೇ ಸಿಎಂ ಮನೆಯಿಂದ ಹೊರ ಬಂದರು.

ಉತ್ತರ ಕನ್ನಡಕ್ಕೆ ಸಿಗದ ಪ್ರಾತಿನಿಧ್ಯ: ಯುವ ಕಾಂಗ್ರೆಸ್ ನಾಯಕರ ರಾಜೀನಾಮೆ
ನಾಲ್ಕು ಜನ ಕಾಂಗ್ರೆಸ್ ಶಾಸಕರಿದ್ದರೂ ಯಾರೊಬ್ಬರಿಗೂ ಸಚಿವ ಸ್ಥಾನ ನೀಡದೇ ಹೈಕಮಾಂಡ್ ನಿರ್ಲಕ್ಷ್ಯ ಮಾಡಿದೆ. ಕಾರವಾರದ ಶಾಸಕ ಸತೀಶ್ ಸೈಲ್ ಅವರಿಗೆ ಸಚಿವ ಸ್ಥಾನ ನೀಡುತ್ತಾರೆ ಎಂಬ ಆಸೆಯಿತ್ತು.

'ನಮ್ಮಪ್ಪಂಗೆ CM ಸ್ಥಾನ ಸಿಗಲಿಲ್ಲ, ಅನ್ಯಾಯ ಆಗಿದೆ ಎಂದು ಒಮ್ಮೆಯಾದ್ರೂ ಹೇಳಿದ್ರಾ?; B ಫಾರಂಗಾಗಿ ಪಕ್ಷದ ಬಾಗಿಲು ಕಾಯ್ದ ದಿನಗಳನ್ನು ಮರೆಯಬೇಡಿ'
ಕೆಲವರು, ನಮ್ಮಿಂದಲೇ ಪಕ್ಷ ಇದೆ ಎಂಬ ರೀತಿಯ ಹೇಳಿಕೆ ನೀಡುತ್ತಿರುವುದನ್ನು ಉಲ್ಲೇಖಿಸಿದ ಪ್ರಿಯಾಂಕ್ ಖರ್ಗೆ, ಆರಂಭದಲ್ಲಿ ಪಕ್ಷದ ಟಿಕೆಟ್‌ಗಾಗಿ, ಬಿ-ಫಾರಂಗಾಗಿ ಪಕ್ಷದ ಕಚೇರಿಗೆ ಓಡಾಡಿದ್ದು ಎಲ್ಲರೂ ಎಂಬುದನ್ನು ಮರೆಯಬಾರದು.

'CM ಡಿ.ಕೆ ಶಿವಕುಮಾರ್ ಸೂಚನೆಯಿಂದ ಮನಸ್ಸಿಗೆ ತುಂಬಾ ನೋವಾಗಿದೆ, ಆದ್ರೂ...': ರಾಜೀನಾಮೆ ಬಗ್ಗೆ ಹೊರಟ್ಟಿ ಹೇಳಿದ್ದೇನು?
ಕಾಂಗ್ರೆಸ್ ಹೈಕಮಾಂಡ್ ಸಭಾಪತಿ ಸ್ಥಾನಕ್ಕೆ ಹೆಸರು ಪ್ರಕಟಿಸಿದ ಬೆನ್ನಲ್ಲೇ ಸಿಎಂ ಡಿಕೆ ಶಿವಕುಮಾರ್ ಅವರು ಮಂಗಳವಾರ ಬಸವರಾಜ ಹೊರಟ್ಟಿ ಅವರಿಗೆ ಕರೆ ಮಾಡಿ, ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚನೆ ನೀಡಿದ್ದಾರೆ.

ಅಧಿವೇಶನಕ್ಕೂ ಮುನ್ನ ಬಸವರಾಜ್ ಹೊರಟ್ಟಿಗೆ ಸರ್ಕಾರ ಶಾಕ್: ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚನೆ, ಸಂಘರ್ಷ ಫಿಕ್ಸ್..!
ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ತರುವ ಸಾಧ್ಯತೆ ಕುರಿತು ಪ್ರತಿಕ್ರಿಯಿಸಿದ ಅವರು, 1956ರಿಂದ ಇಲ್ಲಿಯವರೆಗೆ ಯಾವುದೇ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ ಉದಾಹರಣೆಯೇ ಇಲ್ಲ. ಎಲ್ಲ ಸಭಾಪತಿಗಳೂ ತಮ್ಮ ಪೂರ್ಣ ಅವಧಿಯನ್ನು ಮುಗಿಸಿದ್ದಾರೆ.

BJPಗೆ ಹುದ್ದೆಗಿಂತ ವಿದ್ಯಾರ್ಥಿಗಳ ಭವಿಷ್ಯ ಮುಖ್ಯ: ಪ್ರಧಾನ್ ರಾಜೀನಾಮೆ ನಿರ್ಧಾರ ಸಮರ್ಥಿಸಿದ ಅಮಿತ್ ಶಾ
ಮೋದಿ ಸರ್ಕಾರ ದೇಶದ ಯುವಜನರ ಭಾವನೆಗಳನ್ನು ಗೌರವಿಸುತ್ತದೆ. ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಅಗತ್ಯ ಸುಧಾರಣೆಗಳನ್ನು ಜಾರಿಗೆ ತರಲು ಬದ್ಧವಾಗಿದೆ. ಬಿಜೆಪಿಗೆ ರಾಷ್ಟ್ರ, ನಮ್ಮ ಯುವಜನತೆ ಮತ್ತು ವಿದ್ಯಾರ್ಥಿಗಳು ಯಾವುದೇ ಹುದ್ದೆಗಿಂತ ಹೆಚ್ಚಿನ ಮಹತ್ವ ಹೊಂದಿದ್ದಾರೆ.

