ರಾಜ್ಯ

CM ಡಿ.ಕೆ ಶಿವಕುಮಾರ್ ಮನೆಯಿಂದ ಸಿಟ್ಟಿನಿಂದಲೇ ಹೊರ ನಡೆದ ಬಸವರಾಜ್ ಹೊರಟ್ಟಿ!

ಸಿಎಂ ಡಿಕೆ ಶಿವಕುಮಾರ್ ಅವರನ್ನು ಹೊರಟ್ಟಿ ಇಂದು ಮತ್ತೆ ಬೇಟಿಯಾಗಿದ್ದರು. 10 ನಿಮಿಷಗಳ ಕಾಲ ಸಿಎಂ ಜೊತೆ ಮಾತುಕತೆ ನಡೆಸಿದರು. ಅಸಮಾಧಾನದಿಂದಲೇ ಸಿಎಂ ಮನೆಯಿಂದ ಹೊರ ಬಂದರು.

CM ಡಿ.ಕೆ ಶಿವಕುಮಾರ್ ಮನೆಯಿಂದ ಸಿಟ್ಟಿನಿಂದಲೇ ಹೊರ ನಡೆದ ಬಸವರಾಜ್ ಹೊರಟ್ಟಿ!
ಸಿಎಂ ಭೇಟಿಯಾದ ಬಸವರಾಜ ಹೊರಟ್ಟಿ
Published On :

ಬೆಂಗಳೂರು: ಎರಡನೇ ಬಾರಿಗೆ ಡಿ.ಕೆ.ಶಿವಕುಮಾರ್ ಭೇಟಿಯಾದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನದಿಂದಲೇ ಹೊರನಡೆದಿದ್ದಾರೆ.

ಸಿಎಂ ಡಿಕೆ ಶಿವಕುಮಾರ್ ಅವರನ್ನು ಹೊರಟ್ಟಿ ಇಂದು ಮತ್ತೆ ಬೇಟಿಯಾಗಿದ್ದರು. 10 ನಿಮಿಷಗಳ ಕಾಲ ಸಿಎಂ ಜೊತೆ ಮಾತುಕತೆ ನಡೆಸಿದರು. ಅಸಮಾಧಾನದಿಂದಲೇ ಸಿಎಂ ಮನೆಯಿಂದ ಹೊರ ಬಂದರು.

ಹೊರಟ್ಟಿ ಅವರನ್ನ ಬೀಳ್ಕೊಡಲು ಗೇಟ್ ವರೆಗೂ ಮುಖ್ಯಮಂತ್ರಿಗಳು ಹೊರಬಂದಿದ್ದರು. ಈ ವೇಳೆ ಸಿಟ್ಟಲ್ಲಿದ್ದ ಹೊರಟ್ಟಿ ತಮ್ಮ ಸಿಬ್ಬಂದಿಗೆ, ‘ಏ.. ಕಾರು ಎಲ್ಲಿದೆ’ ಎಂದು ಕೇಳಿದರು. ಸಿಎಂ ಶಿವಕುಮಾರ್ ಅವರನ್ನು ಹಿಂದೆ ತಿರುಗಿಯೂ ನೋಡದೆ ಕಾರಲ್ಲಿ ಹೊರಟರು.

ನಂತರ ಖಾಸಗಿ ಸುದ್ದಿ ಚಾನೆಲ್ ಜೊತೆ ಮಾತನಾಡಿದ ಹೊರಟ್ಟಿ ಅವಿಶ್ವಾಸ ನಿರ್ಣಯ ಮಂಡಿಸುವ ಪ್ರಮೆಯವೇ ಬರುವುದಿಲ್ಲ, ನಾನು ಆಗಸ್ಟ್ 14 ರಂದು ರಾಜಿನಾಮೆ ನೀಡುತ್ತೇನೆ ಎಂದು ಸ್ಪಷ್ಟ ಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.