ರಾಜ್ಯ

'ಗ್ಯಾರಂಟಿ ಕಾರಣಕ್ಕೆ ಹಳ್ಳಿಗಳಲ್ಲಿ ಹತ್ತಿ ಬಿಡಿಸಲು ಕೂಲಿಗಳೇ ಸಿಗುತ್ತಿಲ್ಲ; ಯುವನಿಧಿಯಿಂದ ಯುವಕರು ಕಟ್ಟೆ ಮೇಲೆ ಕೂತು ಸೋಮಾರಿಗಳಾಗ್ತಿದ್ದಾರೆ'

ಪ್ರಧಾನಿ ನರೇಂದ್ರ ಮೋದಿ ಸಹ ನಮ್ಮ ಗ್ಯಾರಂಟಿಗಳನ್ನು ಅಪಹಾಸ್ಯ ಮಾಡಿದ್ದರು, ನಂತರ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಗ್ಯಾರಂಟಿಯಂತದ್ದೇ ಯೋಜನೆಗಳನ್ನು ಜಾರಿಗೆ ತಂದರು ಎಂದರು.

'ಗ್ಯಾರಂಟಿ ಕಾರಣಕ್ಕೆ ಹಳ್ಳಿಗಳಲ್ಲಿ ಹತ್ತಿ ಬಿಡಿಸಲು ಕೂಲಿಗಳೇ ಸಿಗುತ್ತಿಲ್ಲ; ಯುವನಿಧಿಯಿಂದ ಯುವಕರು ಕಟ್ಟೆ ಮೇಲೆ ಕೂತು ಸೋಮಾರಿಗಳಾಗ್ತಿದ್ದಾರೆ'
ಬಸವರಾಜ ಹೊರಟ್ಟಿ
Published On :

ಬೆಂಗಳೂರು: ಗ್ಯಾರಂಟಿ ಯೋಜನೆಯ ಕಾರಣಕ್ಕೆ ಹಳ್ಳಿಗಳಲ್ಲಿ ಹತ್ತಿ ಬಿಡಿಸಲು ಕೂಲಿಗಳೇ ಸಿಗುತ್ತಿಲ್ಲ ಎಂದು ಬಿಜೆಪಿಯ ಬಸವರಾಜ ಹೊರಟ್ಟಿ ಅವರು ಹೇಳಿದ ಮಾತು ವಿಧಾನ ಪರಿಷತ್ತಿನಲ್ಲಿ ತೀವ್ರ ಜಟಾಪಟಿಗೆ ಕಾರಣವಾಯಿತು.

ಪರಿಷತ್ತಿನಲ್ಲಿ ಗುರುವಾರದ ಕಲಾಪದ ವೇಳೆ ಮಾತನಾಡಿದ ಅವರು, ನಾನು 80 ಹಸು ಸಾಕಿದ್ಧೇನೆ, 10 ಎಕರೆಯಲ್ಲಿ ಹುಲ್ಲು ಬೆಳೆಯುತ್ತಿದ್ದೇನೆ. ನಿತ್ಯವೂ ಡೈರಿಗೆ ಹಾಲು ಹಾಕುತ್ತೇನೆ. ಆದರೆ, ಗ್ಯಾರಂಟಿ ಆರಂಭವಾದಾಗಿನಿಂದ ಹತ್ತಿ ಬಿಡಿಸಲು, ದನಗಳಿಗೆ ನೀರು ಕುಡಿಸಲೂ ಜನ ಸಿಗುತ್ತಿಲ್ಲ. ಯುವಕರಿಗೆ ಯುವನಿಧಿ ನೀಡಿ ಮನೆಯಲ್ಲಿ ಕೂರಿಸಿದ್ದೀರಿ. ಅವರೆಲ್ಲಾ ಕಟ್ಟೆಯ ಮೇಲೆ ಕುಳಿತು ಕಾಲ ಕಳೆಯುತ್ತಾರೆ ಎಂದರು.

ಹೊರಟ್ಟಿ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್‌ನ ನಾಗರಾಜ್‌ ಯಾದವ್, ಪ್ರತಿ ಕುಟುಂಬದ ಯಜಮಾನಿಗೆ ₹2,000 ಕೊಡುತ್ತಿರುವುದು ಭಿಕ್ಷೆಯಲ್ಲ. ಅದು ಅವರ ಹಕ್ಕು. ಅದನ್ನು ಅಪಹಾಸ್ಯ ಮಾಡಬೇಡಿ.

ಪ್ರಧಾನಿ ನರೇಂದ್ರ ಮೋದಿ ಸಹ ನಮ್ಮ ಗ್ಯಾರಂಟಿಗಳನ್ನು ಅಪಹಾಸ್ಯ ಮಾಡಿದ್ದರು, ನಂತರ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಗ್ಯಾರಂಟಿಯಂತದ್ದೇ ಯೋಜನೆಗಳನ್ನು ಜಾರಿಗೆ ತಂದರು ಎಂದರು.

ನಿಮ್ಮ ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಿಸುವ ಅಗತ್ಯ ಇದೆ. ಬಡ ಹೆಣ್ಣುಮಕ್ಕಳಿಗೂ ಬಸ್‌ನಲ್ಲಿ ಉಚಿತ ಪ್ರಯಾಣ, ಐಎಎಸ್‌ ಅಧಿಕಾರಿಗೂ ಉಚಿತ ಪ್ರಯಾಣ ಎಂದರೆ ಹೇಗೆ? ಇದನ್ನೆಲ್ಲಾ ಪರಿಷ್ಕರಿಸಿಬೇಕು. ಹಲವು ಸಚಿವರೂ ಇದೇ ಮಾತು ಹೇಳಿದ್ದಾರೆ

ಉಚಿತ–ಉಚಿತ ಎಂದರೆ ಎಲ್ಲರೂ ಅರ್ಜಿ ಹಾಕುತ್ತಾರೆ. ಗ್ಯಾರಂಟಿಗಳನ್ನು ರದ್ದುಪಡಿಸಿ ಎಂದು ನಾನು ಹೇಳುತ್ತಿಲ್ಲ. ಅವುಗಳಲ್ಲಿ ಇರುವ ನ್ಯೂನತೆಗಳನ್ನು ಸರಿಪಡಿಸಿ ಎಂದು ಬಸವರಾಜ ಹೊರಟ್ಟಿ ಹೇಳಿದರು.

ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯದಲ್ಲಿ ನಮ್ಮ ಗ್ಯಾರಂಟಿಗಳನ್ನೇ ಅನುಸರಿಸಲಾಗುತ್ತಿದೆ. ಜನರಿಗೆ ಗ್ಯಾರಂಟಿಗಳು ಬೇಡ ಎಂದಾದರೆ ಬಿಜೆಪಿಯವರು ನಿಮ್ಮ ಪಕ್ಷದಿಂದ ಒಂದು ನಿರ್ಧಾರಕ್ಕೆ ಬಂದು ರಾಜ್ಯದ ಜನತೆಗೆ ತಿಳಿಸಿ ಎಂದು ಕಾಶಪ್ಪನವರ್ ಕಿಚಾಯಿಸಿದರು.

ಸಚಿವರ ಮಾತಿಗೆ ಆಕ್ಷೇಪಿಸಿದ ಬಸವರಾಜ ಹೊರಟ್ಟಿ, ಗ್ಯಾರಂಟಿಗಳನ್ನು ನಾವು ನಿಲ್ಲಿಸುವಂತೆ ಹೇಳುತ್ತಿಲ್ಲ. ಅವು ಯಾರಿಗೆ ತಲುಪುತ್ತಿವೆ ಎಂಬುದನ್ನು ವಿಚಾರ ಮಾಡಬೇಕಾಗಿದೆ. ತಪ್ಪು ತಪ್ಪಾಗಿ ಅನರ್ಹರಿಗೆ ಗ್ಯಾರಂಟಿ ಕೊಟ್ಟರೆ ಸರಕಾರಕ್ಕೆ ಆರ್ಥಿಕ ಹೊರೆಯಾಗುತ್ತದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.