rename

ವಿವಿ ಪುರಂ ಫುಡ್ ಸ್ಟ್ರೀಟ್'ಗೆ ಸ್ಮಾರ್ಟ್ ಟಚ್: ಮರುನಾಮಕರಣಕ್ಕೆ ಸಾರ್ವಜನಿಕರಿಂದ ಸಲಹೆ ಕೇಳಿದ ಬಿಬಿಎಂಪಿ
ರೂ.6 ಕೋಟಿ ವೆಚ್ಚದಲ್ಲಿ ವಿವಿ ಪುರದ ಫುಡ್ ಸ್ಟ್ರೀಟ್ ಅಭಿವೃದ್ಧಿಪಡಿಸಲಾಗುತ್ತಿದ್ದು, ನಾಲ್ಕು ತಿಂಗಳುಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ನೀಡಲು ಬಿಬಿಎಂಪಿ ಮುಂದಾಗಿದೆ.

ರಾಜ್ಯದ ದೇವಾಲಯಗಳಲ್ಲಿ ಸೇವಾ ಕಾರ್ಯಗಳಿಗೆ ಬಳಸುವ ಹೆಸರು ಬದಲಾವಣೆಗೆ ನಿರ್ಧಾರ: ಶಶಿಕಲಾ ಜೊಲ್ಲೆ
ಸಲಾಂ ಆರತಿ” ಮತ್ತು “ಸಲಾಂ ಮಂಗಳಾರತಿ” ಪೂಜಾಕಾರ್ಯಗಳ ಹೆಸರನ್ನು ಬದಲಾಯಿಸುವ ಬಗ್ಗೆ ವಿಸ್ತ್ರತವಾಗಿ ಚರ್ಚಿಸಲಾಗಿದೆ. ಈ ಪೂಜಾಕಾರ್ಯಗಳ ಹೆಸರನ್ನು ಸ್ಥಳೀಯ ಭಾಷೆಯ ಪದಗಳಿಗೆ ಬದಲಿಸುವ ಬಗ್ಗೆ ಮಾತ್ರ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಧಾರ್ಮಿಕ , ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

ದೆಹಲಿ ಏಮ್ಸ್ ಮರುನಾಮಕರಣ ವಿರೋಧಿಸಿ ಕೇಂದ್ರ ಸಚಿವರಿಗೆ ಪತ್ರ ಬರೆದ ಸಿಬ್ಬಂದಿ
ದೆಹಲಿಯಲ್ಲಿರುವ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್(ಏಮ್ಸ್)ಗೆ ಹೊಸ ಹೆಸರಿಡುವ ಪ್ರಸ್ತಾಪದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಏಮ್ಸ್ ನ ಫ್ಯಾಕಲ್ಟಿ ಅಸೋಸಿಯೇಷನ್, ಈ ಸಂಬಂಧ ಕೇಂದ್ರ ಆರೋಗ್ಯ ಸಚಿವ ಮನ್ಸುಖ್...

ವಸಂತಪುರಕ್ಕೆ ರೆಬೆಲ್ ಸ್ಟಾರ್ ಅಂಬರೀಷ್ ಹೆಸರಿಡಲು ಬಿಬಿಎಂಪಿ ಚಿಂತನೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಸಚಿವ ಹಾಗೂ ನಟ ರೆಬೆಲ್ ಸ್ಟಾರ್ ಅಂಬರೀಷ್ ಅವರ ಹೆಸರಿಡಲು ಚಿಂತನೆ ನಡೆಸಿದೆ....

ಪಾದಪೂಜೆಗಾಗಿ ಆಗಮಿಸಿದ ಶ್ರೀಗಳಿಂದ ಗ್ರಾಮದ ಹೆಸರು 'ಶಿವಕುಮಾರಪುರ'ವಾಗಿ ಬದಲಾಯಿತು!
ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರ ಉದಾತ್ತ ಕಾರ್ಯಗಳಿಂದ ಸ್ಫೂರ್ತಿ ಪಡೆದ ಈ ಗ್ರಾಮವು 2008ರಲ್ಲಿ ತಮ್ಮ ಹಳ್ಳಿಗೆ ...

ಬುಲಂದ್ಶಹರ್ ಹಿಂಸಾಚಾರ: ರಸ್ತೆ, ಕಾಲೇಜಿಗೆ ಮೃತ ಇನ್ಸ್ಪೆಕ್ಟರ್ ಹೆಸರು- ಯೋಗಿ ಆದಿತ್ಯನಾಥ್
ಬುಲಂದ್ ಶಹರ್ ಹಿಂಸಾಚಾರ ಪ್ರಕರಣದಲ್ಲಿ ಮೃತಪಟ್ಟ ಪೊಲೀಸ್ ಇನ್ಸ್ ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಅವರ ಹೆಸರನ್ನು ರಸ್ತೆಗೆ ಹಾಗೂ ಕಾಲೇಜಿಗೆ ಇಡುವುದಾಗಿ ...

ಅಗ್ರಾಕ್ಕೆ 'ಅಗ್ರಾವಾನ್' ಹೆಸರಿಡುವಂತೆ ಬಿಜೆಪಿ ಶಾಸಕನಿಂದ ಉತ್ತರ ಪ್ರದೇಶ ಮುಖ್ಯಮಂತ್ರಿಗೆ ಪತ್ರ
ವಿಶ್ವ ವಿಖ್ಯಾತ ತಾಜ್ ಮಹಲ್ ಇರುವ ಅಗ್ರಾವನ್ನು ಅಗ್ರಾವಾನ್ ಎಂದು ಹೆಸರು ಬದಲಾವಣೆ ಮಾಡುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಬಿಜೆಪಿ ಶಾಸಕರೊಬ್ಬರು ಪತ್ರ ಬರೆದಿದ್ದಾರೆ.

ಅಹಮದಾಬಾದ್‌ಗೆ ಕರ್ಣವತಿ ಹೆಸರಿಡಲು ಸಿದ್ಧ: ಗುಜರಾತ್ ಸರ್ಕಾರ
ಗುಜರಾತಿನ ಅಹಮದಾಬಾದ್ ನಗರವನ್ನು ಕರ್ಣವತಿ ಎಂದು ಹೆಸರು ಬದಲಾವಣೆ ಮಾಡಲು ಸಿದ್ಧವಿರುವುದಾಗಿ ಗುಜರಾತ್ ಸರ್ಕಾರ ಹೇಳಿದೆ.

ರಾಮ್ ಲೀಲಾ ಮೈದಾನಕ್ಕೆ ವಾಜಪೇಯಿ ಹೆಸರಿಡುವ ಪ್ರಸ್ತಾವನೆ ಇಲ್ಲ: ಕೇಜ್ರಿವಾಲ್
ರಾಮ್ ಲೀಲಾ ಮೈದಾನಕ್ಕೆ ಮಾಜಿ ಪ್ರಧಾನಿ ವಾಜಪೇಯಿ ಹೆಸರು ಪ್ರಸ್ತಾವ ವಿಚಾರದ ಬಗ್ಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಧಾನಿ ನರೇಂದ್ರಮೋದಿ ವಾಗ್ದಾಳಿ ನಡೆಸಿದ ನಂತರ ಅಂತಹ ಪ್ರಸ್ತಾವವಿಲ್ಲಾ ಎಂದು ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ಹೇಳಿಕೆ ನೀಡಿದೆ.

