ರಾಜ್ಯ

ವಸಂತಪುರಕ್ಕೆ ರೆಬೆಲ್ ಸ್ಟಾರ್ ಅಂಬರೀಷ್ ಹೆಸರಿಡಲು ಬಿಬಿಎಂಪಿ ಚಿಂತನೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಸಚಿವ ಹಾಗೂ ನಟ ರೆಬೆಲ್ ಸ್ಟಾರ್ ಅಂಬರೀಷ್ ಅವರ ಹೆಸರಿಡಲು ಚಿಂತನೆ ನಡೆಸಿದೆ....

ವಸಂತಪುರಕ್ಕೆ ರೆಬೆಲ್ ಸ್ಟಾರ್ ಅಂಬರೀಷ್ ಹೆಸರಿಡಲು ಬಿಬಿಎಂಪಿ  ಚಿಂತನೆ
ಅಂಬರೀಷ್
Published On :
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಸಚಿವ ಹಾಗೂ ನಟ ರೆಬೆಲ್ ಸ್ಟಾರ್ ಅಂಬರೀಷ್ ಅವರ ಹೆಸರಿಡಲು ಚಿಂತನೆ ನಡೆಸಿದೆ.
ಬೊಮ್ಮನಹಳ್ಳಿ ಸಮೀಪವಿರುವ 197ನೇ ವಾರ್ಡ್ ಆದಿರುವ ವಸಂತನಗರಕ್ಕೆ ಅಂಬರೀಷ್ ಹೆಸರಿಡಲು ಯೋಜನೆ ನಡೆಸುತ್ತಿದೆ.
ವಸಂತಪುರದ ಹೆಸರು ಬದಲಾಯಿಸಲು ಬಿಬಿಎಂಪಿ ನೋಟಿಫಿಕೇಷನ್ ನೀಡಿದ್ದು, ಸಾರ್ವಜನಿಕರು ಹೆಸರು ಬದಲಾಯಿಸುವ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಾಗೂ ಸಲಹೆಗಳನ್ನು ಸೂಚಿಸಲು 15 ದಿನಗಳ ಕಾಲವಕಾಶ ನೀಡಲಾಗಿದೆ,. 
ಆದರೆ ಹೆಸರು ಬದಲಾವಣೆಗೆ ವಸಂತಪುರ ವನ್ನೇ ಏಕೆ ಅಯ್ಕೆ ಮಾಡಿಕೊಂಡಿದೆ ಎಂಬ ಬಗ್ಗೆ ಬಿಬಿಎಂಪಿ ಯಾವುದೇ ಸ್ಪಷ್ಟನೆ ನೀಡಿಲ್ಲ,  ಬೆಂಗಳೂರು ದಕ್ಷಿಣ ಅಥವಾ ಜೆ ಪಿ ನಗರವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿತ್ತು, ಏಕೆಂದರೇ ಅಂಬರೀಷ್ ಅವರು ಜೆ.ಪಿ ನಗರದಲ್ಲಿ ವಾಸವಾಗಿದ್ದರು ಎಂಬ ಮಾತುಗಳು ಕೇಳಿ ಬರುತ್ತಿವೆ.
ಆದರೆ ಶೋಭಾ ಗೌಡ ವಸಂತಪುರದ  ಕಾರ್ಪೋರೇಟರ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.