release date

'ರಕ್ತಾಕ್ಷ'ನಿಗೆ ವಿಜಯ್ ರಾಘವೇಂದ್ರ ಸಾಥ್: ಜುಲೈ 26ಕ್ಕೆ ಚಿತ್ರ ಬಿಡುಗಡೆ
ರೋಹಿತ್ ಈಗಾಗಲೇ ಮಾಡೆಲಿಂಗ್ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ರಕ್ತಾಕ್ಷ ಸಿನಿಮಾ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.

ಕಿರಣ್ ರಾಜ್ ನಟನೆಯ 'ರಾನಿ' ಬಿಡುಗಡೆಗೆ ಮುಹೂರ್ತ ನಿಗದಿ
ಈ ಹಿಂದೆ ನೀವು ನೋಡಿರದ ಕಿರಣ್ ರಾಜ್ ಅನ್ನು ‘ರಾನಿ’ ಸಿನಿಮಾದಲ್ಲಿ ನೋಡಬಹುದು. ಸಿನಿಮಾದಲ್ಲಿ ಒಟ್ಟು ಆರು ಆಕ್ಷನ್ ಸೀಕ್ವೆನ್ಸ್ ಇವೆ. ಕೌಟುಂಬಿಕ ಸೆಂಟಿಮೆಂಟ್ ಸಹ ಸ್ವಲ್ಪ ಹೆಚ್ಚಾಗಿಯೇ ಇದೆ ಎಂದುಕಿರಣ್ ರಾಜ್ ತಿಳಿಸಿದ್ದಾರೆ.

ಆಂಬುಲೆನ್ಸ್ ಡ್ರೈವರ್ ಕಹಾನಿ: ಬಿಡುಗಡೆಗೆ ಸಿದ್ಧವಾಯ್ತು 'ನಾಟ್ ಔಟ್'!
ಅಜಯ ಪೃಥ್ವಿ, ರಚನಾ ಇಂದರ್, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ‘ನಾಟ್ ಔಟ್’ ಸಿನಿಮಾದಲ್ಲಿ ನಟಿಸಿದ್ದು ಜುಲೈ 19ರಂದು ರಿಲೀಸ್ ಆಗಲಿದೆ.

ಅಲ್ಲು ಅರ್ಜುನ್ ಅಭಿಮಾನಿಗಳಿಗೆ ತುಸು ಬೇಸರ: ಪುಷ್ಪ-2 ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ!
ಟಾಲಿವುಡ್ ನಟ ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಪುಷ್ಪ –2’ The ruler ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. 2024 ರ ಡಿಸೆಂಬರ್ 6ರಂದು ಎಲ್ಲಾ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಜುಲೈ 2 ನೇ ವಾರದಲ್ಲಿ 'ಗೌರಿ' ಚಿತ್ರ ಬಿಡುಗಡೆ: ನಿರ್ದೇಶಕ ಇಂದ್ರಜಿತ್ ಲಂಕೇಶ್
ಇಂದ್ರಜಿತ್ ಲಂಕೇಶ್ ಅವರ ಪುತ್ರ ನಟ ಸಮರ್ಜಿತ್ ಹಾಗೂ ಸಾನ್ಯಾ ಅಯ್ಯರ್ ಅಭಿನಯದ 'ಗೌರಿ' ಚಿತ್ರ ಜುಲೈ ತಿಂಗಳಲ್ಲಿ ರಾಜ್ಯಾದ್ಯಂತ ತೆರೆಗೆ ಬರಲಿದೆ.

ಮಹಿಳೆಯರೇ ಸೇರಿ ಮಾಡಿರುವ 'ಆಚಾರ್ & ಕೋ' ರಿಲೀಸ್ ಡೇಟ್ ಫಿಕ್ಸ್
ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್ಸ್ ನಿರ್ಮಿಸಿರುವ ಆಚಾರ್ ಅಂಡ್ ಕೋ ಬಿಡುಗಡೆಗೆ ಸಜ್ಜಾಗಿದೆ. ಸಿಂಧು ಶ್ರೀನಿವಾಸ ಮೂರ್ತಿ ಅವರು ಬರಹಗಾರರಾಗಿ, ನಿರ್ದೇಶಕರಾಗಿ ಮತ್ತು ನಾಯಕಿಯಾಗಿರುವ ಈ ಚಿತ್ರ ಜುಲೈ 28 ರಂದು ಬಿಡುಗಡೆಯಾಗಲಿದೆ. ಈ ಮೂಲಕ ಹೃದಯ ಸ್ಪರ್ಶಿ ಕಥೆಯನ್ನು ಪ್ರೇಕ್ಷಕರೆದುರು ಚಿತ್ರತಂಡ ತರುತ್ತಿದೆ.

ಮಾಸಾಂತ್ಯಕ್ಕೆ ರಾಗಿಣಿ ದ್ವಿವೇದಿಯ ದ್ವಿಭಾಷಾ ಚಿತ್ರ 'ಶೀಲಾ' ಬಿಡುಗಡೆ
ರಾಗಿಣಿ ದ್ವಿವೇದಿ ದ್ವಿಭಾಷೆಗಳಲ್ಲಿ ನಟಿಸಿರುವ 'ಶೀಲಾ' ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಬಾಲು ನಾರಾಯಣನ್ ನಿರ್ದೇಶನದ ಮತ್ತು ಡಿಎಂ ಪಿಳ್ಳೈ ನಿರ್ಮಿಸಿರುವ ಈ ಚಿತ್ರವು ಈ ತಿಂಗಳ ಅಂತ್ಯದ ವೇಳೆಗೆ ತೆರೆಗೆ ಬರಲಿದೆ. ಮಾಧ್ಯಮ ಸಂವಾದದಲ್ಲಿ ರಾಗಿಣಿ ಶೀಲಾ ಪಾತ್ರದ ಒಳನೋಟಗಳ ಬಗ್ಗೆ ಹಂಚಿಕೊಂಡರು.

'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ರಿಲೀಸ್ ಡೇಟ್ ಫಿಕ್ಸ್!
ಸೆಟ್ಟೇರಿದ ದಿನದಿಂದಲೂ ವಿಭಿನ್ನ ರೀತಿಯಲ್ಲಿ ಸಾಕಷ್ಟು ಸೌಂಡ್ ಮಾಡುತ್ತಿರುವ ನಿತಿನ್ ಕೃಷ್ಣಮೂರ್ತಿ ನಿರ್ದೇಶನದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ರಿಲೀಸ್ ಡೇಟ್ ಫಿಕ್ಸ್ ಆಗಿದೆ.

ಕಂಗನಾ ಅಭಿನಯದ ಬಹುನಿರೀಕ್ಷಿತ 'ಎಮರ್ಜೆನ್ಸಿ' ರಿಲೀಸ್ ಡೇಟ್ ಫಿಕ್ಸ್, ಟೀಸರ್ ಔಟ್
ಕಂಗನಾ ರಣಾವತ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಎಮರ್ಜೆನ್ಸಿ' ಬಿಡುಗಡೆ ದಿನಾಂಕ ಪ್ರಕಟವಾಗಿದೆ. ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಜೀವನದ ಸುತ್ತ ಸುತ್ತುವ ಈ ಸಿನಿಮಾ ಇದೇ ವರ್ಷದ ನವೆಂಬರ್ 24 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

