Rangayana Raghu

ರಂಗಾಯಣ ರಘು ಅವರಿಂದಲೇ 'ರಂಗಸಮುದ್ರ' ಸಾಧ್ಯವಾಯಿತು: ನಿರ್ದೇಶಕ ರಾಜ್‌ಕುಮಾರ್ ಅಸ್ಕಿ
ರಾಜ್‌ಕುಮಾರ್ ಅಸ್ಕಿ ನಿರ್ದೇಶನದ ‘ರಂಗಸಮುದ್ರ’ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ರಾಘವೇಂದ್ರ ರಾಜ್‌ಕುಮಾರ್ ಬುಧವಾರ ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಿದರು. ರಂಗಾಯಣ ರಘು ಅವರು ಮಹತ್ವದ ಪಾತ್ರವನ್ನು ನಿರ್ವಹಿಸಿರುವ ಈ ಚಿತ್ರವು ಜನವರಿ 12ರಂದು ತೆರೆಗೆ ಬರಲಿದೆ.

ಜಸ್ಟ್ ಪಾಸ್ ಚಿತ್ರದ ಪ್ರಮುಖ ಆಕರ್ಷಣೆಯೇ ನಟ 'ರಂಗಾಯಣ ರಘು' ಪಾತ್ರ; ನಿರ್ದೇಶಕರು ಹೇಳಿದ್ದಿಷ್ಟು...
ಶ್ರೀ ಮಹಾದೇವ್ ಅಭಿನಯದ, ಕೆಎಂ ರಘುನಾಥ್ ನಿರ್ದೇಶನದ 'ಜಸ್ಟ್ ಪಾಸ್' ಚಿತ್ರವು ಈ ವರ್ಷದ ಆರಂಭದಲ್ಲಿ ಬಿಡುಗಡೆಗೆ ಸಿದ್ಧವಾಗುತ್ತಿರುವುದಾಗಿ ಈ ಮೊದಲೇ ನಾವು ವರದಿ ಮಾಡಿದ್ದೆವು. ಈ ಚಿತ್ರದ ಮೂಲಕ ನಟ ರಂಗಾಯಣ ರಘು ಅವರು ಮೊದಲ ಬಾರಿಗೆ ಪ್ರಿನ್ಸಿಪಾಲ್ ಆಗಿ ಕಾಣಿಸಿಕೊಂಡಿದ್ದಾರೆ.

ನವೀನ್ ರೆಡ್ಡಿ ನಿರ್ದೇಶನದ, ರಂಗಾಯಣ ರಘು ಅಭಿನಯದ 'ಮೂರನೇ ಕೃಷ್ಣಪ್ಪ' ಚಿತ್ರ ಬಿಡುಗಡೆಗೆ ಸಿದ್ಧತೆ
ಅಕಿರ ಮತ್ತು Relax ಸತ್ಯ ಚಿತ್ರಗಳ ನಿರ್ದೇಶನಕ್ಕೆ ಹೆಸರುವಾಸಿಯಾಗಿರುವ ನವೀನ್ ರೆಡ್ಡಿ ಅವರು ತಮ್ಮ ಮೂರನೇ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಮೂರನೇ ಕೃಷ್ಣಪ್ಪ ಎಂಬ ಶೀರ್ಷಿಕೆಯಡಿ ರಂಗಾಯಣ ರಘು ಮತ್ತು ಸಂಪತ್ ಮೈತ್ರೇಯ ನಾಯಕರಾಗಿ ಮತ್ತು ಶ್ರೀಪ್ರಿಯಾ ನಾಯಕಿಯಾಗಿ ನಟಿಸಿದ್ದಾರೆ.

ರಂಗಾಯಣ ರಘು ನಟನೆಯ ‘ಅಜ್ಞಾತವಾಸಿ’ ಚಿತ್ರದ ಟೀಸರ್ ರಿಲೀಸ್
ಗುಲ್ಟು ಖ್ಯಾತಿಯ ನಿರ್ದೇಶಕ ಜನಾರ್ದನ್ ಚಿಕ್ಕಣ್ಣ ಹಾಗೂ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಖ್ಯಾತಿಯ ನಿರ್ದೇಶಕ ಹೇಮಂತ್ ರಾವ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ‘ಅಜ್ಞಾತವಾಸಿ' ಚಿತ್ರದ ಟೀಸರ್ ಶುಕ್ರವಾರ ಬಿಡುಗಡೆಯಾಗಿದೆ.

ಭರಪೂರ ಮನರಂಜನೆ ಗ್ಯಾರೆಂಟಿ ನೀಡುವ 'ಫ್ಯಾಮಿಲಿ ಪ್ಯಾಕ್' ಸಿನಿಮಾ ಟ್ರೇಲರ್ ಬಿಡುಗಡೆ
'ಸಂಕಷ್ಟಕರ ಗಣಪತಿ' ಸಿನಿಮಾ ಬಳಿಕ ಮತ್ತೆ ಒಂದಾಗಿರುವ ನಿರ್ದೇಶಕ ಅರ್ಜುನ್ ಕುಮಾರ್ ಮತ್ತು ನಟ ಲಿಖಿತ್ ಶೆಟ್ಟಿ, ಫ್ಯಾಮಿಲಿ ಪ್ಯಾಕ್ ಸಿನಿಮಾ ಮೂಲಕ ಕನ್ನಡ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ಕನ್ನಡಿಗರ ಕಣ್ಮಣಿ ಡಾ. ರಾಜಕುಮಾರ್ ಈ ಸಿನಿಮಾ ನೋಡಿದ್ದಿದ್ದರೆ ಬಡವ ರಾಸ್ಕಲ್ ಅಂದುಬಿಡೋರು: ಬಡವ ರಾಸ್ಕಲ್ ಚಿತ್ರವಿಮರ್ಶೆ
ಅಣ್ಣಾವ್ರು, ತಮ್ಮ ಸಿನಿಮಾಗಳಲ್ಲಿ ಕುಡುಕರು, ಸ್ಮೋಕ್ ಮಾಡುವವರು ಹಾಗೂ ಪೋಕರಿಗಳತ್ತ ಒಮ್ಮೆ ಮೇಲಿಂದ ಕೆಳಕ್ಕೆ ಕೆಂಗಣ್ಣು ಬೀರಿ 'ಬಡವ ರಾಸ್ಕಲ್' ಎಂದು ಗದರಿಸುತ್ತಿದ್ದರು. ಅದಕ್ಕೆ ತಕ್ಕನಾಗಿ ನಟಿಸಿರುವ ನಾಯಕ ನಟ ಧನಂಜಯ್, 'ಬಡವ ರಾಸ್ಕಲ್' ಪದಗುಚ್ಚಕ್ಕೆ ನ್ಯಾಯ ಒದಗಿಸಿದ್ದಾರೆ. ಈ ಸಿನಿಮಾ ಮೂಲಕ ಆ ಬೈಗುಳವೂ ಜೋಗುಳವಾಗಲಿದೆ.

'ಬಡವ ರಾಸ್ಕಲ್' ಸ್ನೇಹಿತರೇ ನಿರ್ಮಿಸಿದ ಪಕ್ಕಾ ಲೋಕಲ್ ಸಿನಿಮಾ: ಕೊರಿಯರ್ ಬಾಯ್ ನಿಂದ ನಿರ್ದೇಶಕ ಹುದ್ದೆಗೇರಿದ ಶಂಕರ್ ಗುರು
ವಾಸ್ತವಕ್ಕೆ ಹತ್ತಿರವಾಗಿರುವ ಬಡವ ರಾಸ್ಕಲ್ ಸಿನಿಮಾದ ಕಥೆ ಧನಂಜಯ್ ಅವರಿಗೆ ಹೇಳಿ ಮಾಡಿಸಿದಂತಿದೆ. ಕಲಾವಿದರಾದ ರಂಗಾಯಣ ರಘು ಮತ್ತು ತಾರಾ ಅದ್ಭುತ ಅಭಿನಯ ನೀಡಿದ್ದು, ಸಂಗೀತ ನಿರ್ದೇಶನ ಮಾಡಿರುವ ವಾಸುಕಿ ವೈಭವ್ ಮತ್ತು ಸಿನಿಮೆಟೊಗ್ರಾಫರ್ ಪ್ರೀತಾ ಜಯರಾಮ್ ಅವರ ಕೆಲಸವೂ ಸಿನಿಮಾ ಚೆನ್ನಾಗಿ ಮೂಡಿ ಬರಲು ಕಾರಣವಾಗಿದೆ.

'ಟಾಮ್ ಅಂಡ್ ಜೆರ್ರಿ' ಗಾಯಕ ಸಿದ್ ಶ್ರೀರಾಂ ಕನ್ನಡ ಹಾಡು ಇನ್ಸ್ಟಾಗ್ರಾಂನಲ್ಲಿ ಇನ್ಸ್ಟೆಂಟ್ ಹಿಟ್
ಇನ್ಸ್ಟಾಗ್ರಾಂನಲ್ಲಿ 10,000 ರೀಲ್ ಗಳಲ್ಲಿ ಪ್ರಕಟವಾದ ಕನ್ನಡದ ಮೊದಲ ಹಾಡು ಎನ್ನುವ ಶ್ರೇಯ 'ಹಾಯಾಗಿದೆ ಎದೆಯೊಳಗೆ'ಹಾಡಿಗೆ ಪ್ರಾಪ್ತವಾಗಿದೆ.

’ಗುಲ್ಟೂ’ ಒಂದು ಅಪರಾಧ ಮತ್ತು ಗೌಪ್ಯತೆಯ ಕಥೆ: ಜನಾರ್ಧನ್ ಚಿಕ್ಕಣ್ಣ
ಸ್ಯಾಂಡಲ್ ವುಡ್ ನ ಹೊಸ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಮುಂದಿನ ವಾರ ಬಿಡುಗಡೆಯಾಗಲಿರುವ ತಮ್ಮ ಚಿತ್ರ ’ಗುಲ್ಟೂ’ ಚಿತ್ರಕ್ಕಾಗಿ ಸೌಂಡ್ ಮಿಕ್ಸಿಂಗ್ ನಲ್ಲಿ ತೊಡಗಿದ್ದಾರೆ.

