'ಟಾಮ್ ಅಂಡ್ ಜೆರ್ರಿ' ಗಾಯಕ ಸಿದ್ ಶ್ರೀರಾಂ ಕನ್ನಡ ಹಾಡು ಇನ್ಸ್ಟಾಗ್ರಾಂನಲ್ಲಿ ಇನ್ಸ್ಟೆಂಟ್ ಹಿಟ್
ಇನ್ಸ್ಟಾಗ್ರಾಂನಲ್ಲಿ 10,000 ರೀಲ್ ಗಳಲ್ಲಿ ಪ್ರಕಟವಾದ ಕನ್ನಡದ ಮೊದಲ ಹಾಡು ಎನ್ನುವ ಶ್ರೇಯ 'ಹಾಯಾಗಿದೆ ಎದೆಯೊಳಗೆ'ಹಾಡಿಗೆ ಪ್ರಾಪ್ತವಾಗಿದೆ.

ಬೆಂಗಳೂರು: ಎಪ್ರಿಲ್ ನಲ್ಲಿ ಬಿಡುಗಡೆಯಾಗಿದ್ದ ಟಾಮ್ ಅಂಡ್ ಜೆರ್ರಿ ಸಿನಿಮಾದ 'ಹಾಯಾಗಿದೆ ಎದೆಯೊಳಗೆ' ಹಾಡು ಇನ್ಸ್ಟಾಗ್ರಾಂನಲ್ಲಿ 10,000 ರೀಲ್ ಗಳಲ್ಲಿ ಪ್ರಕಟವಾದ ಸಾಧನೆ ಮಾಡಿದೆ. ಈ ಸಾಧನೆ ಮಾಡಿದ ಕನ್ನಡದ ಮೊದಲ ಹಾಡು ಎನ್ನುವ ಶ್ರೇಯ 'ಹಾಯಾಗಿದೆ ಎದೆಯೊಳಗೆ'ಹಾಡಿಗೆ ಪ್ರಾಪ್ತವಾಗಿದೆ.
ತಮಿಳುನಾಡು ಮೂಲದ ಹೆಸರಾಂತ ಗಾಯಕ ಸಿದ್ ಶ್ರೀರಾಂ ಅವರು ಹಾಡಿರುವ ಮೊದಲ ಕನ್ನಡ ಹಾಡು ಇದು ಎನ್ನುವುದು ವಿಶೇಷ. ಈ ಹಾಡಿಗೆ ಸಂಗೀತ ನೀಡಿರುವವರು ಮ್ಯಾಥ್ಯೂಸ್ ಮನೋಹರ್.
ಟಾಮ್ ಅಂಡ್ ಜೆರ್ರಿ ಸಿನಿಮಾವನ್ನು ರಾಘವ್ ವಿನಯ್ ಶಿವಗಂಗೆ ನಿರ್ದೇಶಿಸುತ್ತಿದ್ದಾರೆ. ನಿಶ್ಚಿತ್ ಕೊರೊಡಿ ಮತ್ತು ಚೈತ್ರಾ ರಾವ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ. ಅವರಿಬ್ಬರೂ ಈ ಹಿಂದೆ ಗಂಟುಮೂಟೆ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು.
'ಹಾಯಾಗಿದೆ ಎದೆಯೊಳಗೆ' ಹಾಡನ್ನು ಕೇಳಿದ್ದ ನಟ ಪುನೀತ್ ರಾಜ್ ಕುಮಾರ್ ಟ್ವಿಟ್ಟರ್ ನಲ್ಲಿ ಮೆಚ್ಚುಗೆ ಸೂಚಿಸಿದ್ದರು. ಟಾಮ್ ಅಂಡ್ ಜೆರ್ರಿ ಸಿನಿಮಾ ನಿರ್ಮಾಣ ಪೂರ್ತಿಯಾಗಿದ್ದು ಸೆನ್ಸಾರ್ ಅನುಮತಿಗಾಗಿ ಕಾಯುತ್ತಿದೆ.
ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಸನಗಳ ಭರ್ತಿಗೆ ಸರ್ಕಾರ ಅನುಮತಿ ನೀಡಿದ ನಂತರ ಸಿನಿಮಾ ಬಿಡುಗಡೆಗೊಳಿಸುವ ಇರಾದೆ ಚಿತ್ರತಂಡದ್ದು. ಸಿನಿಮಾ ರಿದ್ದಿ ಸಿದ್ದಿ ಬ್ಯಾನರ್ ಅಡಿ ಮೂಡಿ ಬರುತ್ತಿದೆ. ಜೈ ಜಗದೀಶ್, ರಂಗಾಯಣ ರಘು, ಕಡ್ಡಿಪುಡಿ ಚಂದ್ರು, ಪದ್ಮಜಾ ರಾವ್ ಮತ್ತಿತರರು ತಾರಾಗಣದಲ್ಲಿದ್ದಾರೆ.
Related Article
ಶೂಟಿಂಗ್ ವೇಳೆ ತ್ರಿಷಾ ಕೃಷ್ಣನ್ ಎಡವಟ್ಟು: ತಮಿಳು ನಟಿಗೆ ಬಂಧನ ಭೀತಿ
ಶ್ರೀಮುರುಳಿ ನಟನೆಯ 'ಮದಗಜ' ಡಿಸೆಂಬರ್ ನಲ್ಲಿ ರಿಲೀಸ್
'ಲಂಕೆ' ನನ್ನ ಮೊದಲ ಚಿತ್ರವೆಂಬಂತಹ ಭಾವನೆ: ಕೃಷಿ ತಾಪಂಡ
'ಹೆಡ್ ಬುಷ್' ತಂಡಕ್ಕೆ ಬಾಲು ನಾಗೇಂದ್ರ -ಶೃತಿ ಹರಿಹರನ್ ಸೇರ್ಪಡೆ: ಸಿನಿಮಾ ಬಗ್ಗೆ ಹೆಚ್ಚಿದ ಎಕ್ಸ್ ಪೆಕ್ಟೇಷನ್!
ಕೆಜಿಎಫ್-2 ನಂತರ ಯಶ್ ಮುಂದಿನ ಚಿತ್ರ ಯಾವುದು? ರಾಕಿ ಭಾಯ್ ಅಭಿಮಾನಿಗಳ ಕಾತುರಕ್ಕೆ ಇಲ್ಲಿದೆ ಉತ್ತರ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


