Ramanagara

ವಿಶ್ವದಲ್ಲಿಯೇ ಅತಿ ಎತ್ತರದ ಏಕಶಿಲಾ ಯೇಸು ಪ್ರತಿಮೆಗೆ ಡಿಕೆ ಶಿವಕುಮಾರ್ ಶಿಲಾನ್ಯಾಸ
ಜಿಲ್ಲೆಯ ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದ ಕಪಾಲಿಬೆಟ್ಟದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಿಶ್ವದಲ್ಲಿಯೇ ಅತಿ ಎತ್ತರದ 114 ಅಡಿಯ ಏಕಶಿಲೆ ಯೇಸುಕ್ರಿಸ್ತರ ಪ್ರತಿಮೆ ನಿರ್ಮಾಣದ ಶಿಲಾನ್ಯಾಸವನ್ನು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ಕ್ರಿಸ್ಮಸ್ ಶುಭದಿನವಾದ ಬುಧವಾರ ನೆರವೇರಿಸಿದರು

ಜಾತಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಒಕ್ಕಲಿಗ ಎಂಬ ಕಾರಣಕ್ಕೆ ಮಂತ್ರಿ ಮಾಡ್ತಾರೆ-ಡಿಕೆ ಶಿವಕುಮಾರ್
ನಾನು ಏನೇ ವಿಶ್ವಮಾನವ ತತ್ವವನ್ನು ಹೇಳಿದರೂ, ನನ್ನ ಲೆಕ್ಕಾಚಾರ, ನನ್ನ ಮಂತ್ರಿ ಮಾಡುವುದು ನಾನು ಒಕ್ಕಲಿಗ ಎಂಬ ಕಾರಣದಿಂದಲೇ. ಅದರಿಂದ ನಾನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಶಿವಕುಮಾರ್ ಸೂಚ್ಯವಾಗಿ ಹೇಳಿದ್ದಾರೆ.

ಕಾಲಿಗೆ ಬಿದ್ದರೂ ಕೇರ್ ಮಾಡದ ಅನಿತಾ ಕುಮಾರಸ್ವಾಮಿ: ಕಾರಿಗೆ ಅಡ್ಡ ಹಾಕಿ ಶಾಸಕಿಗೆ ಘೇರಾವ್
ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಬಂದರೆ ಶಾಸಕಿ ಅನಿತಾ ಕುಮಾರಸ್ವಾಮಿಯವರು ಸ್ಪಂದಿಸದ ಕಾರಣ ಜನ ಘೇರಾವ್ ಮಾಡಿದ ಪ್ರಸಂಗ ನಡೆಯಿತು

ರಾಮನಗರದಲ್ಲಿ ರೇವ್ ಪಾರ್ಟಿ: 10 ಮಂದಿ ಬಂಧನ
ರಾಮನಗರ ತಾಲೂಕಿನ ವಿಭೂತಿಕೆರೆ ಬಳಿಯ ಮಾವಿನ ತೋಟದಲ್ಲಿ ಶನಿವಾರ ತಡರಾತ್ರಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ರಾಮನಗರ ಎಸ್ಪಿ ಅನೂಪ್ ಶೆಟ್ಟಿ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ 10 ಮಂದಿಯನ್ನು ಬಂಧನಕ್ಕೊಳಪಡಿಸಿದ್ದಾರೆ.

ರಾಮನಗರ: ರಕ್ಕಸ ಬೀದಿ ನಾಯಿಗಳ ದಾಳಿಯಿಂದ 9 ಜನರಿಗೆ ಗಾಯ
ಜಿಲ್ಲೆಯ ಮಾಗಡಿ ಪಟ್ಟಣದಲ್ಲಿ ರಕ್ಕಸ ಬೀದಿ ನಾಯಿಗಳ ದಾಳಿಯಿಂದಾಗಿ ಇಬ್ಬರು ಅಪ್ರಾಪ್ತರು ಸೇರಿದಂತೆ 9 ಮಂದಿ ಗಾಯಗೊಂಡಿದ್ದಾರೆ. ಗುಡೇಮಾರನಹಳ್ಳಿ ಸರ್ಕಲ್ ಹಾಗೂ ಮಾಗಡಿಯ ನಂಜಪ್ಪ ಸರ್ಕಲ್ ನಲ್ಲಿ ಬೀದಿನಾಯಿಗಳು ಜನರನ್ನು ಕಚ್ಚಿವೆ. ಇದರಿಂದಾ ಆಕ್ರೋಶಗೊಂಡ ಜನರು ಅವರನ್ನು ಬೆನ್ನಟ್ಟಿ ಕೊಂದು ಹಾಕಿದ್ದಾರೆ.

ಏಕತಾ ಪ್ರತಿಮೆ ರೀತಿಯಲ್ಲಿ ರಾಮನಗರದಲ್ಲಿ ಇಬ್ಬರು ಸ್ವಾಮೀಜಿಗಳ ಬೃಹತ್ ಪ್ರತಿಮೆ ಸ್ಥಾಪನೆ!
ಪ್ರಪಂಚದಲ್ಲೇ ಅತಿ ದೊಡ್ಡ ಪ್ರತಿಮೆ ಎಂದು ಖ್ಯಾತವಾಗಿರುವ ಗುಜರಾತಿನ ಏಕತಾ ಪ್ರತಿಮೆಯಂತೆ ರಾಮನಗರದಲ್ಲೂ ಇಬ್ಬರು ಪ್ರಭಾವಿ ಸಮುದಾಯದ ಸ್ವಾಮಿಜಿಗಳ ಬೃಹತ್ ಪ್ರತಿಮೆ ಸ್ಥಾಪಿಸಲು ಉದ್ದೇಶಿಸಲಾಗಿದೆ.

ರಾಜೀವ್ ಗಾಂಧಿ ಆರೋಗ್ಯ ವಿವಿ ಕ್ಯಾಂಪಸ್ ಸ್ಥಳಾಂತರಕ್ಕೆ ಉಪಮುಖ್ಯಮಂತ್ರಿ ಗ್ನೀನ್ ಸಿಗ್ನಲ್
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕೇಂದ್ರ ಕಚೇರಿಯನ್ನು ಬೆಂಗಳೂರಿನಿಂದ ರಾಮನಗರಕ್ಕೆ ಸ್ಥಳಾಂತರಿಸಲು ಉಪ ಮುಖ್ಯಮಂತ್ರಿ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಡಾ. ಅಶ್ವತ್ ನಾರಾಯಣ್ ಗ್ನೀನ್ ಸಿಗ್ನಲ್ ನೀಡಿದ್ದಾರೆ.

ತಪ್ಪು ಮಾಡಿದವರು ಶಿಕ್ಷೆ ಅನುಭವಿಸಬೇಕು, ಉಪ್ಪು ತಿಂದವರು ನೀರು ಕುಡಿಯಬೇಕು: ಸಿಟಿ ರವಿ
ಉಪ್ಪು ತಿಂದವರು ನೀರು ಕುಡಿಯಬೇಕು, ತಪ್ಪು ಮಾಡಿದವರು ಶಿಕ್ಷೆ ಅನುಭವಿಸಬೇಕು ಇದು ಈ ನೆಲದ ಸಂಸ್ಕೃತಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ. ಟಿ. ರವಿ ಹೇಳಿದ್ದಾರೆ.

ಡಿಕೆಶಿ ಬಂಧನ ವಿರೋಧಿಸಿ ಗುರುವಾರ ರಾಮನಗರ ಜಿಲ್ಲಾ ಬಂದ್ : ಬಿಗಿ ಪೊಲೀಸ್ ಬಂದೋಬಸ್ತ್
ನೋಟ್ ರದ್ದತಿ ವೇಳೆ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಸೆಪ್ಟೆಂಬರ್ 13ರವರೆಗೂ ಇಡಿ ವಶಕ್ಕೆ ನ್ಯಾಯಾಲಯ ಒಪ್ಪಿಸಿರುವುದರಿಂದ ಅವರ ತವರು ಜಿಲ್ಲೆ ರಾಮನಗರದಲ್ಲಿ ಆಕ್ರೋಶ ಭುಗಿಲೆದಿದೆ

