Ramanagara

ನನಸಾಗದ ಕನಸು: 14 ವರ್ಷಗಳಿಂದ ಸ್ವಂತ ಸೂರಿಗೆ ಕಾಯುತ್ತಿರುವ ರಾಮನಗರ ಜಿಲ್ಲೆಯ ದೊಡ್ಡಮಣ್ಣಿನ ಗುಡ್ಡೆ ನಿವಾಸಿಗಳು!
ಕೈಗೆಟಕುವ ದರದಲ್ಲಿ ಮನೆಗಳು ಸಿಗಬಹುದೆಂದು 1,400ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿ ಸತತ 14 ವರ್ಷಗಳಿಂದ ಕಾಯುತ್ತಿದ್ದಾರೆ. ಆದರೆ ಸ್ವಂತ ಮನೆ ಮಾಡಿಕೊಳ್ಳುವ ಅವರ ಕನಸು ಇಲ್ಲಿಯವರೆಗೆ ನನಸಾಗೇ ಇಲ್ಲ.

ರಾಮನಗರದ 'ಹೆಲ್ತ್ ಸಿಟಿ' ಕಾರ್ಯ ಈ ವರ್ಷವೇ ಆರಂಭ: ಡಾ.ಅಶ್ವತ್ ನಾರಾಯಣ್
ರೇಷ್ಮೆ ನಗರ ಖ್ಯಾತಿಯ ರಾಮನಗರದಲ್ಲಿ ಈ ವರ್ಷದ ಕೊನೆಯೊಳಗೆ 'ಹೆಲ್ತ್ ಸಿಟಿ' ನಿರ್ಮಾಣ ಕಾರ್ಯ ಆರಂಭವಾಗಲಿದ್ದು, ನಂತರ ಆರೋಗ್ಯ ಸೇವೆಯಲ್ಲಿ ಜಿಲ್ಲೆ ಇಡೀ ರಾಜ್ಯಕ್ಕೆ ಮಾದರಿ ಎನಿಸಿಕೊಳ್ಳಲಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಪ್ರತಿಪಕ್ಷಗಳು ಹಗಲು ಗನಸು ಬಿಡಲಿ, 2023ರ ನಂತರವೂ ನಮ್ಮದೇ ಸರ್ಕಾರ- ಡಾ. ಅಶ್ವತ್ ನಾರಾಯಣ
ಬಿಜೆಪಿಯಲ್ಲಿ ಭಿನ್ನಮತ ಇಲ್ಲ. ಸರ್ಕಾರ ಉರುಳಿಸಿ ಅಧಿಕಾರಕ್ಕೆ ಬರುವ ಬಗ್ಗೆ ಪ್ರತಿಪಕ್ಷಗಳು ಹಗಲುಗನಸು ಕಾಣುವುದನ್ನು ಬಿಡಲಿ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.

ರಾಮನಗರ: ಶಿಕ್ಷಕಿಗೆ ಮಾನಸಿಕ ಹಿಂಸೆ, ಕ್ಲಸ್ಟರ್ ಸಿಆರ್ ಪಿ ಕುಮಾರ್ ಅಮಾನತು
ಶಿಕ್ಷಕಿಗೆ ಮಾನಸಿಕ ಹಿಂಸೆ ನೀಡಿದ ಆರೋಪದ ಮೇರೆಗೆ ರಾಮನಗರ ಟೌನ್ ಕ್ಲಸ್ಟರ್ ಸಿಆರ್ ಪಿ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ.

ಗ್ರೀನ್ ಝೋನ್ ರಾಮನಗರಕ್ಕೂ ವಕ್ಕರಿಸಿದ ಕೊರೋನಾ; ರಾಜ್ಯದಲ್ಲಿ 69 ಹೊಸ ಪ್ರಕರಣ; ಸೋಂಕಿತರ ಸಂಖ್ಯೆ 2,158ಕ್ಕೆ ಏರಿಕೆ
ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿನ ಅಬ್ಬರ ಮುಂದುವರೆದಿದ್ದು, ಸೋಮವಾರ ಮತ್ತೆ 69 ಮಂದಿಯಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ಅಲ್ಲದೆ, ಗ್ರೀನ್ ಝೋನ್ ರಾಮನಗರಕ್ಕೂ ಕೊರೋನಾ ವಕ್ಕರಿಸಿದ್ದು, ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,158ಕ್ಕೆ ಏರಿಕೆಯಾಗಿದೆ.

ರಾಮನಗರ: ಅರಣ್ಯಾಧಿಕಾರಿಗಳಿಂದ 2 ಚಿರತೆ ಮರಿಗಳ ಸೆರೆ
ರಾಮನಗರ ಜಿಲ್ಲೆಯಲ್ಲಿ ಚಿರತಣಗಳ ಹಾವಳಿ ಹೆಚ್ಚಾಗಿದ್ದು, ಯಾವ ಭಾಗದಲ್ಲಿ ನೋಡಿದರೂ ಚಿರತೆ ದಾಳಿಯ ಮಾತುಗಳೇ ಕೇಳಿ ಬರುತ್ತಿವೆ. ಈ ಹಿಂದೆ ನರಭಕ್ಷಕ ಚಿರತೆ ರಾಮನಗರದಲ್ಲಿ 62 ವರ್ಷದ ಮಹಿಳೆಯೊಬ್ಬರನ್ನು ಕೊಂದು ಹಾಕಿತ್ತು. ಈ ಬೆಳವಣಿಗೆ ಬಳಿಕ ಚಿರತೆ ಸೆರೆಹಿಡಿಯಲು ಬಲೆ ಬೀಸಿದ್ದ ಅರಣ್ಯಾಧಿಕಾರಿಗಳು ಇದೀಗ ಎರಡು ಚಿರತೆ ಮರಿಗಳನ್ನು ಸೆರೆ ಹಿಡಿದಿದ್ದಾರೆ.

ರಾಮನಗರ: ಮಲಗಿದ್ದ ವೃದ್ಧೆ ಚಿರತೆಗೆ ಬಲಿ
ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ಮತ್ತೆ ಚಿರತೆ ಅಟ್ಟಹಾಸ ಮೆರೆದಿದೆ. ಮನೆಯ ಹೊರಗಡೆ ಮಲಗಿದ್ದ ವೃದ್ಧೆ ಮೇಲೆ ಚಿರತೆಯೊಂದು ದಾಳಿ ಮಾಡಿ ಕೊಂದು ಹಾಕಿರುವ ಘಟನೆ ಮಾಗಡಿ ತಾಲ್ಲೂಕಿನ ಕೊತ್ತಗಾನಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ರಾಮನಗರ ಜಾತ್ರೆ: ಅಧಿಕಾರಿಗಳ ವಿರುದ್ಧ ಡಿಸಿಎಂ ಅಶ್ವತ್ಥ್ ನಾರಾಯಣ್ ತೀವ್ರ ಕಿಡಿ
ಲಾಕ್'ಡೌನ್ ನಡುವಲ್ಲೂ ರಾಮನಗರದಲ್ಲಿ ಜಾತ್ರೆಗೆ ಅನುಮತಿ ನೀಡಿದ್ದ ಅಧಿಕಾರಿಗಳನ್ನು ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಮನಗರ: ಮಗುವನ್ನು ಕೊಂದಿದ್ದ ಚಿರತೆ ಸೆರೆ
ಪೋಷಕರ ಜತೆ ಮಲಗಿದ್ದ ಮೂರು ವರ್ಷದ ಮಗುವನ್ನು ಹೊತ್ತೊಯ್ದು ಕೊಂದು ಹಾಕಿದ್ದ ಚಿರತೆ ಬೋನಿನಲ್ಲಿ ಸೆರೆಯಾಗಿದೆ. ಮಾಗಡಿ ತಾಲೂಕಿನ ಕದಿರಯ್ಯನ ಪಾಳ್ಯದಲ್ಲಿ ಈ ನರಭಕ್ಷಕ ಚಿರತೆ ಸೆರೆಯಾಗಿದ್ದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

