ರಾಜ್ಯ

ರಾಮನಗರ: ಶಿಕ್ಷಕಿಗೆ ಮಾನಸಿಕ ಹಿಂಸೆ, ಕ್ಲಸ್ಟರ್ ಸಿಆರ್ ಪಿ ಕುಮಾರ್ ಅಮಾನತು

ಶಿಕ್ಷಕಿಗೆ ಮಾನಸಿಕ ಹಿಂಸೆ ನೀಡಿದ ಆರೋಪದ ಮೇರೆಗೆ ರಾಮನಗರ ಟೌನ್ ಕ್ಲಸ್ಟರ್ ಸಿಆರ್ ಪಿ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ.

ರಾಮನಗರ: ಶಿಕ್ಷಕಿಗೆ ಮಾನಸಿಕ ಹಿಂಸೆ, ಕ್ಲಸ್ಟರ್ ಸಿಆರ್ ಪಿ ಕುಮಾರ್ ಅಮಾನತು
ಸಾಂದರ್ಭಿಕ ಚಿತ್ರ
Published On :

ರಾಮನಗರ: ಶಿಕ್ಷಕಿಗೆ ಮಾನಸಿಕ ಹಿಂಸೆ ನೀಡಿದ ಆರೋಪದ ಮೇರೆಗೆ ರಾಮನಗರ ಟೌನ್ ಕ್ಲಸ್ಟರ್ ಸಿಆರ್ ಪಿ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ.

ಜಿಲ್ಲಾ ಉಪನಿರ್ದೇಶಕರು ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸುಕನ್ಯಾ ಶೆಟ್ಟಿ ಎಂಬ ಶಿಕ್ಷಕಿ ನೀಡಿದ ದೂರಿನ ಆಧಾರದ ಮೇರೆಗೆ ಈ ಕ್ರಮ ಜರುಗಿಸಲಾಗಿದೆ.  ಕಳೆದ ಮೂರು ವರ್ಷಗಳಿಂದ ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಪಾಠ ಮಾಡಲು ಬಿಡದೆ ಗಂಟೆಗಟ್ಟಲೆ ಅನಾವಶ್ಯಕವಾಗಿ ಮಾತನಾಡಿಸಿ, ವೈಯಕ್ತಿಕ ಮೊಬೈಲ್ ನಂಬರ್ ಗೆ ರಜೆ ದಿನಗಳಲ್ಲಿ ಕರೆ ಮಾಡುತ್ತಿದ್ದಾರೆ ಎಂದು ಅವರು ಎರಡು ಪುಟಗಳ ದೂರಿನಲ್ಲಿ ಆರೋಪಿಸಿದ್ದಾರೆ. 

ಶಿಕ್ಷಕಿ ನೀಡಿದ ದೂರಿನ ಆಧಾರದ ಮೇರೆಗೆ ಪ್ರಾರ್ಥಮಿಕ ತನಿಖೆ ಮಾಡಿ ವಿಚಾರಣೆ ಕಾಯ್ದಿರಿಸಿ ಸಿಆರ್ ಪಿ ಅಮಾನತು ಮಾಡಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸೋಮಶೇಖರಯ್ಯ ಆದೇಶ ಮಾಡಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.