project

ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಗ್ರಾಮೀಣ ಭಾಗದ ವಾರಿಯರ್ಸ್ ಗೆ ನೆರವಾದ 'ಭರವಸೆ' ಯೋಜನೆ!
ಓರ್ವ ಉದ್ಯಮಿ, ಪೊಲೀಸ್ , ಎರಡು ಸ್ವಯಂ ಸೇವಾ ಸಂಸ್ಥೆಗಳು ಹಾಗೂ ನೂರಾರು ಸಮಾನ ಮನಸ್ಸಿನ ಜನರ ತಂಡವೊಂದು ಜುಲೈ ತಿಂಗಳಲ್ಲಿ ಭರವಸೆ ಯೋಜನೆ ಆರಂಭಿಸುವ ಮೂಲಕ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ನೆರವು ನೀಡಿದ್ದಾರೆ.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರಾಜ್ಯದಲ್ಲಿ 5612.50 ಕಿ.ಮೀ. ರಸ್ತೆ ನಿರ್ಮಾಣ: ಕೆ.ಎಸ್. ಈಶ್ವರಪ್ಪ
ಕೇಂದ್ರ ಸರ್ಕಾರವು ಮುಖ್ಯ ರಸ್ತೆ ಹಾಗೂ ಪ್ರಮುಖ ಕೂಡು ರಸ್ತೆಗಳ ಬಲವರ್ಧನೆ ಮತ್ತು ನವೀಕರಣಕ್ಕಾಗಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂರನೇ ಹಂತದಡಿ ಕರ್ನಾಟಕ ರಾಜ್ಯಕ್ಕೆ ಒಟ್ಟು 5612.50 ಕಿ.ಮೀ ಹಂಚಿಕೆ ಮಾಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ಮಂಗಳೂರು ಸಮುದ್ರ ತೀರದಲ್ಲಿ ಡಾಲ್ಫಿನ್ ಸಂರಕ್ಷಣೆ ಯೋಜನೆಗೆ ಅರಣ್ಯ ಇಲಾಖೆ ಮುಂದು
ಕಡಲ ನಗರಿ ಮಂಗಳೂರಿನ ತೀರದಲ್ಲಿ ಡಾಲ್ಫಿನ್ ಸಂರಕ್ಷಣಾ ಕಾರ್ಯಕ್ರಮವನ್ನು ನಡೆಸಲು ಕರ್ನಾಟಕ ಅರಣ್ಯ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ.

ಚೆನ್ನೈ-ಮೈಸೂರು ಸೇರಿದಂತೆ 10 ಟ್ರಿಲಿಯನ್ ವೆಚ್ಚದಲ್ಲಿ ಏಳು ನೂತನ ಬುಲೆಟ್ ರೈಲು ಯೋಜನೆಗೆ ಕೇಂದ್ರ ಸರ್ಕಾರ ಚಿಂತನೆ
ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಮುಂಬೈ- ಅಹಮದಾಬಾದ್ ನಡುವಣ ಯೋಜನೆ ವಿಳಂಬವಾಗಿದ್ದರೂ ಏಳು ನೂತನ ಬುಲೆಟ್ ರೈಲು ಯೋಜನೆಗಾಗಿ 10 ಟ್ರಿಲಿಯನ್ ವೆಚ್ಚ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಸಿಲಿಕಾನ್ ಸಿಟಿಯನ್ನು ಹಸಿರಾಗಿಸಲು ಬಿಬಿಎಂಪಿಯಿಂದ 'ಕೋಟಿ ವೃಕ್ಷ' ಯೋಜನೆ
ಸಸಿಗಳನ್ನು ನೆಡುವುದು ಮುಖ್ಯವಲ್ಲ. ಅವುಗಳಲ್ಲಿಎಷ್ಟು ಉಳಿದು, ಮರಗಳಾಗಿವೆ ಎನ್ನುವುದು ಮುಖ್ಯ, ಎಂದು ಶಾಸಕ ದಿನೇಶ್ ಗುಂಡೂರಾವ್ ಪರೋಕ್ಷವಾಗಿ ಸರ್ಕಾರವನ್ನು ಕುಟುಕಿದ್ದಾರೆ.

ಭಯೋತ್ಪಾದನೆ ಕಿತ್ತೊಗೆಯಲು, ಜಮ್ಮು-ಕಾಶ್ಮೀರ ಅಭಿವೃದ್ಧಿಗೆ ಪಣತೊಡಿ: ರಾಂಚಿಯಲ್ಲಿ ಪ್ರಧಾನಿ ಮೋದಿ ಕರೆ
ಭ್ರಷ್ಟಾಚಾರವನ್ನು ಬುಡಸಮೇತ ಕಿತ್ತೆಸೆದು ದೇಶದಲ್ಲಿ ಅಭಿವೃದ್ಧಿಯನ್ನು ತರಲು ಎನ್ ಡಿಎ-2 ಸರ್ಕಾರ ಕಳೆದ 100 ದಿನಗಳಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.

ಜಲಂತರ್ಗಾಮಿ ನೌಕೆಗಳ ನಿರ್ಮಾಣಕ್ಕೆ 40 ಸಾವಿರ ಕೋಟಿ, ಕೇಂದ್ರ ಅಸ್ತು
ಭಾರತೀಯ ನೌಕಾದಳಕ್ಕಾಗಿ ಸುಮಾರು 40 ಸಾವಿರ ಕೋಟಿ ರೂ. ವೆಚ್ಚದಲ್ಲಿ ಸ್ವದೇಶಿ ನಿರ್ಮಿತ ಆರು ಜಲಂತರ್ಗಾಮಿ ನೌಕೆಗಳ ನಿರ್ಮಾಣ ಯೋಜನೆಗೆ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದೆ.

ಫೆರಿಫೆರಲ್ ರಿಂಗ್ ರಸ್ತೆ ಯೋಜನೆ ಭೂ ಸ್ವಾಧೀನಕ್ಕೆ ರಾಜ್ಯ ಸರ್ಕಾರದಿಂದಲೇ ಹಣ
ನಗರದಲ್ಲಿ 65 ಕಿಲೋ ಮೀಟರ್ ಉದ್ದದ ಫೆರಿಫೆರಲ್ ರಿಂಗ್ ರಸ್ತೆಗೆ ಭೂಮಿಯನ್ನು ಸ್ವಾಧೀನಪಡಿಸಲು ...

ರೂ.550 ಕೋಟಿ ಮೌಲ್ಯದ ಯೋಜನೆಗಳ ಘೋಷಣೆ: ವಾರಣಾಸಿಗೆ ಪ್ರಧಾನಿ ಮೋದಿ ಉಡುಗೊರೆ
ಲೋಕಸಭಾ ಕ್ಷೇತ್ರ ವಾರಣಾಸಿಗೆ ಭೇಟಿ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರೂ.550 ಕೋಟಿಯ ಅಭಿವೃದ್ಧಿ ಯೋಜನೆಗಳಿಗೆ ಮಂಗಳವಾರ ಚಾಲನೆ ನೀಡಿದ್ದಾರೆ...

