ರಾಜ್ಯ

ಸಿಲಿಕಾನ್ ಸಿಟಿಯನ್ನು ಹಸಿರಾಗಿಸಲು ಬಿಬಿಎಂಪಿಯಿಂದ 'ಕೋಟಿ ವೃಕ್ಷ' ಯೋಜನೆ

ಸಸಿಗಳನ್ನು ನೆಡುವುದು ಮುಖ್ಯವಲ್ಲ. ಅವುಗಳಲ್ಲಿಎಷ್ಟು ಉಳಿದು, ಮರಗಳಾಗಿವೆ ಎನ್ನುವುದು ಮುಖ್ಯ, ಎಂದು ಶಾಸಕ ದಿನೇಶ್ ಗುಂಡೂರಾವ್ ಪರೋಕ್ಷವಾಗಿ ಸರ್ಕಾರವನ್ನು ಕುಟುಕಿದ್ದಾರೆ.

ಸಿಲಿಕಾನ್ ಸಿಟಿಯನ್ನು ಹಸಿರಾಗಿಸಲು ಬಿಬಿಎಂಪಿಯಿಂದ 'ಕೋಟಿ ವೃಕ್ಷ' ಯೋಜನೆ
ಬಿಬಿಎಂಪಿ ಕಚೇರಿ
Published On :

ಬೆಂಗಳೂರು: ಸಸಿಗಳನ್ನು ನೆಡುವುದು ಮುಖ್ಯವಲ್ಲ. ಅವುಗಳಲ್ಲಿಎಷ್ಟು ಉಳಿದು, ಮರಗಳಾಗಿವೆ ಎನ್ನುವುದು ಮುಖ್ಯ, ಎಂದು ಶಾಸಕ ದಿನೇಶ್ ಗುಂಡೂರಾವ್ ಪರೋಕ್ಷವಾಗಿ ಸರ್ಕಾರವನ್ನು ಕುಟುಕಿದ್ದಾರೆ.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ಫ್ರೀಡಂ ಪಾರ್ಕ್ನಲ್ಲಿ'ಕೋಟಿ ವೃಕ್ಷ ಆಂದೋಲನ' ಕಾರ್ಯಕ್ರಮಕ್ಕೆ ಶಾಸಕ ದಿನೇಶ್‌ ಗುಂಡೂರಾವ್‌, ಮೇಯರ್‌ ಎಂ.ಗೌತಮ್‌ಕುಮಾರ್‌ ಅವರು ಶುಕ್ರವಾರ ಚಾಲನೆ ನೀಡಿ, ಸಾಂಕೇತಿಕವಾಗಿ ಸಸಿಗಳನ್ನು ನೆಟ್ಟರು. 

ಬಿಬಿಎಂಪಿಯ ಅರಣ್ಯ ವಿಭಾಗವು ಕೋಟಿ ವೃಕ್ಷ ಸೈನ್ಯ, ಸ್ವಯಂ ಸೇವಾ ಸಂಸ್ಥೆಗಳು ಮತ್ತು ಸಾರ್ವಜನಿಕರ ಸಹಯೋಗದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಒಂದು ಕೋಟಿ ಗಿಡಗಳನ್ನು ನೆಡಲು 'ಕೋಟಿ ವೃಕ್ಷ ಆಂದೋಲನ'ವನ್ನು ಹಮ್ಮಿಕೊಂಡಿದೆ. ಪ್ರಸಕ್ತ ಸಾಲಿನಲ್ಲಿ ಪಾಲಿಕೆ ವತಿಯಿಂದ 60 ಸಾವಿರ ಸಸಿಗಳನ್ನು ನೆಟ್ಟು ಪೋಷಿಸುವ ಗುರಿ ಹೊಂದಲಾಗಿದೆ.

ನಗರದ ಎಂಟು ಕಡೆ ಸಸಿ ನೆಡಲು 40 ಎಕರೆ ಜಾಗವನ್ನು  ಗುರುತಿಸಿದೆ. ಜತೆಗೆ 1200ಕ್ಕೂ ಅಧಿಕ ಉದ್ಯಾನಗಳಲ್ಲಿಗಿಡಗಳನ್ನು ನೆಟ್ಟು ಪೋಷಿಸಲು ಉದ್ದೇಶಿಸಿದೆ. ಇದಕ್ಕೆ ಸ್ಥಳೀಯ   ನಾಗರಿಕರ ಸಹಕಾರ ಪಡೆದುಕೊಳ್ಳುತ್ತಿದೆ. ಜೂನ್‌ ತಿಂಗಳಲ್ಲಿ  12 ಲಕ್ಷ ಸಸಿಗಳನ್ನು ನೆಡಲು ಉದ್ದೇಶಿಸಿದೆ.

ಪಾಲಿಕೆಯು 2020-21ನೇ ಸಾಲಿನಲ್ಲಿ ರಸ್ತೆ ಬದಿ ಮತ್ತು ಖಾಲಿ ಜಾಗಗಳಲ್ಲಿ60 ಸಾವಿರ ಗಿಡಗಳನ್ನು ನೆಡಲು ತೀರ್ಮಾನಿಸಿದೆ. ಕೋಟಿ ವೃಕ್ಷ ಆಂದೋಲನದಡಿ 2020-21ರಲ್ಲಿ45 ಲಕ್ಷ ಮತ್ತು 2021-22ರಲ್ಲಿ 55 ಲಕ್ಷ ಸಸಿಗಳನ್ನು ಹಾಕಲಾಗುತ್ತಿದೆ. ಈ ವರ್ಷ ಸಾರ್ವಜನಿಕರಿಗೆ 10 ಲಕ್ಷ ಸಸಿಗಳನ್ನು ವಿತರಿಸಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.