probe

ಅದಾನಿ ಸಮೂಹ ಸಂಸ್ಥೆಗಳ ವಿರುದ್ಧ ತನಿಖೆಗಾಗಿ 'ಸುಪ್ರೀಂ' ಮೆಟ್ಟಿಲೇರಿದ ಕಾಂಗ್ರೆಸ್ ನಾಯಕಿ
ಹಿಂಡೆನ್‌ಬರ್ಗ್ ಸಂಶೋಧನಾ ವರದಿ ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ಅದಾನಿ ಸಮೂಹ ಮತ್ತು ಅದರ ಸಹಚರರ ವಿರುದ್ಧ ತನಿಖೆ ನಡೆಸುವಂತೆ ಕಾಂಗ್ರೆಸ್ ನಾಯಕಿ ಜಯಾ ಠಾಕೂರ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ವಿದ್ಯಾರ್ಥಿಗಳು ಪ್ರದರ್ಶಿಸಿದ ಸ್ಕಿಟ್ ನಲ್ಲಿ ಜಾತಿ ನಿಂದನೆ ಆರೋಪ: ತನಿಖೆಗೆ ಶಿಸ್ತು ಸಮಿತಿ ರಚಿಸಿದ ಜೈನ್ ವಿವಿ
ಮೊನ್ನೆ ಫೆಬ್ರವರಿ 6 ರಂದು ಸೆಂಟರ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ (CMS) ನಲ್ಲಿ ವಿದ್ಯಾರ್ಥಿಗಳ ಗುಂಪೊಂದು ಪ್ರದರ್ಶಿಸಿದ ಸ್ಕಿಟ್‌ನಲ್ಲಿ ದಲಿತರ ಬಗ್ಗೆ ಅವಹೇಳನ ಮಾಡಲಾಗಿದೆ ಎಂಬ ವಿವಾದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಜೈನ್ ವಿವಿ (Deemed-to-be University) ಶಿಸ್ತು ಸಮಿತಿಯನ್ನು ರಚಿಸಿದೆ.

'ಪಾಕಿಸ್ತಾನ್ ಜಿಂದಾಬಾದ್' ಪೋಸ್ಟ್: ಆರೋಪಿಯ ವಿರುದ್ಧದ ಪ್ರಕರಣ ರದ್ದುಪಡಿಸಿ, ಹೊಸದಾಗಿ ತನಿಖೆಗೆ ಆದೇಶಿಸಿದ ಹೈಕೋರ್ಟ್
ಫೇಸ್‌ಬುಕ್'ನಲ್ಲಿ “ಹರ್ ದಿಲ್ ಕಾ ಆವಾಜ್ ಪಾಕಿಸ್ತಾನ ಜಿಂದಾಬಾದ್” ಎಂದು ಹೇಳುವ ಸಂದೇಶವನ್ನು ಪೋಸ್ಟ್ ಮಾಡಿದ್ದ ರಾಯಚೂರಿನ ವ್ಯಕ್ತಿಯ ವಿರುದ್ಧದ ಪ್ರಕರಣವನ್ನು ಹೈಕೋರ್ಟ್‌ನ ಕಲಬುರಗಿ ಪೀಠವು ರದ್ದುಗೊಳಿಸಿದೆ.

ವಿವಿ ಕುಲಪತಿ ನೇಮಕದಲ್ಲಿ ವಸೂಲಿ ಆರೋಪ: ಉನ್ನತ ತನಿಖೆಗೆ ಕಾಂಗ್ರೆಸ್ ಒತ್ತಾಯ
5-6 ಕೋಟಿ ರೂಪಾಯಿ ಹಣ ಪಡೆದು ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನ ನೇಮಿಸಲಾಗುತ್ತಿದೆ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ನೀಡಿರುವ ಹೇಳಿಕೆ ಆಧಾರದ ಮೇಲೆ ಉನ್ನತ ಮಟ್ಟದ ತನಿಖೆ ನಡೆಯಬೇಕೆಂದು ಪ್ರತಿಪಕ್ಷ ಕಾಂಗ್ರೆಸ್ ಒತ್ತಾಯಿಸಿದೆ.

ಮಂಗಳೂರು ಆಟೋ ಸ್ಫೋಟ: ಸ್ಥಳೀಯ ಸಂಪರ್ಕದ ಸಾಧ್ಯತೆ, ತಮಿಳುನಾಡು, ಕೇರಳದಲ್ಲೂ ತನಿಖೆ!
ಮಂಗಳೂರಿನಲ್ಲಿ ನವೆಂಬರ್ 19 ರಂದು ಸಂಭವಿಸಿದ ಸ್ಫೋಟದ ಹಿಂದಿನ ಪ್ರಮುಖ ಶಂಕಿತ ಜಾಗತಿಕ ಭಯೋತ್ಪಾದನಾ ಸಂಘಟನೆಯಿಂದ ಪ್ರೇರಿತನಾಗಿದ್ದು, ತನಿಖೆಯು ದಕ್ಷಿಣದ ಇನ್ನೂ ಎರಡು ರಾಜ್ಯಗಳಿಗೂ ವಿಸ್ತರಿಸುತ್ತಿದೆ.

'ಇಲ್ನೋಡಿ ಹುಲಿ-ಅದರ ಮರಿ ಎಷ್ಟು ಸುಂದರವಾಗಿ ಸೆರೆಸಿಕ್ಕಿದೆ': ವಿಡಿಯೊ ಪೋಸ್ಟ್ ಮಾಡಿದ ರವಿನಾ ಟೆಂಡನ್ ಗೆ ಸಂಕಷ್ಟ, ತನಿಖೆಗೆ ಆದೇಶ
ಸೋಷಿಯಲ್ ಮೀಡಿಯಾ ಪ್ರಭಾವ ಕಳೆದೊಂದು ದಶಕದಿಂದ ಅಗಾಧವಾಗಿದೆ. ಈಗೇನಿದ್ದರೂ ಸೋಷಿಯಲ್ ಮೀಡಿಯಾ ಜಮಾನ, ಹಾಗೆಂದು ಸೋಷಿಯಲ್ ಮೀಡಿಯಾದಲ್ಲಿ ಫೋಟೋ, ವಿಡಿಯೊ ಪೋಸ್ಟ್ ಮಾಡುವಾಗ, ಬರೆಯುವಾಗ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಎಡವಟ್ಟುಗಳಾಗುವುದು ನಿಶ್ಚಿತ.

ಪುಣೆ-ಬೆಂಗಳೂರು ಹೆದ್ದಾರಿ ಅಪಘಾತ ಪ್ರಕರಣ: ತನಿಖೆಗೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಆದೇಶ
ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭಾನುವಾರ ಸಂಜೆ ಸಂಭವಿಸಿದ ಭೀಕರ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆಯವರು ತನಿಖೆಗೆ ಆದೇಶಿಸಿದ್ದಾರೆ.

ಮಂಗಳೂರು ಆಟೋ ರಿಕ್ಷಾ ಸ್ಪೋಟ ಪ್ರಕರಣ: ಪ್ರಯಾಣಿಕನ ಮೇಲೆ ಹೆಚ್ಚಿದ ಅನುಮಾನ, ತನಿಖೆಗೆ 3 ವಿಶೇಷ ತಂಡಗಳ ರಚನೆ
ಮಂಗಳೂರು ಆಟೋ ರಿಕ್ಷಾ ಸ್ಫೋಟ ಪ್ರಕರಣ ಆಕಸ್ಮಿಕವಲ್ಲ, ಇದೊಂದು ಉಗ್ರರ ಕೃತ್ಯ ಡಿಜಿಪಿ ಪ್ರವೀಣ್ ಸೂದ್ ಅವರು ಸ್ಪಷ್ಟಪಡಿಸಿದ ಬೆನ್ನಲ್ಲೇ ಪ್ರಕರಣದ ತನಿಖೆಗೆ 3 ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿದುಬಂದಿದೆ.

ಮತದಾರರ ಮಾಹಿತಿ ಕಳವು: ಹಿರಿಯ ಐಎಎಸ್ ಅಧಿಕಾರಿಯಿಂದ ತನಿಖೆಗೆ ಚುನಾವಣಾ ಆಯೋಗ ಆದೇಶ
ಮತದಾರರ ಮಾಹಿತಿ ಸಂಗ್ರಹಿಸಲು ಖಾಸಗಿ ಸಂಸ್ಥೆಯೊಂದಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದ್ದು, ಇದರ ಬೆನ್ನಲ್ಲೇ ಚುನಾವಣಾ ಆಯೋಗ (ಇಸಿ) ಶುಕ್ರವಾರ ಹಿರಿಯ ಐಎಎಸ್ ಅಧಿಕಾರಿಯಿಂದ ತನಿಖೆ ನಡೆಸಲು ಆದೇಶಿಸಿದೆ.

