Prashant Kishor

'ಪ್ರಶಾಂತ್ ಕಿಶೋರ್ ರಾಜಕೀಯ ಬೆಂಬಲಿಸುತ್ತೇನೆ, ಆದರೆ ಅವರ ಭವಿಷ್ಯ ಸವಾಲಿನಿಂದ ಕೂಡಿದೆ': ಕೇಂದ್ರ ಸಚಿವ ಚಿರಾಗ್ ಪಾಸ್ವಾನ್
ಬಿಹಾರದಲ್ಲಿ ಚುನಾವಣಾ ರಂಗ ಪ್ರವೇಶದ ನಂತರ ಪ್ರಶಾಂತ್ ಕಿಶೋರ್ ಅವರನ್ನು ಶ್ಲಾಘಿಸಿದ ಏಕೈಕ ಬಿಜೆಪಿ ಮಿತ್ರಪಕ್ಷದ ನಾಯಕ ಪಾಸ್ವಾನ್ ಆಗಿದ್ದಾರೆ.

'ಬಿಜೆಪಿಯ ದುರಹಂಕಾರದ ವಿರುದ್ಧ ಜನಾದೇಶ': ತಮ್ಮ ಐತಿಹಾಸಿಕ ಗೆಲುವಿಗೆ ಮೂರು ಕಾರಣ ನೀಡಿದ ಪ್ರಶಾಂತ್ ಕಿಶೋರ್!
ಇಂದು ತಮ್ಮ ಐತಿಹಾಸಿಕ ಗೆಲುವಿನ ಬಗ್ಗೆ ಮಾತನಾಡಿದ ಪ್ರಶಾಂತ್ ಕಿಶೋರ್ ಅವರು, "ಬಂಕಿಪುರದ ಜನ ದುರಹಂಕಾರದ ವಿರುದ್ಧ ಮತ ಚಲಾಯಿಸಿದರು. ಅವರು ಮತ ಚಲಾಯಿಸುವಾಗ ಜಾತಿ ಮೀರಿ ಮತ ಚಲಾಯಿಸಿದ್ದಾರೆ" ಎಂದು ಹೇಳಿದರು.

30 ವರ್ಷಗಳ BJPಯ ಭದ್ರ ಕೋಟೆ ಛಿದ್ರ: ಬಂಕಿಪುರ ಉಪಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಗೆಲುವು!
ಜನ್ ಸೂರಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಅವರು ಬಿಹಾರದ ಬಂಕಿಪುರ ಕ್ಷೇತ್ರದ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. 30 ವರ್ಷಗಳಿಂದ ಬಿಜೆಪಿಯ ಭದ್ರಕೋಟೆಯಾಗಿದ್ದ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ಅವರ ರಾಜಿನಾಮೆಯಿಂದ ತೆರವಾಗಿತ್ತು.

Bankipur bypoll: ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಲು ಮುಂದಾದ ಪ್ರಶಾಂತ್‍ಗೆ ಭಾರಿ ಹಿನ್ನಡೆ; BJP ಸೇರಿದ ಕೆ.ಸಿ ಸಿನ್ಹಾ!
ಬಿಹಾರದ ಬಂಕಿಪುರ ವಿಧಾನಸಭಾ ಸ್ಥಾನಕ್ಕೆ ನಡೆಯಲಿರುವ ಉಪಚುನಾವಣೆಗೆ ಮುನ್ನ ಜನ್ ಸೂರಜ್ ಪಕ್ಷದ ಸ್ಥಾಪಕ ಪ್ರಶಾಂತ್ ಕಿಶೋರ್‌ಗೆ ಭಾರೀ ಹಿನ್ನಡೆಯಾಗಿದೆ. ಜನ್ ಸೂರಜ್ ಪಕ್ಷದ ಹಿರಿಯ ನಾಯಕರಾದ ಬಿಟ್ಟು ಸಿಂಗ್ ಮತ್ತು ಕೆ.ಸಿ. ಸಿನ್ಹಾ ಪಕ್ಷವನ್ನು ತೊರೆದು ಬಿಜೆಪಿ ಸೇರಿದ್ದಾರೆ.

ಪ್ರಶಾಂತ್ ಕಿಶೋರ್ ನಾಮಪತ್ರ ಸಲ್ಲಿಕೆ: ಚುನಾವಣಾ ಚಾಣಕ್ಯ 198 ಕೋಟಿ ರೂ ಆಸ್ತಿ ಒಡೆಯ!
ಭಾರತೀಯ ಚುನಾವಣಾ ಆಯೋಗಕ್ಕೆ ಅವರು ಸಲ್ಲಿಸಿರುವ ಅಫಿಡವಿಟ್ ಪ್ರಕಾರ, ಪ್ರಶಾಂತ್ ಕಿಶೋರ್ ಹಾಗೂ ಅವರ ಪತ್ನಿ ಡಾ. ಜಹಾನ್ವಿ ದಾಸ್ ಅವರ ಒಟ್ಟು ಕುಟುಂಬದ ಆಸ್ತಿ ಮೌಲ್ಯ ಬರೋಬ್ಬರಿ 198 ಕೋಟಿ ರೂ.ಗೂ ಅಧಿಕ ಎಂದು ಘೋಷಿಸಲಾಗಿದೆ.

ಬಂಕಿಪುರ ಉಪಚುನಾವಣೆ: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದ ಬಿಜೆಪಿ ಅಭ್ಯರ್ಥಿ!
ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಜುಲೈ 13 ಆಗಿರುವುದರಿಂದ ಬಿಜೆಪಿಗೆ ಬದಲಿ ಅಭ್ಯರ್ಥಿಯನ್ನು ಅಂತಿಮಗೊಳಿಸಲು ಸ್ವಲ್ಪ ಸಮಯ ಉಳಿದಿದೆ.

ನಿತಿನ್ ನಬಿನ್ ರಾಜೀನಾಮೆಯಿಂದ ತೆರವಾಗಿದ್ದ ಬಂಕಿಪುರಕ್ಕೆ ಉಪಚುನಾವಣೆ: ಪ್ರಶಾಂತ್ ಕಿಶೋರ್ ಚುನಾವಣಾ ಅಖಾಡಕ್ಕೆ
ಪಾಟ್ನಾದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಿಶೋರ್, ಈ ಉಪಚುನಾವಣೆಯನ್ನು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಜನಪ್ರಿಯತೆಯ "ಜನಮತಸಂಗ್ರಹ" ಎಂದು ಹೇಳಿದ್ದಾರೆ.

'ಈ ವಿಡಿಯೋ ಇಟ್ಕೊಂಡಿರಿ': ವಿಜಯ್ ವಿಕ್ಟರಿಗೆ ನೆರವಾಯ್ತು ಚಾಣಕ್ಯನ 'ಬ್ಲೂ ಪ್ರಿಂಟ್'; ನಿಜವಾಯ್ತು ಪ್ರಶಾಂತ್ ಕಿಶೋರ್ ಭವಿಷ್ಯ?
ಟಿವಿಕೆ ರಚನೆಯಾದ ಕೇವಲ ಒಂದು ವರ್ಷದ ನಂತರ ಕಳೆದ ವರ್ಷ ಮಾರ್ಚ್‌ನಲ್ಲಿ ತಂತಿ ಟಿವಿಗೆ ನೀಡಿದ ಸಂದರ್ಶನದಲ್ಲಿ, ರಾಜಕೀಯ ತಂತ್ರಜ್ಞ-ರಾಜಕಾರಣಿ ಪ್ರಶಾಂತ್ ಕಿಶೋರ್ ಅವರನ್ನು ಪಕ್ಷದ ವಿಜಯ್ ಅವರ ಭವಿಷ್ಯದ ಬಗ್ಗೆ ಕೇಳಲಾಯಿತು.

ಜೆಜೆಡಿ ನಾಯಕ ತೇಜ್ ಪ್ರತಾಪ್ ಯಾದವ್-ಪ್ರಶಾಂತ್ ಕಿಶೋರ್ ಭೇಟಿ: ಬದಲಾಗುತ್ತಾ ಬಿಹಾರ ರಾಜಕೀಯ ಸಮೀಕರಣ?
ಮಹಿಳೆಯೊಬ್ಬರೊಂದಿಗಿನ ಸಂಬಂಧದ ಆರೋಪದ ಮೇಲೆ ತೇಜ್ ಪ್ರತಾಪ್ ಅವರನ್ನು ಕಳೆದ ವರ್ಷ ಆರ್‌ಜೆಡಿಯಿಂದ ಹೊರಹಾಕಲಾಯಿತು. ನಂತರ, ಅವರು ಹೊಸ ಪಕ್ಷವನ್ನು ಸ್ಥಾಪಿಸಿದರು.

