ಪ್ರಶಾಂತ್ ಕಿಶೋರ್ ನಾಮಪತ್ರ ಸಲ್ಲಿಕೆ: ಚುನಾವಣಾ ಚಾಣಕ್ಯ 198 ಕೋಟಿ ರೂ ಆಸ್ತಿ ಒಡೆಯ!
ಭಾರತೀಯ ಚುನಾವಣಾ ಆಯೋಗಕ್ಕೆ ಅವರು ಸಲ್ಲಿಸಿರುವ ಅಫಿಡವಿಟ್ ಪ್ರಕಾರ, ಪ್ರಶಾಂತ್ ಕಿಶೋರ್ ಹಾಗೂ ಅವರ ಪತ್ನಿ ಡಾ. ಜಹಾನ್ವಿ ದಾಸ್ ಅವರ ಒಟ್ಟು ಕುಟುಂಬದ ಆಸ್ತಿ ಮೌಲ್ಯ ಬರೋಬ್ಬರಿ 198 ಕೋಟಿ ರೂ.ಗೂ ಅಧಿಕ ಎಂದು ಘೋಷಿಸಲಾಗಿದೆ.

ಪಾಟ್ನಾ: ಬಿಹಾರದ ಬಂಕಿಪುರ ವಿಧಾನ ಸಭಾ ಉಪ ಚುನಾವಣೆಗೆ ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಅವರು ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ.
ಚುನಾವಣಾ ಅಫಿಡವಿಟ್‌ನಲ್ಲಿ 198 ಕೋಟಿ ರೂ. ಮೌಲ್ಯದ ಸ್ಥಿರ ಮತ್ತು ಚರಾಸ್ತಿ ಆಸ್ತಿಯನ್ನು ಘೋಷಿಸಿದ್ದಾರೆ. ಮೊದಲ ಬಾರಿಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪ್ರಶಾಂತ್ ಕಿಶೋರ್, ಜುಲೈ 30 ರಂದು ನಡೆಯಲಿರುವ ಬಂಕಿಪುರ ವಿಧಾನಸಭಾ ಉಪಚುನಾವಣೆಗೆ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ.
ಭಾರತೀಯ ಚುನಾವಣಾ ಆಯೋಗಕ್ಕೆ ಅವರು ಸಲ್ಲಿಸಿರುವ ಅಫಿಡವಿಟ್ ಪ್ರಕಾರ, ಪ್ರಶಾಂತ್ ಕಿಶೋರ್ ಹಾಗೂ ಅವರ ಪತ್ನಿ ಡಾ. ಜಹಾನ್ವಿ ದಾಸ್ ಅವರ ಒಟ್ಟು ಕುಟುಂಬದ ಆಸ್ತಿ ಮೌಲ್ಯ ಬರೋಬ್ಬರಿ 198 ಕೋಟಿ ರೂ.ಗೂ ಅಧಿಕ ಎಂದು ಘೋಷಿಸಲಾಗಿದೆ.
ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ, ಕಿಶೋರ್ 111.78 ಕೋಟಿ ರೂ. ಮೌಲ್ಯದ ಕುಟುಂಬ ಚರಾಸ್ತಿ ಮತ್ತು 86.29 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿಗಳನ್ನು ಘೋಷಿಸಿದ್ದಾರೆ. ಒಟ್ಟು ಸಂಪತ್ತಿನಲ್ಲಿ ಸ್ಥಿರ ಠೇವಣಿ, ಮ್ಯೂಚುವಲ್ ಫಂಡ್‌ಗಳು, ಬಾಂಡ್‌ಗಳು, ಅಕ್ಕಿ ಗಿರಣಿ ಮತ್ತು 475 ಗ್ರಾಂ ಚಿನ್ನ ಸೇರಿವೆ.
ಕಿಶೋರ್ ಬಿಜೆಪಿಯ ನೀರಜ್ ಕುಮಾರ್ ಸಿನ್ಹಾ ಮತ್ತು ಆರ್‌ಜೆಡಿಯ ರೇಖಾ ಗುಪ್ತಾ ವಿರುದ್ಧ ಸ್ಪರ್ಧಿಸಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಬಡ್ತಿ ಪಡೆದ ನಂತರ ರಾಜ್ಯಸಭೆಗೆ ಆಯ್ಕೆಯಾದ ನಂತರ ನಿತಿನ್ ನಬಿನ್ ಬಂಕಿಪುರ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಹೀಗಾಗಿ ಉಪಚುನಾವಣೆ ನಡೆಯುತ್ತಿದೆ.
ಅಫಿಡವಿಟ್ ಪ್ರಕಾರ, ಕಿಶೋರ್ ಅವರ ಚರ ಆಸ್ತಿಗಳಲ್ಲಿ ನಗದು, ಬ್ಯಾಂಕ್ ಠೇವಣಿಗಳು, ಷೇರುಗಳಲ್ಲಿನ ಹೂಡಿಕೆಗಳು, ವಿಮಾ ಪಾಲಿಸಿಗಳು ಮತ್ತು ಆಭರಣಗಳು ಸೇರಿವೆ.
ಕಿಶೋರ್ 22,19,74,976 ರೂ. ಮೌಲ್ಯದ ವೈಯಕ್ತಿಕ ಚರ ಆಸ್ತಿಯನ್ನು ಘೋಷಿಸಿದರೆ, ಅವರ ಪತ್ನಿ ಜಾಹ್ನವಿ 89,51,67,249 ರೂ. ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಅವರ ಮಗು ದೈಬಿಕ್ ಭಾರದ್ವಾಜ್ 7,19,281 ರೂ. ಮೌಲ್ಯದ ಆಸ್ತಿಯನ್ನು ಹೊಂದಿದೆ.
ಕಿಶೋರ್ HDFC ಬ್ಯಾಂಕಿನಲ್ಲಿ ಸುಮಾರು 7.36 ಕೋಟಿ ರೂ. ಮೌಲ್ಯದ ಸ್ಥಿರ ಠೇವಣಿಗಳನ್ನು ಹೊಂದಿದ್ದಾರೆ. ಅವರ ಪತ್ನಿ ಕೂಡ ಗಮನಾರ್ಹ ಹೂಡಿಕೆ ಮಾಡಿದ್ದಾರೆ. ಅದರಲ್ಲಿ ವೇದಾಸ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಸುಮಾರು 95.26 ಕೋಟಿ ರೂ.ಗಳ ಪುಸ್ತಕ ಮೌಲ್ಯದ ಷೇರುಗಳು ಸೇರಿವೆ.
ಕಿಶೋರ್ 1.35 ಲಕ್ಷ ರೂ.ಗಳ ಮೌಲ್ಯದ ಪಚ್ಚೆ ಉಂಗುರವನ್ನು ಹೊಂದಿದ್ದರೆ, ಅವರ ಪತ್ನಿ ಸುಮಾರು 64.58 ಲಕ್ಷ ರೂ.ಗಳ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಹೊಂದಿದ್ದಾರೆ. ಕಿಶೋರ್ 73.87 ಕೋಟಿ ರೂ.ಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯದ ಸ್ಥಿರ ಆಸ್ತಿಗಳನ್ನು ಘೋಷಿಸಿದರೆ, ಅವರ ಪತ್ನಿ 12.42 ಕೋಟಿ ರೂ.ಗಳ ಸ್ಥಿರ ಆಸ್ತಿಗಳನ್ನು ಘೋಷಿಸಿದ್ದಾರೆ. ಕುಟುಂಬದ ಸ್ಥಿರ ಆಸ್ತಿಗಳಲ್ಲಿ ಕೃಷಿಯೇತರ ಭೂಮಿ ಮತ್ತು ವಸತಿ ಗಳು ಸೇರಿವೆ.
ಕಿಶೋರ್ ರೋಹ್ತಾಸ್ ಜಿಲ್ಲೆಯಲ್ಲಿ 9.75 ಕೋಟಿ ರೂ.ಗಳ ಮೌಲ್ಯದ ಅಕ್ಕಿ ಗಿರಣಿಯನ್ನು ಸಹ ಹೊಂದಿದ್ದಾರೆ. ಅವರು ಸ್ವಯಾರ್ಜಿತ ಆಸ್ತಿಗಳ ಮೌಲ್ಯ 59.25 ಕೋಟಿ ರೂ.ಗಳಾಗಿದ್ದರೆ, ಪಿತ್ರಾರ್ಜಿತ ವಸತಿ ಆಸ್ತಿಗಳ ಮೌಲ್ಯ 14.62 ಕೋಟಿ ರೂ.ಗಳಾಗಿದೆ.
ಕಿಶೋರ್ ತಮ್ಮ ವಿರುದ್ಧ ಎಂಟು ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳನ್ನು ಸಹ ಘೋಷಿಸಿದ್ದಾರೆ. ಈ ಪ್ರಕರಣಗಳಲ್ಲಿ ಕ್ರಿಮಿನಲ್ ಮಾನನಷ್ಟ ಮತ್ತು ಕಾನೂನುಬಾಹಿರ ಸಭೆ ಸೇರುವಂತಹ ಆರೋಪಗಳು ಸೇರಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




