portfolio

ದೆಹಲಿ ಸಚಿವ ಸಂಪುಟ: ಕೈಲಾಶ್ ಗೆಹ್ಲೋಟ್, ರಾಜ್'ಕುಮಾರ್ ಆನಂದ್'ಗೆ ಹೆಚ್ಚುವರಿ ಖಾತೆ ನೀಡಲು ವಿಕೆ ಸಕ್ಸೆನಾ ಒಪ್ಪಿಗೆ
ದೆಹಲಿ ಸರ್ಕಾರದ ಸಚಿವರಾದ ಕೈಲಾಶ್ ಗಹ್ಲೋಟ್ ಮತ್ತು ರಾಜಕುಮಾರ್ ಆನಂದ್ ಅವರಿಗೆ ಹೆಚ್ಚುವರಿ ಖಾತೆಗಳ ಜವಾಬ್ದಾರಿಯನ್ನು ನೀಡುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪ್ರಸ್ತಾವನೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಒಪ್ಪಿಗೆ ನೀಡಿದ್ದಾರೆ.

ನಾನು ಸಂದೇಶ ಕೊಡೋಕೆ ಹೋಗ್ತೀನಿ, ತಗೋಳೋಕ್ಕೆ ಹೋಗೋಲ್ಲ: ಸಚಿವ ಆನಂದ್ ಸಿಂಗ್
ದೆಹಲಿ ಭೇಟಿ ಬಳಿಕ ಏನಾಯಿತು ಎಂಬುದನ್ನು ತಿಳಿಯುವ ಸಲುವಾಗಿ ಮುಖ್ಯಮಂತ್ರಿಗಳ ಹಿಂದೆ ಹಿಂದೆ ಓಡಾಡುವ ವ್ಯಕ್ತಿ ನಾನಲ್ಲ. ಇದು ನನ್ನ ವ್ಯಕ್ತಿತ್ವವಲ್ಲ ಎಂದು ಸಚಿವ ಆನಂದ್ ಸಿಂಗ್ ಅವರು ಶುಕ್ರವಾರ ಹೇಳಿದ್ದಾರೆ.

''ಥಿಯೇಟರ್ ಬಂದ್ ಹೈ ತೋ, ಪಿಚ್ಚರ್ ಕೇಸಾ ಚಾಲೂ ಹೋತಾ ಹೈ': ಆನಂದ್ ಸಿಂಗ್ ಕಾಲೆಳೆದ ರಾಜುಗೌಡ
ಖಾತೆ ಹಂಚಿಕೆಯಿಂದ ಅಸಮಾಧಾನಗೊಂಡಿರುವ ಸಚಿವ ಆನಂದ್ ಸಿಂಗ್ ಗೆ ಅವರದ್ದೇ ಪಕ್ಷದ ಇನ್ನೋರ್ವ ಸಚಿವಾಕಾಂಕ್ಷಿ ರಾಜುಗೌಡ ಥಿಯೇಟರ್ ಬಂದ್ ಹೈ ತೋ, ಪಿಚ್ಚರ್ ಕೇಸಾ ಚಾಲೂ ಹೋತಾ ಹೈ ಎಂದು ಕಾಲೆಳೆದಿದ್ದಾರೆ.

ಇಂದು ಸ್ವಾತಂತ್ರ್ಯ ದಿನಾಚರಣೆ, ನಮ್ಮನ್ನು ನಮ್ಮ ಪಾಡಿಗೆ ಬಿಟ್ಟುಬಿಡಿ, ನಾಳೆ ಎಲ್ಲ ಹೇಳುತ್ತೇನೆ: ಸಚಿವ ಆನಂದ್ ಸಿಂಗ್
ಇಂದು ಸ್ವಾತಂತ್ರ್ಯ ದಿನಾಚರಣೆ, ಸ್ವಾತಂತ್ರ್ಯ ಸಿಕ್ಕಿದ ದಿನ ಖುಷಿಯಲ್ಲಿದ್ದೇವೆ, ಏನೂ ಹೇಳುವುದಿಲ್ಲ, ನಾಳೆ ನಿಮಗೆ ಉತ್ತರಿಸುತ್ತೇನೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಕುತೂಹವನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ.

'ಖಾತೆ ಕ್ಯಾತೆ': ಸಿಎಂ ಬೊಮ್ಮಾಯಿ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಲು ಆನಂದ್ ಸಿಂಗ್ ಚಿಂತನೆ?
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟದಿಂದ ಮೊದಲ ವಿಕೆಟ್ ಪತನವಾಗಿದೆಯೇ ಎಂಬ ಗುಸುಗುಸು ವದಂತಿ ಬುಧವಾರ ದಟ್ಟವಾಗಿ ಕೇಳಿಬರುತ್ತಿದೆ.

ಆನಂದ್ ಸಿಂಗ್ ಬಳಿ ಮಾತನಾಡುತ್ತೇನೆ, ಅಂತಿಮವಾಗಿ ಎಲ್ಲ ಸರಿ ಹೋಗುತ್ತದೆ: ಸಿಎಂ ಬಸವರಾಜ ಬೊಮ್ಮಾಯಿ
ಸಚಿವ ಆನಂದ್ ಸಿಂಗ್ ಅವರ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ, ಅವರು ತಮ್ಮ ಅಸಮಾಧಾನ, ನೋವನ್ನು ತೋಡಿಕೊಂಡಿದ್ದಾರೆ. ಅವರ ಜೊತೆ ನಾನು ಕೂಡ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದೇನೆ, ಬೆಂಗಳೂರಿಗೆ ಬಂದ ಮೇಲೆ ಮಾತನಾಡಿ ಎಲ್ಲವನ್ನೂ ಬಗೆಹರಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸತ್ಯಹರಿಶ್ಚಂದ್ರನಂತೆ ರಾಜನ ಸ್ಥಾನಕ್ಕೂ ಸೈ, ಸ್ಮಶಾನ ಕಾಯೋಕೂ ಸೈ: ಶ್ರೀರಾಮುಲು
ಜನಸೇವೆ ವಿಚಾರದಲ್ಲಿ ನಾನು ಹರಿಶ್ಚಂದ್ರನಂತೆ ನಿರಂತರ ಸೇವೆ ಮಾಡುತ್ತೇನೆ. ಸತ್ಯಹರಿಶ್ಚಂದ್ರನಂತೆ ರಾಜನ ಸ್ಥಾನಕ್ಕೂ ಸೈ, ಸ್ಮಶಾನ ಕಾಯೋಕೂ ಸೈ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ

ಖಾತೆ ಹಂಚಿಕೆ ಬೆನ್ನಲ್ಲೇ ಭುಗಿಲೆದ್ದ ಅಸಮಾಧಾನ: ರೆಬೆಲ್ ಆದ ಆನಂದ್ ಸಿಂಗ್, ಎಂಟಿಬಿ ನಾಗರಾಜ್
ಸಿಎಂ ಬಸವರಾಜ ಬೊಮ್ಮಾಯಿ ಮಂತ್ರಿಮಂಡಲದಲ್ಲಿ 29 ಸಚಿವರಿಗೆ ಖಾತೆ ಹಂಚಿಕೆ ಮಾಡಿಯಾದ ಬೆನ್ನಲ್ಲೇ ಹಲವರ ಅಸಮಾಧಾನ ಸ್ಫೋಟಗೊಂಡಿದೆ. ತಮ್ಮಿಷ್ಟದ ಖಾತೆ ಸಿಕ್ಕಿಲ್ಲ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ತಮಗೆ ಸಚಿವ ಸ್ಥಾನ ನೀಡಲಿಲ್ಲವೇಕೆ ಎಂದು ಮುಖ್ಯಮಂತ್ರಿಗಳ ಮನೆಬಾಗಿಲು ತಟ್ಟುತ್ತಿದ್ದಾರೆ.

ಆನಂದ್ ಸಿಂಗ್ ನನ್ನ ಸ್ನೇಹಿತ, ಕರೆದು ಮಾತನಾಡುತ್ತೇನೆ: ಸಿಎಂ ಬೊಮ್ಮಾಯಿ
ಸಚಿವ ಆನಂದ್ ಸಿಂಗ್ ಅವರ ಅಸಮಾಧಾನ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಆನಂದ್ ಸಿಂಗ್ ಅವರು ನನಗೆ ಆತ್ಮೀಯರು, ನನ್ನ ಗೆಳೆಯ ಅವರು, ಹೌದು ಅವರು ಪಕ್ಷದಲ್ಲಿ ಪ್ರಮುಖ ವ್ಯಕ್ತಿ, ಅವರಿಗೆ ಅಸಮಾಧಾನವಾಗಿದ್ದರೆ ಕರೆಸಿ ಮಾತನಾಡುತ್ತೇನೆ ಎಂದಿದ್ದಾರೆ.

