Police

ಬೆಂಗಳೂರು: ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ, ಮಹಿಳೆ ಬಂಧನ
ಕೇಂದ್ರ ಅಪರಾಧ ವಿಭಾಗದ ಮಹಿಳಾ ರಕ್ಷಣಾ ದಳದ ಪೊಲೀಸರಿಂದ ಈ ಕಾರ್ಯಾಚರಣೆ ನಡೆದಿದೆ. ಚಿಕ್ಕಬಾಣಾವರದ ರುದ್ರಮ್ಮ ಲೇಔಟ್‌ನಲ್ಲಿರುವ ಮನೆಯ ಮೇಲೆ ಇತ್ತೀಚೆಗೆ ದಾಳಿ ನಡೆಸಲಾಗಿದೆ.

ಮೈಸೂರು: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ; ವೈವಾಹಿಕ ಕಲಹದಿಂದ ಕೊಲೆ ಎಂದು ಪೋಷಕರ ಆರೋಪ
30 ವರ್ಷದ ವಿವಾಹಿತ ಮಹಿಳೆಯೊಬ್ಬರು ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ವೈವಾಹಿಕ ಕಲಹದಿಂದಾಗಿ ಗೃಹಿಣಿಯನ್ನು ಕೊಲೆ ಮಾಡಲಾಗಿದೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ.

ಬಾಗಲಕೋಟೆಯಲ್ಲಿ ಮನಕಲಕುವ ದೃಶ್ಯ: ಮೃತ ಮಗಳು ಬದುಕಲಿ ಎಂದು ಉಪ್ಪಿನಲ್ಲಿ ದೇಹವಿಟ್ಟ ಪೋಷಕರು, ಕುರಾನ್ ಪಠಣೆ!
ಆಟವಾಡುತ್ತಿದ್ದ ತಮ್ಮ 18 ತಿಂಗಳ ಮಗಳು ಪಕ್ಕದ ಮನೆಯ ಸಂಪ್ಗೆ ಬಿದ್ದು ಮೃತಪಟ್ಟಿದ್ದರಿಂದ ದುಃಖಿತರಾದ ಪೋಷಕರು ಮಗಳು ಬದುಕಲಿ ಎಂದು ಉಪ್ಪಿನ ರಾಶಿ ಮಧ್ಯೆ ಇಟ್ಟಿದ್ದ ಹೃದಯ ವಿದ್ರಾವಕ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಕಲಬುರಗಿ: ಪೋಷಕರು ವಿರೋಧಿಸುತ್ತಾರೆಂದು ಹೆದರಿ ರೈಲಿಗೆ ತಲೆ ಕೊಟ್ಟು ಪ್ರೇಮಿಗಳು ಆತ್ಮಹತ್ಯೆ
ತಮ್ಮ ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸುತ್ತಾರೆ ಎಂದು ಹೆದರಿ ಮನನೊಂದು ಕಲಬುರಗಿ ಜಿಲ್ಲೆ ಶಹಾಬಾದ್ ರೈಲ್ವೆ ನಿಲ್ದಾಣದಲ್ಲಿ ರೈಲಿಗೆ ತಲೆ ಕೊಟ್ಟು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೋಚಿಂಗ್ ಸೆಂಟರ್‌ನಲ್ಲಿ ವಿದ್ಯಾರ್ಥಿಗಳಿಗೆ ಗುಂಡಿನ ದಾಳಿ ತೋರಿಸುವ CCTV ದೃಶ್ಯ ವೈರಲ್: ಖಾನ್ ಸರ್ ವಿರುದ್ಧ FIR ದಾಖಲು; Video
ಪಾಟ್ನಾದ ಖಾನ್ ಗ್ಲೋಬಲ್ ಸ್ಟಡೀಸ್ ಕೋಚಿಂಗ್‌ನಲ್ಲಿ ನಡೆದ ಫೈರಿಂಗ್ ಪ್ರಕರಣದಲ್ಲಿ ಖಾನ್ ಸರ್ ಗೆ ಸಂಕಷ್ಟ ಎದುರಾಗಲಿದೆ. ಘಟನೆಗೆ ಸಂಬಂಧಿಸಿದಂತೆ ಹಲವಾರು ಹೊಸ ವೀಡಿಯೊಗಳು ಹೊರಬಂದ ನಂತರ, ಪೊಲೀಸರು ನಿನ್ನೆ ಸಲ್ಲಿಸಲಾದ ಎಫ್‌ಐಆರ್‌ನಲ್ಲಿ ಫೈಸಲ್ ಖಾನ್ (ಖಾನ್ ಸರ್) ಹೆಸರನ್ನು ಸೇರಿಸಿದ್ದಾರೆ.

Cockroach Janta Party Karnataka: ಬೆಂಗಳೂರಿನಲ್ಲಿ ಮಾನವ ಸರಪಳಿ ಪ್ರತಿಭಟನೆಗೆ ಪೊಲೀಸರ ಬ್ರೇಕ್!
ಈ ಪೋಸ್ಟ್ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ಪೊಲೀಸರು, ಟೌನ್ ಹಾಲ್ ಬಳಿ ಕಾರ್ಯಕ್ರಮ ಆಯೋಜನೆಗೆ ಯಾವುದೇ ವ್ಯಕ್ತಿ, ಸಂಘಟನೆ, ಪಕ್ಷದಿಂದ ಅನುಮತಿ ಕೋರಿರುವ ಯಾವುದೇ ಅರ್ಜಿಯನ್ನು ಸ್ವೀಕರಿಸಿಲ್ಲ. ಈ ಸಂಬಂಧ ಯಾವುದೇ ಅಧಿಕೃತ ಅನುಮತಿ ನೀಡಿಲ್ಲ ಎಂದು ಸ್ಪಷ್ಪಪಡಿಸಿದ್ದಾರೆ.

Mysuru Expressway: ಮದ್ದೂರು ಬಳಿ ಖಾಸಗಿ ಕಂಪನಿ ಉದ್ಯೋಗಿಯ ಕಾರು ಅಡ್ಡಗಟ್ಟಿ 26 ಲಕ್ಷ ರೂ ದರೋಡೆ!
ಮೈಸೂರು ಮೂಲದ ಖಾಸಗಿ ಕಂಪನಿ ಉದ್ಯೋಗಿ ಗೋವಿಂದರಾಜು, ಸಂಜೆ 7 ಗಂಟೆ ಸುಮಾರಿಗೆ ಬೇರೆ ಕಂಪನಿಯಿಂದ ಸಂಗ್ರಹಿಸಿದ ಹಣವನ್ನು ತಲುಪಿಸಲು ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದಾಗ, ದರೋಡೆಕೋರರು ಅವರ ಕಾರನ್ನು ಅಡ್ಡಗಟ್ಟಿದ್ದಾರೆ.

ತುಮಕೂರು: ಹರೆಯದ ಮಗಳನ್ನು ಕೊಂದು, ಶವವನ್ನು ಹೂತಿಟ್ಟ ಕಟುಕ ತಂದೆ!
ಶಿರಾ ತಾಲ್ಲೂಕಿನ ನಿಂಬೆಮರದಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆಕೆಯ ಮದುವೆ ಬಗ್ಗೆ ಕುಟುಂಬದೊಳಗೆ ಪದೇ ಪದೇ ಜಗಳಗಳು ನಡೆಯುತ್ತಿದ್ದರಿಂದ ಆಕೆಯ ತಂದೆ ತಿಮ್ಮರಾಯಪ್ಪನೇ ಕೊಂದಿದ್ದಾರೆ ಎಂಬುದಕ್ಕೆ ತಮ್ಮ ಬಳಿ ಪುರಾವೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು: ಮಾಜಿ ಉಪ ಮೇಯರ್ ಸೊಸೆಯ ಕಾರನ್ನು ತಡೆದು ಕಿರುಕುಳ, ಆಕೆಯ ಪತಿ ಮೇಲೂ ಹಲ್ಲೆ!
ದಾರಿಯಲ್ಲಿ ಹೋಗುವಾಗ ಬಾಗಿಲು ಹಾಕದ ಎರ್ಟಿಗಾ ಕಾರನ್ನು ಆಕೆ ನೋಡಿದ್ದು, ಹಾರ್ನ್ ಮಾಡಿದಾಗ ಆಕೆಯ ಬಳಿಗೆ ಬಂದ ವ್ಯಕ್ತಿಯೊಬ್ಬ ಕಿಟಕಿ ತೆಗೆಯುವಂತೆ ಹೇಳಿ ಆಕೆಯ ಫೋಟೋ ತೆಗೆದಿದ್ದಾನೆ. ಇದರಿಂದ ಗಾಬರಿಗೊಂಡ ರಚನಾ, ಭರತ್ ಗೆ ಕರೆ ಮಾಡಿದ್ದು, ಸ್ಥಳಕ್ಕೆ ಬರುವಂತೆ ಹೇಳಿದ್ದಾಳೆ.

