ರಾಜ್ಯ

ಬಾಗಲಕೋಟೆಯಲ್ಲಿ ಮನಕಲಕುವ ದೃಶ್ಯ: ಮೃತ ಮಗಳು ಬದುಕಲಿ ಎಂದು ಉಪ್ಪಿನಲ್ಲಿ ದೇಹವಿಟ್ಟ ಪೋಷಕರು, ಕುರಾನ್ ಪಠಣೆ!

ಆಟವಾಡುತ್ತಿದ್ದ ತಮ್ಮ 18 ತಿಂಗಳ ಮಗಳು ಪಕ್ಕದ ಮನೆಯ ಸಂಪ್ಗೆ ಬಿದ್ದು ಮೃತಪಟ್ಟಿದ್ದರಿಂದ ದುಃಖಿತರಾದ ಪೋಷಕರು ಮಗಳು ಬದುಕಲಿ ಎಂದು ಉಪ್ಪಿನ ರಾಶಿ ಮಧ್ಯೆ ಇಟ್ಟಿದ್ದ ಹೃದಯ ವಿದ್ರಾವಕ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಬಾಗಲಕೋಟೆಯಲ್ಲಿ ಮನಕಲಕುವ ದೃಶ್ಯ: ಮೃತ ಮಗಳು ಬದುಕಲಿ ಎಂದು ಉಪ್ಪಿನಲ್ಲಿ ದೇಹವಿಟ್ಟ ಪೋಷಕರು, ಕುರಾನ್ ಪಠಣೆ!
ಮೃತ ಮಗು ಅಮೀನಾ
Published On :

ಬಾಗಲಕೋಟೆ: ಆಟವಾಡುತ್ತಿದ್ದ ತಮ್ಮ 18 ತಿಂಗಳ ಮಗಳು ಪಕ್ಕದ ಮನೆಯ ಸಂಪ್ಗೆ ಬಿದ್ದು ಮೃತಪಟ್ಟಿದ್ದರಿಂದ ದುಃಖಿತರಾದ ಪೋಷಕರು ಮಗಳು ಬದುಕಲಿ ಎಂದು ಉಪ್ಪಿನ ರಾಶಿ ಮಧ್ಯೆ ಇಟ್ಟಿದ್ದ ಹೃದಯ ವಿದ್ರಾವಕ ಘಟನೆ ಬಾಗಲಕೋಟೆ ನಗರದ ಸೆಕ್ಟರ್ ನಂಬರ್ 38ರಲ್ಲಿ ನಡೆದಿದೆ. ಉಪ್ಪಿನಲ್ಲಿ ಮೃತದೇಹವಿಟ್ಟರೆ ಮಗು ಬದುಕಿ ಬರುತ್ತದೆ ಎಂದು ನಂಬಿದ್ದರು.

ಮೃತ ಮಗಳು ಅಮೀನಾಳ ಮೃತದೇಹವನ್ನು ಪೋಷಕರು ಎರಡು ಗಂಟೆಯವರೆಗೂ ಉಪ್ಪಿನಲ್ಲಿ ಮುಳುಗಿಸಿಟ್ಟಿದ್ದರು. ಅಷ್ಟೇ ಅಲ್ಲದೆ ಮಗುವಿನ ಕಿವಿ ಬಳಿ ಮೊಬೈಲ್ ನಲ್ಲಿ ಕುರಾನ್ ಹಾಡು ಪ್ಲೇ ಮಾಡಿದ ಪೋಷಕರು ಪ್ರಾರ್ಥಿಸಿದರು. ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ವೈದ್ಯರು ನೀವು ಈ ರೀತಿ ಮಾಡಿದರೂ ಮಗು ಬದುಕುವುದಿಲ್ಲ ಎಂದು ಹೇಳಿದ್ದರಿಂದ ಕೊನೆಗೆ ನೋವಿನಲ್ಲೇ ಪೋಷಕರು ಮಗುವಿನ ಅಂತ್ಯ ಸಂಸ್ಕಾರ ನೆರವೇರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.