PM Narendra Modi

ಮಹಾತ್ಮಾ ಗಾಂಧೀಜಿ ಭಾರತೀಯರಾಗಿದ್ದರೂ, ಭಾರತಕ್ಕೆ ಮಾತ್ರ ಅವರು ಸೀಮಿತರಾಗಿರಲಿಲ್ಲ: ಪಿಎಂ ಮೋದಿ
ಮಹಾತ್ಮಾ ಗಾಂಧೀಜಿಯವರನ್ನು ಭೇಟಿ ಮಾಡದವರು ಸಹ ಅವರಿಂದ ಸ್ಫೂರ್ತಿ ಪಡೆದಿದ್ದಾರೆ. ಜಗತ್ತಿನ ಖ್ಯಾತ ನಾಯಕರಾಗಿದ್ದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಮತ್ತು ನೆಲ್ಸನ್ ಮಂಡೇಲಾ ಅವರ ನೀತಿ ಮತ್ತು ತತ್ವಗಳು ಮಹಾತ್ಮಾ ಗಾಂಧೀಜಿಯವರ ದೃಷ್ಟಿಕೋನಗಳನ್ನು ಆಧರಿಸಿಕೊಂಡಿದ್ದವು ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯಲ್ಲಿ ಹೇಳಿದ್ದಾರೆ.

ಸ್ವಚ್ಛತಾ ಅಭಿಯಾನ ಈಗ ಭಾರತೀಯರ ನಿತ್ಯ ಜೀವನದ ಭಾಗ: ಪಿಎಂ ಮೋದಿ
ಈ ಪ್ರಶಸ್ತಿ ನನಗಲ್ಲ, ನೂರಾರು ಕೋಟಿ ಭಾರತೀಯರಿಗೆ ಸೇರಿದ್ದು, ಸ್ವಚ್ಛ ಭಾರತದ ಕನಸನ್ನು ನನಸು ಮಾಡಲು ಕೈಜೋಡಿಸಿದ ಕೋಟಿ ಕೋಟಿ ಭಾರತೀಯರು ಸ್ವಚ್ಛತಾ ಅಭಿಯಾನವನ್ನು ತಮ್ಮ ದಿನನಿತ್ಯ ಜೀವನದ ಭಾಗವಾಗಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ 'ಗಾಂಧಿ ಸೋಲಾರ್ ಪಾರ್ಕ್' ಉದ್ಘಾಟಿಸಿದ ಪ್ರಧಾನಿ ಮೋದಿ
ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ 50 ಕಿಲೋ ವ್ಯಾಟ್ ತೂಕದ ಗಾಂಧಿ ಸೋಲಾರ್ ಪಾರ್ಕ್ ನ್ನು ಪ್ರಧಾನಿ ನರೇಂದ್ರ ಮೋದಿ ಭಾರತೀಯ ಕಾಲಮಾನದ ಪ್ರಕಾರ ನಿನ್ನೆ ಮಂಗಳವಾರ ಉದ್ಘಾಟಿಸಿದರು.

ಮತ್ತೆ ಟ್ರೋಲ್ ಗೀಡಾದ ಇಮ್ರಾನ್ ಖಾನ್; ಮೋದಿ ವರ್ಸಸ್ ಇಮ್ರಾನ್ ಆತಿಥ್ಯದ ಬಗ್ಗೆ ಚರ್ಚೆ!
ವಿಶ್ವಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಗೆ ಅಮೆರಿಕಾಕ್ಕೆ ಬಂದಿಳಿದ ಪಾಕಿಸ್ತಾನ ಅಧ್ಯಕ್ಷ ಇಮ್ರಾನ್ ಖಾನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಕ್ಕ ಸ್ವಾಗತ ಆತಿಥ್ಯದ ಬಗ್ಗೆ ನೆಟ್ಟಿಗರ ಟ್ವಟ್ಟರ್ ನಲ್ಲಿ ಸಾಕಷ್ಟು ಟ್ರೋಲ್ ಮಾಡಿದ್ದಾರೆ.

ಇಂಧನ ವಲಯ ಸಿಇಒಗಳೊಂದಿಗೆ ಪಿಎಂ ಸಭೆ 'ಫಲಪ್ರದ'ವಾಗಿತ್ತು: ವಿದೇಶಾಂಗ ಇಲಾಖೆ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಒಂದು ವಾರದ ಅಮೆರಿಕಾ ಪ್ರವಾಸದಲ್ಲಿದ್ದು ಇಂಧನ ವಲಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ನಡೆಸಿದ ಮಾತುಕತೆ ಫಲಪ್ರದವಾಗಿತ್ತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಹೌದಿ-ಮೋದಿ ಸಂಭ್ರಮದ ಮಧ್ಯೆ ಕಾರ್ಮೋಡ; ಪ್ರಧಾನಿ ಮೋದಿ ವಿರುದ್ಧ ಕೇಸು ದಾಖಲು!
ಕಾಶ್ಮೀರಿಗಳ ಹಕ್ಕನ್ನು ಪ್ರಧಾನಿ ನರೇಂದ್ರ ಮೋದಿ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಅಮೆರಿಕಾದಲ್ಲಿ ನೆಲೆಸಿರುವ ಇಬ್ಬರು ಕಾಶ್ಮೀರ ಕಾರ್ಯಕರ್ತರು ಅಮೆರಿಕಾದ ಹೌಸ್ಟನ್ ನಲ್ಲಿ ನರೇಂದ್ರ ಮೋದಿ ವಿರುದ್ಧ ಮೊಕದ್ದಮೆ ಹೂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ 69ನೇ ಹುಟ್ಟುಹಬ್ಬ; ಉಕ್ಕಿನ ಮನುಷ್ಯನ 'ಏಕತೆಯ ಪ್ರತಿಮೆ' ವಿಡಿಯೊ ಟ್ವೀಟ್
ತಮ್ಮ 69ನೇ ಹುಟ್ಟುಹಬ್ಬದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಗುಜರಾತ್ ನ ನರ್ಮದಾ ಜಿಲ್ಲೆಯಲ್ಲಿರುವ ಕೆವಡಿಯಾಗೆ ತಲುಪಿದ ನಂತರ ಏಕತೆಯ ಪ್ರತಿಮೆ ಕುರಿತು ಟ್ವೀಟ್ ಮಾಡಿದ್ದಾರೆ. ಸರ್ದಾರ್ ಸರೋವರ ಅಣೆಕಟ್ಟು ಇರುವುದು ಇದೇ ಸ್ಥಳದಲ್ಲಿ.

22ನೇ ವಿಶ್ವ ಬಿಲಿಯರ್ಡ್ಸ್ ಪ್ರಶಸ್ತಿ ಗೆದ್ದ ಪಂಕಜ್ಗೆ ಪ್ರಧಾನಿ ಮೋದಿ ಶ್ಲಾಘನೆ
22ನೇ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಗೆದ್ದ ಪಂಕಜ್ ಅಡ್ವಾಣಿಯನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

ಎಂಜಿನಿಯರ್ ಗಳ ಅಪಾರ ಪರಿಶ್ರಮವಿಲ್ಲದಿದ್ದರೆ ಮಾನವನ ಪ್ರಗತಿ ಅಪೂರ್ಣ: ಪ್ರಧಾನಿ ಮೋದಿ
ಭಾರತ, ಶ್ರೀಲಂಕಾ ಮತ್ತು ಟಾಂಜಾನಿಯಾಗಳಲ್ಲಿ ಸೆಪ್ಟೆಂಬರ್ 15ನ್ನು ಎಂಜಿನಿಯರ್ ದಿನವೆಂದು ಆಚರಿಸಲಾಗುತ್ತಿದೆ.

