ಮಹಾತ್ಮಾ ಗಾಂಧೀಜಿ ಭಾರತೀಯರಾಗಿದ್ದರೂ, ಭಾರತಕ್ಕೆ ಮಾತ್ರ ಅವರು ಸೀಮಿತರಾಗಿರಲಿಲ್ಲ: ಪಿಎಂ ಮೋದಿ
ಮಹಾತ್ಮಾ ಗಾಂಧೀಜಿಯವರನ್ನು ಭೇಟಿ ಮಾಡದವರು ಸಹ ಅವರಿಂದ ಸ್ಫೂರ್ತಿ ಪಡೆದಿದ್ದಾರೆ. ಜಗತ್ತಿನ ಖ್ಯಾತ ನಾಯಕರಾಗಿದ್ದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಮತ್ತು ನೆಲ್ಸನ್ ಮಂಡೇಲಾ ಅವರ ನೀತಿ ಮತ್ತು ತತ್ವಗಳು ಮಹಾತ್ಮಾ ಗಾಂಧೀಜಿಯವರ ದೃಷ್ಟಿಕೋನಗಳನ್ನು ಆಧರಿಸಿಕೊಂಡಿದ್ದವು ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯಲ್ಲಿ ಹೇಳಿದ್ದಾರೆ.

ನ್ಯೂಯಾರ್ಕ್: ಮಹಾತ್ಮಾ ಗಾಂಧೀಜಿಯವರನ್ನು ಭೇಟಿ ಮಾಡದವರು ಸಹ ಅವರಿಂದ ಸ್ಫೂರ್ತಿ ಪಡೆದಿದ್ದಾರೆ. ಜಗತ್ತಿನ ಖ್ಯಾತ ನಾಯಕರಾಗಿದ್ದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಮತ್ತು ನೆಲ್ಸನ್ ಮಂಡೇಲಾ ಅವರ ನೀತಿ ಮತ್ತು ತತ್ವಗಳು ಮಹಾತ್ಮಾ ಗಾಂಧೀಜಿಯವರ ದೃಷ್ಟಿಕೋನಗಳನ್ನು ಆಧರಿಸಿಕೊಂಡಿದ್ದವು ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯಲ್ಲಿ ಹೇಳಿದ್ದಾರೆ.
ಅವರು ಇಂದು ವಿಶ್ವಸಂಸ್ಥೆಯಲ್ಲಿ ಗಾಂಧೀಜಿಯವರ 150ನೇ ಜನ್ಮದಿನಾಚರಣೆ ಅಂಗವಾಗಿ ನಡೆದ ಪ್ರಸ್ತುತ ಜಗತ್ತಿಗೆ ಮಹಾತ್ಮಾ ಗಾಂಧೀಜಿಯವರ ಪ್ರಸ್ತುತತೆ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿ, ಗಾಂಧೀಜಯವರು ತಮ್ಮ ಜೀವನದಲ್ಲಿ ಯಾರ ಮೇಲೆಯೂ ಪ್ರಭಾವ ಬೀರಲು ಪ್ರಯತ್ನ ಮಾಡುತ್ತಿರಲಿಲ್ಲ. ಆದರೆ ಅವರೇ ಬೇರೆಯವರಿಗೆ ಸ್ಪೂರ್ತಿಯ ಸೆಲೆಯಾಗುತ್ತಿದ್ದರು. ನಾವು ಇಂದಿನ 21ನೇ ಶತಮಾನದಲ್ಲಿ ಹೇಗೆ ಪ್ರಭಾವ ಬೀರಬೇಕು ಎಂಬ ಯುಗದಲ್ಲಿ ಬದುಕುತ್ತಿದ್ದೇವೆ ಆದರೆ ಗಾಂಧೀಜಿಯವರ ದೃಷ್ಟಿ ಹೇಗೆ ಸ್ಫೂರ್ತಿ ನೀಡುವುದು ಎಂಬುದಾಗಿತ್ತು ಎಂದರು.
ಭಾರತದ ಸ್ವಾತಂತ್ರ್ಯ ಹೋರಾಟಗಾರನಾಗಿ ಮಾತ್ರವಲ್ಲದೆ ಗಾಂಧೀಜಿಯವರ ಕೊಡುಗೆ ಭಾರತದಿಂದಾಚೆಗೆ ಸಾಕಷ್ಟಿದೆ. ಗಾಂಧೀಜಿಯವರು ಭಾರತೀಯನಾಗಿದ್ದರೂ ಭಾರತಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಅವರಿಗೆ ಪ್ರಜಾಪ್ರಭುತ್ವದ ಸ್ಪಷ್ಟ ತಿಳುವಳಿಕೆ ಇತ್ತು. ಜನರು ಕೇವಲ ಸರ್ಕಾರಗಳ ಮೇಲೆ ಅವಲಂಬಿತವಾಗಿರದೆ ಸ್ವಾವಲಂಬಿಗಳಾಗಿರಬೇಕು ಎಂಬುದನ್ನು ಹೇಳಿಕೊಟ್ಟವರು ಗಾಂಧೀಜಿ ಎಂದು ಸ್ಮರಿಸಿದರು.
ಜಗತ್ತಿನ ಹವಾಮಾನ ಬದಲಾವಣೆಯಾಗಿರಲಿ, ಇಲ್ಲ ಭಯೋತ್ಪಾದನೆಯಾಗಿರಲಿ, ಭ್ರಷ್ಟಾಚಾರವಾಗಿರಲಿ ಅಥವಾ ಸ್ವಾರ್ಥರಹಿತ ಸಮಾಜ ಸೇವೆಯಾಗಿರಲಿ ಮಹಾತ್ಮಾ ಗಾಂಧಿಯವರ ತತ್ವಗಳು ಮಾನವೀಯತೆಯನ್ನು ಕಾಪಾಡಲು ಮಾರ್ಗದರ್ಶನದಂತೆ ಕೆಲಸ ಮಾಡಿದೆ. ಅವರು ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿ ವಹಿಸಿರದಿದ್ದರೆ ಸ್ವರಾಜ್ ಮತ್ತು ಸ್ವಾವಲಂಬನೆ ಹಾದಿ ಹಿಡಿದು ಅದರಡಿಯಲ್ಲಿ ಕೆಲಸ ಮಾಡಿ ಪ್ರಸಿದ್ಧಿಯಾಗುತ್ತಿದ್ದರು. ಭಾರತ ಎದುರಿಸುತ್ತಿರುವ ದೊಡ್ಡ ಸವಾಲುಗಳನ್ನು ಬಗೆಹರಿಸಲು ಅವರ ದೃಷ್ಟಿಕೋನ ಬಹುದೊಡ್ಡ ಮಾಧ್ಯಮವಾಗಿ ಕೆಲಸ ಮಾಡಿದೆ ಎಂದು ಕೊಂಡಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


