Paris Olympics 2024

Olympics 2024: ಪದಕದ ಭರವಸೆ ಮೂಡಿಸಿದ್ದ ಭಾರತದ ಬ್ಯಾಡ್ಮಿಂಟನ್ ಜೋಡಿಗೆ ಸೋಲು!
ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಮತ್ತು ವಿಶ್ವದ ಐದನೇ ಶ್ರೇಯಾಂಕದ ಜೋಡಿ ಸಾತ್ವಿಕ್ ಮತ್ತು ಚಿರಾಗ್ ಅವರು ವಿಶ್ವದ ಏಳನೇ ಶ್ರೇಯಾಂಕದ ಚಿಯಾ ಮತ್ತು ಸೋಹ್ ಜೋಡಿಯ ವಿರುದ್ಧ ಸೋಲು ಕಂಡಿದ್ದಾರೆ.

Paris Olympics 2024: ಹಾಕಿಯಲ್ಲಿ ಭಾರತಕ್ಕೆ ಮೊದಲ ಸೋಲು, ಗೆದ್ದು ಬೀಗಿದ ಬೆಲ್ಜಿಯಂ!
18ನೇ ನಿಮಿಷದಲ್ಲಿ ಭಾರತದ ಪರ ಅಭಿಷೇಕ್ ಗೋಲು ಹೊಡೆದು ಮುನ್ನಡೆಗೆ ತಂದರು. ಆದರೆ, 33ನೇ ನಿಮಿಷದಲ್ಲಿ ಬೆಲ್ಜಿಯಂ ಪರ ತಿಬ್ಯು ಸ್ಟಾಕ್ ಬ್ರೋಕ್ಸ್ ಮತ್ತು 44ನೇ ನಿಮಿಷದಲ್ಲಿ ಜಾನ್-ಜಾನ್ ಡೊಹ್ಮೆನ್ ಗೋಲು ಗಳಿಸುವುದರೊಂದಿಗೆ ಬೆಲ್ಜಿಯಂ ಗೆಲುವು ಸಾಧಿಸಿತು.

Paris Olympics 2024: ಶೂಟಿಂಗ್ ನಲ್ಲಿ ಸ್ವಪ್ನಿಲ್ ಕುಸಾಲೆಗೆ ಕಂಚು, ಭಾರತಕ್ಕೆ 3ನೇ ಪದಕ
ಪ್ಯಾರಿಸ್ ಒಲಿಂಪಿಕ್ಸ್ನ ಪುರುಷರ 50 ಮೀ ರೈಫಲ್ 3 ಸುತ್ತಿನಲ್ಲಿ ಸ್ವಪ್ನಿಲ್ ಕುಸಾಲೆ ಕಂಚಿನ ಪದಕ ಗೆದ್ದಿದ್ದಾರೆ. 8 ಮಂದಿ ಒಳಗೊಂಡಿದ್ದ ಫೈನಲ್ ಸುತ್ತಿನಲ್ಲಿ ಒಟ್ಟು 451.4 ಅಂಕಗಳನ್ನು ಕಲೆಹಾಕುವ ಮೂಲಕ ಭಾರತೀಯ ಶೂಟರ್ ಮೂರನೇ ಸ್ಥಾನ ಪಡೆದಿದ್ದಾರೆ.

Olympics 2024 5ನೇ ದಿನ: ಭಾರತೀಯ ಕ್ರೀಡಾಪಟುಗಳ ಮುನ್ನಡೆ; ಫೈನಲ್, ಪ್ರೀ ಕ್ವಾರ್ಟರ್, ಕ್ವಾರ್ಟರ್ ಫೈನಲ್ ಗೆ ಪ್ರವೇಶ!
ಪ್ಯಾರಿಸ್ 2024ರ ಒಲಿಂಪಿಕ್ಸ್ ನಲ್ಲಿ ಭಾರತೀಯ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು ಐದನೇ ದಿನವಾದ ಇಂದು ಹಲವು ಕ್ರೀಡಾಪಟುಗಳು ಮುಂದಿನ ಹಂತಕ್ಕೆ ತಲುಪಿದ್ದಾರೆ.

ಭಾರತದ Olympics ಮಹತ್ವಾಕಾಂಕ್ಷೆ ಬೆಳಗುವುದಕ್ಕೆ ಕಾರಣ ಸರ್ಕಾರ-ಕಾರ್ಪೋರೇಟ್ ಕಂಪನಿಗಳ ಜುಗಲ್ಬಂದಿ! (ತೆರೆದ ಕಿಟಕಿ)
ಭಾರತೀಯರು ಅರ್ಹತೆ ಗಳಿಸಿರುವ ಒಟ್ಟೂ 16 ವಿಭಾಗಗಳಲ್ಲಿ 470 ಕೋಟಿ ರುಪಾಯಿಗಳನ್ನು ವ್ಯಯಿಸಲಾಗಿದೆ. ಈ ಹಂತದಲ್ಲೇ ಸರ್ಕಾರಕ್ಕೆ ಸಿಕ್ಕಿರುವುದು ತಮ್ಮ ಸಾಮಾಜಿಕ ಜವಾಬ್ದಾರಿ ಹಣಕಾಸು ನಿಧಿ ಅಡಿ ಹಣ ಹರಿಸಿರುವ ಭಾರತದ ಉದ್ಯಮ ದಿಗ್ಗಜ ಸಮೂಹಗಳ ಸಹಕಾರ.

Olympics 2024 Hockey: ಐರ್ಲೆಂಡ್ ವಿರುದ್ಧ ಭಾರತಕ್ಕೆ 2-0 ಗೋಲು ಗೆಲುವು; ಪಟ್ಟಿಯಲ್ಲಿ ಅಗ್ರಸ್ಥಾನ!
ಹರ್ಮನ್‌ಪ್ರೀತ್ ಸಿಂಗ್ ಎರಡು ಗೋಲು ಬಾರಿಸುವ ಮೂಲಕ ಭಾರತೀಯ ಪುರುಷರ ಹಾಕಿ ತಂಡ ಮಂಗಳವಾರ ಯವೆಸ್-ಡು-ಮನೋಯಿರ್ ಕ್ರೀಡಾಂಗಣದಲ್ಲಿ ಐರ್ಲೆಂಡ್ ತಂಡವನ್ನು 2-0 ಗೋಲು ಅಂತರದಿಂದ ಸೋಲಿಸಿತು.

Paris Olympics 2024: ಶೂಟಿಂಗ್ನಲ್ಲಿ ಭಾರತಕ್ಕೆ ಮತ್ತೊಂದು ಪದಕ; ಕಂಚು ಗೆದ್ದ ಮನು ಭಾಕರ್-ಸರಬ್ಜೋತ್ ಸಿಂಗ್ ಜೋಡಿ
2 ದಿನಗಳ ಹಿಂದಷ್ಟೇ ಮಹಿಳೆಯರ 10 ಮೀ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದ ಮನು, ಇದೀಗ 2ನೇ ಪದಕ ಗೆಲ್ಲುವ ಮೂಲಕ ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಜಯಿಸಿದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Paris Olympics 2024: ಒಲಿಂಪಿಕ್ಸ್ ನಿರ್ಗಮನದ ಬೆನ್ನಲ್ಲೇ ಅಂತಾರಾಷ್ಟ್ರೀಯ ಟೆನಿಸ್ಗೆ ಕನ್ನಡಿಗ ರೋಹನ್ ಬೋಪಣ್ಣ ವಿದಾಯ!
ಜುಲೈ 28ರ ಭಾನುವಾರ ನಡೆದ ಡಬಲ್ಸ್ ವಿಭಾಗದ ಆರಂಭಿಕ ಸುತ್ತಿನಲ್ಲಿ ಫ್ರೆಂಚ್ ಜೋಡಿ ಗೇಲ್ ಮೊನ್ಫಿಲ್ಸ್ ಮತ್ತು ಎಡ್ವರ್ಡ್ ರೋಜರ್-ವಾಸೆಲಿನ್ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿದ್ದರು.

Paris Olympics 2024: ಒಲಿಂಪಿಕ್ಸ್ ಗೆ ಮತ್ತೆ Covid ಭೀತಿ; ಬೆಳ್ಳಿ ಪದಕ ಗೆದ್ದ ಈಜು ಪಟುವಿಗೆ ಸೋಂಕು!
ಒಲಿಂಪಿಕ್ ಕ್ರೀಡಾಕೂಟದಲ್ಲಿ (Paris Olympics 2024) 100 ಮೀಟರ್ ಬ್ರೆಸ್ಟ್ಸ್ಟ್ರೋಕ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದಿರುವ ಬ್ರಿಟಿಷ್ ಈಜುಗಾರ ಆಡಮ್ ಪೀಟಿ ಅವರಿಗೆ ಕೋವಿಡ್ ಸೋಂಕು ತಗುಲಿದೆ.

