Panchkula

ರೋಹ್ಟಕ್ ಜೈಲಿನಲ್ಲೇ ರಾಮ್ ರಹೀಂಗೆ ಶಿಕ್ಷೆ ಪ್ರಮಾಣ ಪ್ರಕಟ!
ಅತ್ಯಾಚಾರ ಪ್ರಕರಣ ಸಂಬಂಧ ಬಾಬಾ ರಾಮ್ ರಹೀಂಗೆ ಸೋಮವಾರ ಶಿಕ್ಷೆ ಪ್ರಮಾಣ ಪ್ರಕಟವಾಗಲಿದ್ದು, ಬಾಬಾ ರಾಮ್ ರಹೀಂ ಇರುವ ರೋಹ್ಟಕ್ ಜೈಲಿನಲ್ಲೇ ಶಿಕ್ಷೆ ಪ್ರಮಾಣ ಪ್ರಕಟಿಸಲು ನಿರ್ಧರಿಸಲಾಗಿದೆ.

ಅನುಯಾಯಿಗಳೊಂದಿಗೆ ಸೇರಿಕೊಂಡಿದ್ದ ದುಷ್ಕರ್ಮಿಗಳಿಂದ ಹಿಂಸಾಚಾರ: ಸಿಎಂ ಖಟ್ಟರ್ ಟ್ವಿಸ್ಟ್
ಶುಕ್ರವಾರ ಪಂಚಕುಲದಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರು ಹೊಸದೊಂದು ಟ್ವಿಸ್ಟ್ ನೀಡಿದ್ದು, ಹಿಂಸಾಚಾರ ನಡೆಸಿದ್ದು, ಬಾಬಾ ಅನುಯಾಯಿಗಳಲ್ಲ..ಅವರೊಂದಿಗೆ ಸೇರಿಕೊಂಡಿದ್ದ ದುಷ್ಕರ್ಮಿಗಳು ಎಂದು ಹೇಳಿದ್ದಾರೆ.

ವ್ಯಾಪಕ ಹಿಂಸಾಚಾರದ ಬಳಿಕ ಸಹಜ ಸ್ಥಿತಿಯತ್ತ ಪಂಚಕುಲ!
ಗುರ್ಮಿತ್ ರಾಮ್ ರಹೀಮ್ ಸಿಂಗ್ ವಿರುದ್ಧದ ಅತ್ಯಾಚಾರ ಪ್ರಕರಣದ ತೀರ್ಪು ಹೊರ ಬೀಳುತ್ತಿದ್ದಂತೆಯೇ ಹೊತ್ತಿ ಉರಿದಿದ್ದ ಪಂಚಕುಲ ಶನಿವಾರ ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳುತ್ತಿದೆ.

ಅತ್ಯಾಚಾರ ದೋಷಿ ಬಾಬಾ ರಾಮ್ ರಹೀಂಗೆ ವಿಶೇಷ ಸೆಲ್, ಸಹಾಯಕ, ಮಿನರಲ್ ವಾಟರ್!
ಅತ್ಯಾಚಾರ ಪ್ರಕರಣ ಸಂಬಂಧ ಜೈಲು ಸೇರಿರುವ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಬಾಬಾ ರಾಮ್ ರಹೀಂ ಗೆ ರೋಹ್ಟಕ್ ನ ಸುನಾರಿಯಾ ಜೈಲಿನಲ್ಲಿ ವಿಶೇಷ ಕೊಠಡಿ ನೀಡಲಾಗಿದ್ದು, ಓರ್ವ ಸಹಾಯಕನನ್ನು ಬಾಬಾ ಸೇವೆಗೆ ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ.

4 ರಾಜ್ಯಗಳ ಹಿಂಸಾಚಾರಕ್ಕೆ ಕಾರಣವಾದ ರಾಮ್ ರಹೀಮ್ ವಿರುದ್ಧದ ಅತ್ಯಾಚಾರ ಪ್ರಕರಣದ ಸಂಪೂರ್ಣ ವಿವರ!
ಡೇರಾ ಸಚ್ಚಾ ಸೌಧ ಸಂಸ್ಥೆಯ ಮುಖ್ಯಸ್ಥ ರಾಮ್ ರಹೀಮ್ ಸಿಂಗ್ ವಿರುದ್ಧದ ಅತ್ಯಾಚಾರ ಪ್ರಕರಣ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ಇದೇ ಪ್ರಕರಣ ಸಂಬಂಧ ಇದೀಗ ರಾಜಧಾನಿ ದೆಹಲಿ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ವ್ಯಾಪಕ ಹಿಂಸಾಚಾರ ಭುಗಿಲೆದ್ದಿದೆ.

ರಾಮ್ ರಹೀಮ್ ತೀರ್ಪು: ಹರ್ಯಾಣ, ಪಂಜಾಬ್ ರಾಜ್ಯಗಳು ಸ್ಥಬ್ದ!
ಬಾಬಾ ಗುರ್ಮಿತ್ ರಾಮ್ ರಹೀಮ್ ಸಿಂಗ್ ವಿರುದ್ಧದ ಅತ್ಯಾಚಾರ ಪ್ರಕರಣದ ತೀರ್ಪು ಹೊರ ಬೀಳುತ್ತಿದ್ದಂತೆಯೇ ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳು ಸ್ತಬ್ಧಗೊಂಡಿವೆ.

ದೇವಮಾನವ ರಾಮ್ ರಹೀಮ್ ಅತ್ಯಾಚಾರ ಪ್ರಕರಣದ ದೋಷಿ: ಪಂಚಕುಲ ಸಿಬಿಐ ಕೋರ್ಟ್ ಮಹತ್ವದ ತೀರ್ಪು
ಮಹತ್ವದ ಬೆಳವಣಿಗೆಯಲ್ಲಿ ಸ್ವಯಂ ಘೋಷಿತ ದೇವಮಾನವ ಗುರ್ಮಿತ್ ರಾಮ್ ರಹೀಮ್ ಸಿಂಗ್ ವಿರುದ್ಧದ ಅತ್ಯಾಚಾರ ಆರೋಪ ಸಾಬೀತಾಗಿದೆ ಎಂದು ಪಂಚಕುಲ ಸಿಬಿಐ ಕೋರ್ಟ್ ಹೇಳಿದೆ.

ಪಂಚಕುಲ ಕೋರ್ಟ್ ಆವರಣ ಪ್ರಕ್ಷುಬ್ಧ: 45 ನಿಮಿಷದಲ್ಲಿ 56 ಹಿಂಸಾಚಾರ ಪ್ರಕರಣ
ದೇವಮಾನವ ರಾಮ್ ರಹೀಮ್ ವಿರುದ್ಧದ ಅತ್ಯಾಚಾರ ಪ್ರಕರಣ ತೀರ್ಪು ಹೊರ ಬಿದ್ದ ಕೇವಲ 45 ನಿಮಿಷದಲ್ಲೇ ಸಿಬಿಐ ವಿಶೇಷ ಕೋರ್ಟ್ ಇರುವ ಪಂಚಕುಲ ಪ್ರದೇಶ ಪ್ರಕ್ಷುಬ್ಧಗೊಂಡಿದ್ದು, 56 ಹಿಂಸಾಚಾರ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.

ಹಿಂಸಾಚಾರಕ್ಕೆ ಪಂಚಕುಲದಲ್ಲಿ 10 ಬಲಿ; ಪಂಜಾಬ್, ಹರ್ಯಾಣದ ಹಲವೆಡೆ ಕರ್ಫ್ಯೂ ಜಾರಿ
ಡೇರಾ ಸಚಾ ಸೌದ ಸಂಸ್ಥೆಯ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರು ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಪಂಚಕುಲಾದ ಸಿಬಿಐ ನ್ಯಾಯಾಲಯ ತೀರ್ಪು ನೀಡಿದ ಬೆನ್ನಲ್ಲೇ ಅವರ ಅನುಯಾಯಿಗಳು ಹಿಂಸಾಚಾರಕ್ಕಿಳಿದಿದ್ದು, ಪಂಚಕುಲದಲ್ಲಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

