ಅತ್ಯಾಚಾರ ದೋಷಿ ಬಾಬಾ ರಾಮ್ ರಹೀಂಗೆ ವಿಶೇಷ ಸೆಲ್, ಸಹಾಯಕ, ಮಿನರಲ್ ವಾಟರ್!
ಅತ್ಯಾಚಾರ ಪ್ರಕರಣ ಸಂಬಂಧ ಜೈಲು ಸೇರಿರುವ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಬಾಬಾ ರಾಮ್ ರಹೀಂ ಗೆ ರೋಹ್ಟಕ್ ನ ಸುನಾರಿಯಾ ಜೈಲಿನಲ್ಲಿ ವಿಶೇಷ ಕೊಠಡಿ ನೀಡಲಾಗಿದ್ದು, ಓರ್ವ ಸಹಾಯಕನನ್ನು ಬಾಬಾ ಸೇವೆಗೆ ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ.

ಚಂಡೀಘಡ: ಅತ್ಯಾಚಾರ ಪ್ರಕರಣ ಸಂಬಂಧ ಜೈಲು ಸೇರಿರುವ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಬಾಬಾ ರಾಮ್ ರಹೀಂ ಗೆ ರೋಹ್ಟಕ್ ನ ಸುನಾರಿಯಾ ಜೈಲಿನಲ್ಲಿ ವಿಶೇಷ ಕೊಠಡಿ ನೀಡಲಾಗಿದ್ದು, ಓರ್ವ ಸಹಾಯಕನನ್ನು ಬಾಬಾ ಸೇವೆಗೆ ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ.
ಅಂತೆಯೇ ಜೈಲಿನ ಕೊಠಡಿಯಲ್ಲಿ ಬಾಬಾಗೆ ವಿಶೇಷ ಮಿನರಲ್ ನೀರಿನ ಬಾಟಲ್ ವ್ಯವಸ್ಥೆ ಮಾಡಲಾಗಿದ್ದು, ಜೈಲಿನ ಸುತ್ತ ಮುತ್ತ ವ್ಯಾಪಕ ಭದ್ರತೆ ಒದಗಿಸಲಾಗಿದೆ. ಇಂದು ಜೈಲಿನ ಬಳಿ ಬಾಬಾ ಅನುಯಾಯಿಗಳು ಆಗಮಿಸುವ ಶಂಕೆ ಇರುವುದರಿಂದ ಜೈಲಿನ ಭದ್ರತೆಯನ್ನು ಗಣನೀಯವಾಗಿ ಹೆಚ್ಚಳ ಮಾಡಲಾಗಿದೆ. ಬಾಬಾ ರಾಮ್ ರಹೀಮ್ ಜೈಲು ಸೇರುತ್ತಿದ್ದಂತೆಯೇ ಜೈಲಿನ ಸುಮಾರು 5 ಕಿ.ಮೀ ವ್ಯಾಪ್ತಿಯಲ್ಲಿ ವ್ಯಾಪಕ ಭದ್ರತೆ ಒದಗಿಸಲಾಗಿದ್ದು, ಸುಮಾರು 6 ತುಕಡಿಗಳ ಕೇಂದ್ರೀಯ ಮೀಸಲು ಪಡೆ, ಸಿಐಎಸ್ ಎಫ್ ಹಾಗೂ ಬಿಎಸ್ ಎಫ್ ಯೋಧರನ್ನು ರೋಹ್ಟಕ್ ನಲ್ಲಿ ಭದ್ರತೆಗೆ ನಿಯೋಜಿಸಲಾಗಿದೆ. ಇಡೀ ಜೈಲಿಗೆ ಸೇನಾಪಡೆಗಳ ಭದ್ರಕೋಟೆಯನ್ನು ನಿರ್ಮಿಸಲಾಗಿದೆ.
ಬಾಬಾ ಅನುಪಸ್ಥಿತಿಯಲ್ಲಿ ಶಿಕ್ಷೆ ಪ್ರಮಾಣ ಪ್ರಕಟ ಸಾಧ್ಯತೆ
ಇದೇ ವೇಳೆ ಬಾಬಾ ರಾಮ್ ರಹೀಂ ವಿರುದ್ಧದ ಅತ್ಯಾಚಾರ ಪ್ರಕರಣದ ಶಿಕ್ಷೆ ಪ್ರಮಾಣವನ್ನು ಇದೇ ಸೋಮವಾರ ಪಂಚಕುಲದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯ ಪ್ರಕಟಿಸಲಿದ್ದು, ದೋಷಿ ಬಾಬಾ ಅನುಪಸ್ಥಿತಿಯಲ್ಲೇ ಶಿಕ್ಷೆ ಪ್ರಮಾಣ ಪ್ರಕಟ ಮಾಡುವ ಸಾಧ್ಯತೆ ಇದೆ. ನಿನ್ನೆ ತೀರ್ಪು ಪ್ರಕಟವಾಗುತ್ತಿದ್ದಂತೆಯೇ ವ್ಯಾಪಕತ ಹಿಂಸಾಚಾರ ಭುಗಿಲೆದ್ದ ಪರಿಣಾಮ ಸೋಮವಾರ ಅವರನ್ನು ನ್ಯಾಯಾಲಯಕ್ಕೆ ಕರೆತರದಿರಲು ಪೊಲೀಸರು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಅಪರಾಧಿಯ ಅನುಪಸ್ಥಿತಿಯಲ್ಲೇ ಪಂಚಕುಲ ವಿಶೇಷ ಸಿಬಿಐ ಕೋರ್ಟ್ ಶಿಕ್ಷೆ ಪ್ರಮಾಣ ಪ್ರಕಟ ಮಾಡಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


