Pahalgam terror attack

ಪಹಲ್ಗಾಮ್ ದಾಳಿಗೆ ರಾಹುಲ್ ಗಾಂಧಿ ವಿದೇಶ ಪ್ರವಾಸ ಲಿಂಕ್ ಮಾಡಿ ಸೋಷಿಯಲ್ ಮೀಡಿಯಾ ಪೋಸ್ಟ್: ಕರ್ನಾಟಕ ಬಿಜೆಪಿ ಐಟಿ ಸೆಲ್ ವಿರುದ್ಧ ಪ್ರಕರಣ ದಾಖಲು
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾನೂನು ಮತ್ತು ಮಾನವ ಹಕ್ಕುಗಳ ಘಟಕದ ಅಧ್ಯಕ್ಷ ಸಿ.ಎಂ. ಧನಂಜಯ ಅವರು ದೂರು ದಾಖಲಿಸಿದ್ದಾರೆ.

ತಾಯಿ-ಮಗಳು ಶ್ರೀನಗರಕ್ಕೆ ತೆರಳಲು ಕಾಶ್ಮೀರಿ ಚಾಲಕನ ಸಹಾಯ: 'ಉಗ್ರರು ಸೇನಾ ಸಮವಸ್ತ್ರ ಧರಿಸಿದ್ದರಿಂದ ಮಿಲಿಟರಿ ಕವಾಯತು ಎಂದುಕೊಂಡಿದ್ದೆವು'
ದಾಳಿ ನಡೆದಾಗ ನಾವು ಪಹಲ್ಗಾಮ್ ತೊರೆದಿದ್ದೆವು. ಭಯೋತ್ಪಾದಕರು ಸೇನಾ ಸಮವಸ್ತ್ರ ಧರಿಸಿದ್ದರಿಂದ, ಹೆಚ್ಚಿನ ಜನರು ಇದು ಮಿಲಿಟರಿ ಕವಾಯತು ಎಂದು ಭಾವಿಸಿದ್ದರು.

Pahalgam terror attack: ಶಿವಮೊಗ್ಗದ ನಿವಾಸದಲ್ಲಿ ಮೃತ ಮಂಜುನಾಥ ರಾವ್ ಅಂತಿಮ ದರ್ಶನ, ಅಂತಿಮ ವಿಧಿವಿಧಾನ
ಇಂದು ಬೆಳಗ್ಗೆ ಮಂಜುನಾಥ್ ಮೃತದೇಹ ಶಿವಮೊಗ್ಗ ತಲುಪಿದ್ದು, ಸರ್ಕಾರದ ಪರವಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿ ಅಂತಿಮ ದರ್ಶನ ಪಡೆದಿದ್ದಾರೆ.

Pahalgam terror attack: 5,000ಕ್ಕೂ ಹೆಚ್ಚು ಕರ್ನಾಟಕದ ಪ್ರವಾಸಿಗರು ಜಮ್ಮು-ಕಾಶ್ಮೀರ ಟೂರ್ ರದ್ದು!
ಕರ್ನಾಟಕ ಪ್ರವಾಸೋದ್ಯಮ ಸಂಘ (ಕೆಟಿಎಸ್) ಸಂಗ್ರಹಿಸಿದ ಪ್ರಾಥಮಿಕ ಮಾಹಿತಿಯ ಪ್ರಕಾರ, ಪ್ರವಾಸ ನಿರ್ವಾಹಕರ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗಲು ಯೋಜಿಸಿದ್ದ 5,000 ಕ್ಕೂ ಹೆಚ್ಚು ಪ್ರವಾಸಿಗರು ತಮ್ಮ ಬುಕಿಂಗ್‌ಗಳನ್ನು ರದ್ದುಗೊಳಿಸಿದ್ದಾರೆ.

'ಒಬ್ಬರ ಧರ್ಮ ಅವರ ಮನೆಯೊಳಗೆ ನಾಲ್ಕು ಗೋಡೆ ಮಧ್ಯೆ ಸೀಮಿತವಾಗಿರಬೇಕು': ಉಗ್ರರ ಗುಂಡಿಗೆ ಬಲಿಯಾದ ಮಂಜುನಾಥ ರಾವ್ ಬಾವನ ಪ್ರತಿಕ್ರಿಯೆ
ಧರ್ಮವು ವೈಯಕ್ತಿಕ ವಿಷಯ. ಅದು ಒಬ್ಬರ ಮನೆ ಅಥವಾ ಪೂಜಾ ಸ್ಥಳಗಳ ನಾಲ್ಕು ಗೋಡೆಗಳ ಒಳಗೆ ಇರಬೇಕು. ಅದನ್ನು ಎಂದಿಗೂ ಭಯೋತ್ಪಾದನೆ ಅಥವಾ ಹಿಂಸಾಚಾರದ ಮೂಲಕ ಇತರರ ಮೇಲೆ ಹೇರಬಾರದು.

ನಿಮ್ಮೊಂದಿಗೆ ನಾವಿದ್ದೇವೆ: ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಮಂಜುನಾಥ್ ಕುಟುಂಬಕ್ಕೆ ಡಿ.ಕೆ ಶಿವಕುಮಾರ್ ಸಾಂತ್ವನ
ನಿಮ್ಮ ಜೊತೆ ನಾವಿದ್ದೇವೆ. ನಮ್ಮ ಸರ್ಕಾರ ನಿಮ್ಮ ಕುಟುಂಬ ಸದಸ್ಯರ ದುಃಖದಲ್ಲಿ ಭಾಗಿಯಾಗಿದೆ. ನಾನು ನಿಮ್ಮ ಕುಟುಂಬದ ಸದಸ್ಯನಂತಿದ್ದು, ಧೈರ್ಯ ಕಳೆದುಕೊಳ್ಳಬೇಡಿ ಎಂದು ಸ್ಥೈರ್ಯ ತುಂಬಿದರು.

ಪಹಲ್ಗಾಮ್ ಉಗ್ರರ ದಾಳಿ: ಕನ್ನಡಿಗರ ಮೃತದೇಹ ತಾಯ್ನಾಡಿಗೆ ಆಗಮನ; ಕಾಶ್ಮೀರದಲ್ಲಿ ಸಿಲುಕಿರುವ 180 ಪ್ರವಾಸಿಗರಿಗೆ ವಿಶೇಷ ವಿಮಾನ
ಬೆಂಗಳೂರಿನ ಭರತ್ ಭೂಷಣ್ ಮತ್ತು ಶಿವಮೊಗ್ಗದ ರಿಯಲ್ ಎಸ್ಟೇಟ್ ಏಜೆಂಟ್ ಮಂಜುನಾಥ ರಾವ್ ಅವರ ಮೃತದೇಹಗಳನ್ನು ಹೊತ್ತ ವಿಮಾನವು ಬೆಳಗಿನ ಜಾವ 3.45 ರ ಸುಮಾರಿಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.

ಪಹಲ್ಗಾಮ್ ಉಗ್ರರ ದಾಳಿ: ಇಂದು ಸರ್ವಪಕ್ಷ ಸಭೆ ಕರೆದ ಕೇಂದ್ರ ಸರ್ಕಾರ
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಕೇಂದ್ರ ಗೃಹಸಚಿವ ಅಮಿತ್ ಶಾ ಅವರೂ ಉಪಸ್ಥಿತರಿರಲಿದ್ದಾರೆ. ಪಹಲ್ಗಾಮ್ ದಾಳಿಯ ಕುರಿತು ಸರ್ವಪಕ್ಷ ಸಭೆಗೆ ಮಾಹಿತಿ ನೀಡಲಿದ್ದಾರೆ.


