P Chidambaram

ರಾಜಸ್ಥಾನ, ಪ.ಬಂಗಾಳ ಘಟನೆಗಳ ಮುಂದಿಟ್ಟುಕೊಂಡು ಮಣಿಪುರ ಹಿಂಸಾಚಾರ ಸಮರ್ಥಿಸಿಕೊಳ್ಳಬೇಡಿ: ಪಿ ಚಿದಂಬರಂ
ರಾಜಸ್ಥಾನ, ಪಶ್ಚಿಮ ಬಂಗಾಳ ಘಟನೆಗಳ ಮುಂದಿಟ್ಟುಕೊಂಡು ಮಣಿಪುರ ಹಿಂಸಾಚಾರವನ್ನು ಸಮರ್ಥಿಸಿಕೊಳ್ಳಬೇಡಿ ಎಂದು ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಹೇಳಿದ್ದಾರೆ.

ಏಕರೂಪ ನಾಗರಿಕ ಸಂಹಿತೆಯನ್ನು ಜನರ ಮೇಲೆ ಬಲವಂತವಾಗಿ ಹೇರಲು ಸಾಧ್ಯವಿಲ್ಲ: ಪಿ ಚಿದಂಬರಂ
ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸಿದ ಒಂದು ದಿನದ ನಂತರ, ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು 'ಅಜೆಂಡಾ-ಚಾಲಿತ ಬಹುಮತದ ಸರ್ಕಾರದಿಂದ' ಇದನ್ನು ಬಲವಂತವಾಗಿ ಜನರ ಮೇಲೆ ಹೇರಲು ಸಾಧ್ಯವಿಲ್ಲ ಎಂದು ಹೇಳಿದರು.

ನೋಟು ಅಮಾನ್ಯೀಕರಣದ ಮೂರ್ಖ ನಿರ್ಧಾರ ಮುಚ್ಚಿಕೊಳ್ಳಲು 2000 ರೂ. ನೋಟು ಹಿಂಪಡೆಯಲಾಗಿದೆ: ಚಿದಂಬರಂ
2 ಸಾವಿರ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಆರ್‌ಬಿಐ ಘೋಷಿಸಿದ ಬೆನ್ನಲ್ಲೇ ಕಾಂಗ್ರೆಸ್‌ನ ಹಿರಿಯ ನಾಯಕ ಪಿ ಚಿದಂಬರಂ ಅವರು ಶುಕ್ರವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, 500, 1000 ರೂಪಾಯಿ ನೋಟು ಅಮಾನ್ಯೀಕರಣದ ಮೂರ್ಖತನದ ನಿರ್ಧಾರವನ್ನು ಮುಚ್ಚಿಹಾಕಲು 2000 ರೂ. ನೋಟಿನ ಚಲಾವಣೆಯನ್ನು ಹಿಂಪಡೆಯಲಾಗಿದೆ ಎಂದಿದ್ದಾರೆ.

'ಅಚ್ಚರಿ ಬದಲಾವಣೆ'.. ಬಜರಂಗದಳ ‘ಬಜರಂಗಬಲಿ’ ಆಗಿದ್ದೇಗೆ?; ಪ್ರಧಾನಿ ಮೋದಿ ಗೆ ಪಿ ಚಿದಂಬರಂ ಪ್ರಶ್ನೆ
ಕಾಂಗ್ರೆಸ್ ಪಕ್ಷದ ಬಜರಂಗದಳ ಸಂಘಟನೆ ನಿಷೇಧ ವಿಚಾರವಾಗಿ ಬಿಜೆಪಿ ಆಕ್ರೋಶ ಭರಿತ ಪ್ರಚಾರ ಮುಂದುವರೆದಿರುವಂತೆಯೇ ಇದಕ್ಕೆ ತಿರುಗೇಟು ನೀಡಿರುವ ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಪ ಪಿ ಚಿದಂಬರಂ ಬಜರಂಗದಳ ‘ಬಜರಂಗಬಲಿ’ ಆಗಿದ್ದೇಗೆ? ಎಂದು ಪ್ರಶ್ನಿಸಿದ್ದಾರೆ.

ಸ್ಥಿರ ಸರ್ಕಾರದ ಬಗ್ಗೆ ಮೋದಿ ಮಾತು; ಕರ್ನಾಟಕದಲ್ಲಿನ ಬಿಜೆಪಿ ಸರ್ಕಾರ ಕುದುರೆ ವ್ಯಾಪಾರದಿಂದ ರಚನೆಯಾಗಿದ್ದು; ಚಿದಂಬರಂ
2018ರ ಚುನಾವಣೆಯ ನಂತರ ರಾಜ್ಯದಲ್ಲಿನ ಬಿಜೆಪಿ ನೇತೃತ್ವದ ಸರ್ಕಾರವು 'ಮೋಸ, ಕುದುರೆ ವ್ಯಾಪಾರ ಮತ್ತು ಹಣದ ಬಲ'ದಿಂದ ಹುಟ್ಟಿಕೊಂಡಿದೆ ಎಂದು ಆರೋಪಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ, ಕರ್ನಾಟಕ ಚುನಾವಣಾ ಪ್ರಚಾರದಲ್ಲಿ ಸ್ಥಿರ ಸರ್ಕಾರದ ಕುರಿತು ಹೇಳಿಕೆ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕದಲ್ಲಿ ಏಕರೂಪ ನಾಗರಿಕ ಸಂಹಿತೆ, ಎನ್‌ಆರ್‌ಸಿಗೆ ಅವಕಾಶ ನೀಡಬೇಡಿ: ಕಾಂಗ್ರೆಸ್ ನಾಯಕ ಪಿ ಚಿದಂಬರಂ
ಕರ್ನಾಟಕವನ್ನು ವಿಭಜಿಸಿ ಧ್ರುವೀಕರಣಗೊಳಿಸುವುದರಿಂದ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಯ ಪ್ರವೇಶವನ್ನು ಕರ್ನಾಟಕದ ಜನರು ತೀವ್ರವಾಗಿ ವಿರೋಧಿಸಬೇಕು ಮತ್ತು ನಿಲ್ಲಿಸಬೇಕು ಎಂದು ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಮನವಿ ಮಾಡಿದರು.

ಮುದ್ರಾ ಯೋಜನೆಯಡಿ ಶೇ 83ರಷ್ಟು 50 ಸಾವಿರ ರೂ. ಸಾಲ: ಆ ಮೊತ್ತದಿಂದ ಯಾವ ರೀತಿಯ ವ್ಯವಹಾರ ಮಾಡಬಹುದು: ಪಿ. ಚಿದಂಬರಂ
ಪ್ರಧಾನ ಮಂತ್ರಿ ಮುದ್ರಾ ಯೋಜನೆ ಎಂಟು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ, ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರು ಭಾನುವಾರ, ಈ ಯೋಜನೆಯಡಿ ನೀಡಲಾದ ಶೇ 83 ರಷ್ಟು ಸಾಲಗಳು 50,000 ರೂ.ಗಿಂತ ಕಡಿಮೆಯಿವೆ. ಇದು ಮೊತ್ತದ ಸಾಲದಿಂದ ಇಂದು ಯಾವ ರೀತಿಯ ವ್ಯವಹಾರವನ್ನು ಮಾಡಬಹುದು ಎಂದು ಪ್ರಶ್ನಿಸಿದ್ದಾರೆ.

ವಿರೋಧ ಪಕ್ಷಗಳ ಪ್ರಮುಖ ಧ್ವನಿಗಳನ್ನು ಮೌನಗೊಳಿಸಲು ಕಾನೂನನ್ನು ಮಧ್ಯೆ ತರಬಾರದು: ಪಿ ಚಿದಂಬರಂ
ದೃಢವಾದ ರಾಜಕೀಯ ಭಾಷಣವು ಪ್ರಜಾಪ್ರಭುತ್ವದ ಮೂಲತತ್ವವಾಗಿದೆ ಮತ್ತು ಪ್ರತಿಪಕ್ಷಗಳ ಪ್ರಮುಖ ಧ್ವನಿಯನ್ನು ಮೌನಗೊಳಿಸಲು ಕಾನೂನನ್ನು ಮಧ್ಯೆ ತರಬಾರದು ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಶುಕ್ರವಾರ ಹೇಳಿದ್ದಾರೆ.

ಸಂವಿಧಾನವೇ ಸರ್ವಶ್ರೇಷ್ಠ: ಉಪರಾಷ್ಟ್ರಪತಿ ಜಗದೀಪ್ ಧನಕರ್ ವಿರುದ್ಧ ಕಾಂಗ್ರೆಸ್ ನಾಯಕ ಚಿದಂಬರಂ ವಾಗ್ದಾಳಿ
ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಸಂಸದೀಯ ಸಾರ್ವಭೌಮತೆಯನ್ನು ಒತ್ತಾಯಿಸಿದ ಒಂದು ದಿನದ ನಂತರ, ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರು ಗುರುವಾರ, ಸಂವಿಧಾನವು ಸರ್ವೋಚ್ಚವಾಗಿದೆ ಮತ್ತು 'ಉಪರಾಷ್ಟ್ರಪತಿಯವರ ದೃಷ್ಟಿಕೋನಗಳು ಎಚ್ಚರಿಕೆಯ ಸಂಕೇತವಾಗಿರಬಹುದು' ಎಂದು ಹೇಳಿದ್ದಾರೆ.

