onions

ಮಳೆ ಅಭಾವದಿಂದ ಈರುಳ್ಳಿ ಇಳುವರಿ ಕುಸಿತ; ಮುಂದಿನ ದಿನಗಳಲ್ಲಿ ಬೆಲೆ ಗನನಕ್ಕೇರುವ ಸಾಧ್ಯತೆ!
ರಾಜ್ಯದಲ್ಲಿ ಹಾಗೂ ದೇಶದಲ್ಲಿ ಈರುಳ್ಳಿ ಬೆಳೆಯುವ ಪ್ರದೇಶಗಳಲ್ಲಿ ಮಳೆ ಅಭಾವದಿಂದಾಗಿ ಬೆಳೆ ಇಳುವರಿ ಕಡಿಮೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆ ಗಗನಕ್ಕೇರುವ ಸಾಧ್ಯತೆ ಇದೆ ಎನ್ನಲಾಗಿದೆ.

ಮಹಾರಾಷ್ಟ್ರ: ತಲೆ ಮೇಲೆ ಈರುಳ್ಳಿ ಹೊತ್ತು ವಿಧಾನಸಭೆಗೆ ಆಗಮಿಸಿದ ಎನ್ ಸಿಪಿ ಶಾಸಕರು!
ಮಹಾರಾಷ್ಟ್ರ ವಿಧಾನಸಭಾ ಆವರಣ ಇಂದು ಬೆಳಗ್ಗೆ ಕೆಲಹೊತ್ತು ಅಚ್ಚರಿಗೆ ಕಾರಣವಾಯಿತು. ತಲೆ ಮೇಲೆ ಈರುಳ್ಳಿ ಹೊತ್ತ ಎನ್ ಸಿಪಿ ಶಾಸಕರನ್ನು ಕಂಡು ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ದಂಗಾದರು.

ಈರುಳ್ಳಿ ಬೆಲೆ ತೀವ್ರ ಕುಸಿತ: 512 ಕೆಜಿ ಈರುಳ್ಳಿ ಮಾರಾಟದಿಂದ ರೈತನಿಗೆ ಸಿಕ್ಕಿದ್ದು ಕೇವಲ 2.49 ರೂ.!
ಮಹಾರಾಷ್ಟ್ರದಲ್ಲಿ ಈರುಳ್ಳಿ ಬೆಲೆ ತೀವ್ರ ಕುಸಿತ ಕಂಡಿದ್ದು, ಸೊಲ್ಲಾಪುರದ ರೈತರೊಬ್ಬರು ತಮ್ಮ 512 ಕೆಜಿ ಈರುಳ್ಳಿಯನ್ನು ವ್ಯಾಪಾರಿಯೊಬ್ಬರಿಗೆ ಮಾರಾಟ ಮಾಡಿ ಕೇವಲ 2.49 ರೂ. ಲಾಭ ಗಳಿಸಿದ್ದಾರೆ.

ಭಾರತ ಮಾರುಕಟ್ಟೆಗೆ ಶೀಘ್ರವೇ 32,000 ಟನ್ ಈರುಳ್ಳಿ ಆಗಮನ: ಸಚಿವ ಗೋಯಲ್
ದೇಶೀಯ ಪೂರೈಕೆಯನ್ನು ಹೆಚ್ಚಿಸುವ ಮತ್ತು ಬೆಲೆ ಏರಿಕೆಯನ್ನು ನಿಯಂತ್ರಿಸುವ ಖಾಸಗಿ ವ್ಯಾಪಾರಿಗಳು ಈಗಾಗಲೇ 7,000 ಟನ್ ಈರುಳ್ಳಿಯನ್ನು ಆಮದು ಮಾಡಿಕೊಂಡಿದ್ದಾರೆ ಮತ್ತು ದೀಪಾವಳಿಗೆ ಮುನ್ನ ಇನ್ನೂ 25,000 ಟನ್ ಈರುಳ್ಳಿ ದೇಶೀ ಮಾರುಕಟ್ಟೆಗೆ ಆಗಮಿಸಲಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಈರುಳ್ಳಿ ರಫ್ತಿಗೆ ಕೇಂದ್ರ ಸರ್ಕಾರ ನಿಷೇಧ
ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ದಾಸ್ತಾನು ಪ್ರಮಾಣ ಗಣನೀಯವಾಗಿ ಕುಸಿದು, ಬೇಡಿಕೆ ತೀವ್ರ ಹೆಚ್ಚಾದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಈರುಳ್ಳಿ ರಫ್ತಿಗೆ ನಿಷೇಧ ಹೇರಿದೆ.

ಈರುಳ್ಳಿ ಖರೀದಿಸಿ ರೈತ ಮಹಿಳೆ ನೆರವಿಗೆ ನಿಂತ ಹೂವಿನಹಡಗಲಿ ತಹಸಿಲ್ದಾರ್
ಇಡೀ ದೇಶವೇ ಕೊರೋನಾ ವೈರಸ್ ಲಾಕ್ ಡೌನ್ ನಲ್ಲಿದ್ದು, ಅತ್ತ ರೈತರು ಮಾತ್ರ ತಾವು ಬೆಳೆದ ಬೆಳೆಯನ್ನು ಜನರಿಗೆ ತಲುಪಿಸಲಾಗದೇ ಸಂಕಷ್ಟ ಎದುರಿಸುತ್ತಿರುವ ಈ ಹೊತ್ತಿನಲ್ಲಿ ಹೂವಿನಹಡಗಲಿ ತಹಸಿಲ್ದಾರ್ ರೈತ ಮಹಿಳೆಯ ಈರುಳ್ಳಿ ಖರೀದಿಸಿ ಆತನ ಬೆನ್ನಿಗೆ ನಿಲ್ಲುವ ಕೆಲಸ ಮಾಡಿದ್ದಾರೆ.

ಗ್ರಾಹಕರಿಗೆ ಸಿಹಿಸುದ್ದಿ! 790 ಟನ್ ವಿದೇಶೀ ಈರುಳ್ಳಿ ಭಾರತ ಮಾರುಕಟ್ಟೆಗೆ ಲಗ್ಗೆ
ಗ್ರಾಹಕರಿಗೆ ಕಣ್ಣೀರು ತರಿಸಿದ್ದ ಈರುಳ್ಳಿ ಬೆಲೆ ತುಸು ಇಳಿಕೆಯಾಗುವ ಕಾಲ ಸನ್ನಿಹಿತವಾಗಿದೆ. 790 ಟನ್ ವಿದೇಶೀ ಈರುಳ್ಳಿ ಭಾರತ ಮಾರುಕಟ್ಟೆ ಪ್ರವೇಶಿಸಿದೆ. ಇದರಲ್ಲಿ ಕೆಲ ಭಾಗಗಳನ್ನು ದೆಹಲಿ ಹಾಗೂ ಆಂಧ್ರಪ್ರದೇಶಕ್ಕೆ ಕಳಿಸಲಾಗುತ್ತಿದ್ದು ಹೀಗೆ ರವಾನೆಯಾಗುವ ಈರುಳ್ಳಿಯ ಪ್ರಾರಂಭಿಕ ಬೆಲೆ ರು. 57-60 / ಕೆಜಿ ಆಗಿರಲಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯದ ಹಿರಿಯ ಅಧ

ಬಾಗಲಕೋಟೆ ಮಾರುಕಟ್ಟೆಗೆ ಹೊರ ರಾಜ್ಯ ಖರೀದಿದಾರರ ಲಗ್ಗೆ
ಬಾಗಲಕೋಟೆ ಎಪಿಎಂಸಿ ಮಾರುಕಟ್ಟೆಗೆ ಈರುಳ್ಳಿ ಖರೀದಿಸಲು ಹೊರ ರಾಜ್ಯಗಳ ಖರೀದಿದಾರರು ಆಗಮಿಸಿದ್ದಾರೆ.

ಟರ್ಕಿಯಿಂದ ಈರುಳ್ಳಿ ಆಮದಿಗೆ ಕ್ರಮ; ಪರಿಸ್ಥಿತಿ ಪರಿಶೀಲನೆಗೆ ಅಮಿತಾ ಶಾ ನೇತೃತ್ವದಲ್ಲಿ ಸಚಿವರ ತಂಡ ರಚನೆ
ದೇಶದ ಮಾರುಕಟ್ಟೆಗಳಲ್ಲಿ ಗಗನಕ್ಕೇರುತ್ತಿರುವ ಈರುಳ್ಳಿ ಬೆಲೆ ನಿಯಂತ್ರಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ದೇಶದಲ್ಲಿ ಈರುಳ್ಳಿ ಪೂರೈಕೆಯನ್ನು ಹೆಚ್ಚಿಸಲು ಟರ್ಕಿಯಿಂದ 11೦೦೦ ಮೆಟ್ರಿಕ್ ಟನ್ ಈರುಳ್ಳಿ ಆಮದು ಮಾಡಿಕೊಳ್ಳಲು ಸರ್ಕಾರಿ ಸ್ವಾಮ್ಯದ ಎಂಎನ್ ಟಿಸಿಗೆ ಆದೇಶಿಸಿದೆ.

