ಗ್ರಾಹಕರಿಗೆ ಸಿಹಿಸುದ್ದಿ! 790 ಟನ್ ವಿದೇಶೀ ಈರುಳ್ಳಿ ಭಾರತ ಮಾರುಕಟ್ಟೆಗೆ ಲಗ್ಗೆ
ಗ್ರಾಹಕರಿಗೆ ಕಣ್ಣೀರು ತರಿಸಿದ್ದ ಈರುಳ್ಳಿ ಬೆಲೆ ತುಸು ಇಳಿಕೆಯಾಗುವ ಕಾಲ ಸನ್ನಿಹಿತವಾಗಿದೆ. 790 ಟನ್ ವಿದೇಶೀ ಈರುಳ್ಳಿ ಭಾರತ ಮಾರುಕಟ್ಟೆ ಪ್ರವೇಶಿಸಿದೆ. ಇದರಲ್ಲಿ ಕೆಲ ಭಾಗಗಳನ್ನು ದೆಹಲಿ ಹಾಗೂ ಆಂಧ್ರಪ್ರದೇಶಕ್ಕೆ ಕಳಿಸಲಾಗುತ್ತಿದ್ದು ಹೀಗೆ ರವಾನೆಯಾಗುವ ಈರುಳ್ಳಿಯ ಪ್ರಾರಂಭಿಕ ಬೆಲೆ ರು. 57-60 / ಕೆಜಿ ಆಗಿರಲಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯದ ಹಿರಿಯ ಅಧ

ನವದೆಹಲಿ: ಗ್ರಾಹಕರಿಗೆ ಕಣ್ಣೀರು ತರಿಸಿದ್ದ ಈರುಳ್ಳಿ ಬೆಲೆ ತುಸು ಇಳಿಕೆಯಾಗುವ ಕಾಲ ಸನ್ನಿಹಿತವಾಗಿದೆ. 790 ಟನ್ ವಿದೇಶೀ ಈರುಳ್ಳಿ ಭಾರತ ಮಾರುಕಟ್ಟೆ ಪ್ರವೇಶಿಸಿದೆ. ಇದರಲ್ಲಿ ಕೆಲ ಭಾಗಗಳನ್ನು ದೆಹಲಿ ಹಾಗೂ ಆಂಧ್ರಪ್ರದೇಶಕ್ಕೆ ಕಳಿಸಲಾಗುತ್ತಿದ್ದು ಹೀಗೆ ರವಾನೆಯಾಗುವ ಈರುಳ್ಳಿಯ ಪ್ರಾರಂಭಿಕ ಬೆಲೆ ರು. 57-60 / ಕೆಜಿ ಆಗಿರಲಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಡಿಸೆಂಬರ್ ಅಂತ್ಯದ ವೇಳೆಗೆಅಂದಾಜು 12,000 ಟನ್ ಈರುಳ್ಳಿ ಅವಕವಾಗುವ ನಿರೀಕ್ಲ್ಷೆ ಇದೆ. ಸರ್ಕಾರದ ಪರವಾಗಿ ಪ್ರಮುಖ ಅಡಿಗೆ ಸಾಮಗ್ರಿಯಾಗಿರುವ ಈರುಳ್ಳಿ ಆಮದು ಮಾಡಿಕೊಳ್ಳುತ್ತಿರುವ ಸರ್ಕಾರಿ ಎಂಎಂಟಿಸಿ ಈವರೆಗೆ 49,500 ಟನ್ ಈರುಳ್ಳಿಯನ್ನು ಗುತ್ತಿಗೆ ಪಡೆದಿದೆ.
ಚಿಲ್ಲರೆ ಈರುಳ್ಳಿ ಬೆಲೆಗಳು ಪ್ರಮುಖ ನಗರಗಳಲ್ಲಿ ಪ್ರತಿ ಕೆ.ಜಿ.ಗೆ ಸರಾಸರಿ 100 ರೂ. ಇದ್ದು ದೇಶದ ಕೆಲವು ಭಾಗಗಳಲ್ಲಿ ದರ ಪ್ರತಿ ಕೆ.ಜಿ.ಗೆ 160 ರೂ ತಲುಪಿದೆ. . "ತಲಾ 290 ಟನ್ ಮತ್ತು 500 ಟನ್ ಒಳಗೊಂಡ ಎರಡು ದಾಸ್ತಾನುಗಳುಈಗಾಗಲೇ ಮುಂಬೈ ತಲುಪಿದೆ. ನಾವು ಈರುಳ್ಳಿಯನ್ನು ಕೆಜಿ 57-60 / ಕೆಜಿ ದರದಲ್ಲಿ ರಾಜ್ಯ ಸರ್ಕಾರಗಳಿಗೆ ನೀಡುತ್ತಿದ್ದೇವೆ" ಎಂದು ಅಧಿಕಾರಿಗಳು ಹೇಳಿದ್ದಾರೆ. ಆಂಧ್ರಪ್ರದೇಶ ಮತ್ತು ದೆಹಲಿ ಸರ್ಕಾರಗಳು ಈಗಾಗಲೇ ತಮ್ಮ ಬೇಡಿಕೆಗಳನ್ನು ಮಂಡಿಸಿವೆ ಮತ್ತು ಆಮದು ಮಾಡಿದ ಈರುಳ್ಳಿಯನ್ನು ಖರೀದಿಸಲು ಮುಂದಾಗಿದೆ. ಟರ್ಕಿ, ಈಜಿಪ್ಟ್ ಮತ್ತು ಅಫ್ಘಾನಿಸ್ತಾನದಿಂದ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲಾಗಿದೆ. ದೇಶೀಯ ಸರಬರಾಜುಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಹೆಚಿನ ಉಪಕ್ರಮ ತೆಗೆದುಕೊಳ್ಲಲಾಗುತ್ತಿದೆ ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


