ವಾಣಿಜ್ಯಗ್ರಾಹಕರಿಗೆ ಸಿಹಿಸುದ್ದಿ! 790 ಟನ್ ವಿದೇಶೀ ಈರುಳ್ಳಿ ಭಾರತ ಮಾರುಕಟ್ಟೆಗೆ ಲಗ್ಗೆ
ಗ್ರಾಹಕರಿಗೆ ಕಣ್ಣೀರು ತರಿಸಿದ್ದ ಈರುಳ್ಳಿ ಬೆಲೆ ತುಸು ಇಳಿಕೆಯಾಗುವ ಕಾಲ ಸನ್ನಿಹಿತವಾಗಿದೆ. 790 ಟನ್ ವಿದೇಶೀ ಈರುಳ್ಳಿ ಭಾರತ ಮಾರುಕಟ್ಟೆ ಪ್ರವೇಶಿಸಿದೆ. ಇದರಲ್ಲಿ ಕೆಲ ಭಾಗಗಳನ್ನು ದೆಹಲಿ ಹಾಗೂ ಆಂಧ್ರಪ್ರದೇಶಕ್ಕೆ ಕಳಿಸಲಾಗುತ್ತಿದ್ದು ಹೀಗೆ ರವಾನೆಯಾಗುವ ಈರುಳ್ಳಿಯ ಪ್ರಾರಂಭಿಕ ಬೆಲೆ ರು. 57-60 / ಕೆಜಿ ಆಗಿರಲಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯದ ಹಿರಿಯ ಅಧ