Omar Abdullah

'ಕಾಶ್ಮೀರಿಗಳು ಭಿಕ್ಷುಕರಲ್ಲ; ಚುನಾವಣೆ ನಮ್ಮ ಹಕ್ಕು: ಒಮರ್ ಅಬ್ದುಲ್ಲಾ
ಚುನಾವಣೆ ಜನರ ಹಕ್ಕು. ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಸುವಂತೆ ಕಾಶ್ಮೀರಿಗಳು ಕೇಂದ್ರದ ಮುಂದೆ ಭಿಕ್ಷೆ ಬೇಡುವುದಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಅವರು ಮಂಗಳವಾರ ಹೇಳಿದ್ದಾರೆ.

ಲಡಾಖ್‌ಗೆ ಚೀನಾ ಬರುವುದನ್ನು ತಡೆಯಲು ಸಾಧ್ಯವಾಗುತ್ತಿಲ್ಲ, ಕಾರ್ಗಿಲ್‌ಗೆ ಹೋಗಲು ನಮಗೆ ಬಿಡುತ್ತಿಲ್ಲ: ಒಮರ್ ಅಬ್ದುಲ್ಲಾ
ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನ ಅಧಿಕಾರಿಗಳು ಕಾರ್ಗಿಲ್‌ಗೆ ಭೇಟಿ ನೀಡದಂತೆ ನನ್ನನ್ನು ತಡೆಯಲು ಪ್ರಯತ್ನಿಸಿದ್ದಾರೆ ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಹೇಳಿದ್ದಾರೆ.

ಕಾಂಗ್ರೆಸ್ ರಾಜ್ಯ ನಾಯಕರ ಅಂತರ್ ಕಲಹ; ಬಿಜೆಪಿ ವಿರುದ್ಧ ಹೋರಾಟದ ನಿರೀಕ್ಷೆ ಕಷ್ಟಸಾಧ್ಯ- ಒಮರ್ ಅಬ್ದುಲ್ಲಾ
ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರು ಅಂತರ್ ಕಲಹದಲ್ಲಿ ತೊಡಗಿರುವಾಗ ಬಿಜೆಪಿ ವಿರುದ್ಧ ಹೋರಾಡುತ್ತದೆ ಎಂದು ನಿರೀಕ್ಷಿಸುವುದು ಕಷ್ಟಸಾಧ್ಯ ಎಂದು ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಓಮರ್ ಅಬ್ದುಲ್ಲಾ ಶನಿವಾರ ಹೇಳಿದ್ದಾರೆ.

ಅಫ್ಘಾನಿಸ್ತಾನ ವಿಚಾರದಲ್ಲಿ ಬೈಡನ್ ವಿದೇಶಾಂಗ ನೀತಿ ಒಪ್ಪಲಾಗದು: ಒಮರ್ ಅಬ್ದುಲ್ಲಾ
ಅಫ್ಘಾನಿಸ್ತಾನ ತಾಲಿಬಾನಿಗಳ ವಶವಾದ ನಂತರ ಅಲ್ಲಿನ ಪರಿಸ್ಥಿತಿ ಅಲ್ಲೋಲ ಕಲ್ಲೋಲವಾಗಿದ್ದು, ಸೇನೆ ವಾಪಸ್ ಕರೆಸಿಕೊಂಡ ಅಮೆರಿಕದ ಬಗ್ಗೆ ಹಲವು ನಾಯಕರಿಂದ ಟೀಕೆ ವ್ಯಕ್ತವಾಗಿದೆ.

ಜಮ್ಮುವಿನಲ್ಲಿ ಪೊಲೀಸ್ ಹತ್ಯೆಗೈದ ಉಗ್ರರು: ಒಮರ್ ಅಬ್ದುಲ್ಲಾ ತೀವ್ರ ಖಂಡನೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಮಾಜಿ ಪೊಲೀಸ್ ವಿಶೇಷಾಧಿಕಾರಿ ಮನೆ ಮೇಲೆ ಉಗ್ರರು ದಾಳಿ ನಡೆಸಿ ಅಧಿಕಾರಿ, ಪತ್ನಿ ಹಾಗೂ ಅವರ ಪುತ್ರಿಯನ್ನು ಬಲಿಪಡೆದ ಘಟನೆಗೆ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಒಮರ್ ಅಬ್ದುಲ್ಲಾ ಅವರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

"ಈ ಸರ್ಕಾರದಿಂದ ಸಂವಿಧಾನ 370 ವಿಧಿ ಮರು ಸ್ಥಾಪನೆ ನಿರೀಕ್ಷೆ ಅವಿವೇಕತನದ್ದು"; ಓಮರ್ ಅಬ್ದುಲ್ಲಾ
ಜಮ್ಮು- ಕಾಶ್ಮೀರದಲ್ಲಿ ಸಂವಿಧಾನ 370 ವಿಧಿಯನ್ನು ಮರು ಜಾರಿಗೊಳಿಸಬೇಕು ಎಂದು ಒತ್ತಾಯಿಸುವುದು ಅವಿವೇಕತನ ಹಾಗೂ ಮೂರ್ಖತನ ಎಂದು ಜಮ್ಮು- ಕಾಶ್ಮೀರ ಮಾಜಿ ಮುಖ್ಯಮಂತ್ರಿ, ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಅವರು ಹೇಳಿದ್ದಾರೆ.

ಡಿಡಿಸಿ ಫಲಿತಾಂಶದ ನಂತರ ಕುದುರೆ ವ್ಯಾಪಾರಕ್ಕೆ ಪೊಲೀಸರು ಅನುವು ಮಾಡಿಕೊಡುತ್ತಿದ್ದಾರೆ: ಒಮರ್ ಅಬ್ದುಲ್ಲಾ
ಡಿಡಿಸಿ ಚುನಾವಣಾ ಫಲಿತಾಂಶ ಹೊರಬಿದ್ದ ನಂತರ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಮತ್ತು ಆಡಳಿತವು ಕುದುರೆ ವ್ಯಾಪಾರ ಮತ್ತು ಪಕ್ಷಾಂತರಗಳಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದು ಮಾಜಿ ಸಿಎಂ ಒಮರ್ ಅಬ್ದುಲ್ಲಾ ಆರೋಪಿಸಿದ್ದಾರೆ.

ಡಿಡಿಸಿ ಚುನಾವಣೆಯಲ್ಲಿ ಸೋತಿರುವ ಬಿಜೆಪಿ ಸದ್ಯಕ್ಕೆ ಕಾಶ್ಮೀರ ವಿಧಾನಸಭೆ ಚುನಾವಣೆ ನಡೆಸುವುದಿಲ್ಲ: ಒಮರ್ ಅಬ್ದುಲ್ಲಾ
ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕರ್(ಪಿಎಜಿಡಿ) ಘೋಷಣೆ ಮಾಡಿದ ನಂತರ ನಡೆದ ಜಿಲ್ಲಾ ಅಭಿವೃದ್ಧಿ ಮಂಡಳಿ(ಡಿಡಿಸಿ) ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿದ್ದು,...

ಫಾರೂಕ್ ಅಬ್ದುಲ್ಲಾ ಆಸ್ತಿ ಜಪ್ತಿ: ಇಡಿ ಕ್ರಮ ಸರಿಯಲ್ಲ ಎಂದ ಒಮರ್ ಅಬ್ದುಲ್ಲಾ!
ಕಾಶ್ಮೀರ ಕ್ರಿಕೆಟ್ ಸಂಸ್ಥೆಯಲ್ಲಿ ಹಣಕಾಸಿನ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತಮ್ಮ ತಂದೆ ಫಾರೂಕ್ ಅಬ್ದುಲ್ಲಾ ಅವರಿಗೆ ಸೇರಿದ ಆಸ್ತಿ-ಪಾಸ್ತಿಗಳನ್ನು ಮುಟ್ಟುಗೋಲು ಹಾಕಿರುವ ಕ್ರಮ ಸರಿಯಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಹೇಳಿದ್ದಾರೆ.

