nurses

ಯಾರಿಗೂ ನೋವುಂಟುಮಾಡುವ ಉದ್ದೇಶದಿಂದ ನಾನು ಮಾತನಾಡಿದ್ದಲ್ಲ, ನನ್ನ ಮಾತಿನಿಂದ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ: ಶಾಸಕ ರಾಜು ಕಾಗೆ
ಕೆಲ ದಿನಗಳ ಹಿಂದೆ ತುಂಬಿದ ಸಭೆಯಲ್ಲಿ ಸೌಂದರ್ಯದ ಬಗ್ಗೆ ಮಾತನಾಡಿ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಟ್ರೋಲ್ ಆಗಿ ವ್ಯಾಪಕ ಸುದ್ದಿಯಾಗಿದ್ದರು ಕಾಂಗ್ರೆಸ್ ಹಿರಿಯ ಶಾಸಕ ರಾಜು ಕಾಗೆ.

ಭಾರತದಲ್ಲಿ ಪ್ರತಿ ಸಾವಿರ ಜನಸಂಖ್ಯೆಗೆ 1.7 ನರ್ಸ್; ಡಬ್ಲ್ಯೂಹೆಚ್ ಒ ಮಾನದಂಡಕ್ಕಿಂತ ಕಡಿಮೆ: ಅಸೋಸಿಯೇಷನ್
ಪ್ರಸ್ತುತ ದೇಶದಲ್ಲಿ ಪ್ರತಿ ಸಾವಿರ ಜನಸಂಖ್ಯೆಗೆ 1.7 ನರ್ಸ್ ಗಳಿದ್ದಾರೆ. ಇದು ವಿಶ್ವ ಆರೋಗ್ಯ ಸಂಸ್ಥೆ ನಿಯಮ 1,000 ಜನಸಂಖ್ಯೆಗೆ ಮೂರು ನರ್ಸ್ ಗಳ ಮಾನದಂಡಕ್ಕಿಂತ ಕಡಿಮೆಯಾಗಿದೆ.

ಕೋವಿಡ್-19 ಮೂರನೇ ಅಲೆಯ ಆಂತಕ: ಮೂರನೇ ಡೋಸ್ ಮೊರೆ ಹೋದ ಬೆಂಗಳೂರಿನ ಹಲವು ವೈದ್ಯರು, ನರ್ಸ್ ಗಳು
ಕೋವಿಡ್-19 ಲಸಿಕೆಯ ಮೂರನೇ ಡೋಸ್ ನ್ನು ಜನತೆಗೆ ನೀಡುವ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಪರಿಶೀಲನೆ ನಡೆಸುತ್ತಿರುವುದರ ಮಧ್ಯೆ ಕರ್ನಾಟಕದಲ್ಲಿ ಆರೋಗ್ಯ ವಲಯ ಕಾರ್ಯಕರ್ತರು ಮತ್ತು ವೈದ್ಯರು ಸದ್ದಿಲ್ಲದೆ 3ನೇ ಡೋಸ್ ನ್ನು ತಾವಾಗಿಯೇ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ದೆಹಲಿ ಸರ್ಕಾರಿ ಆಸ್ಪತ್ರೆಯಲ್ಲಿ ಮಲಯಾಳಂ ಮಾತನಾಡದಂತೆ ದಾದಿಯರಿಗೆ ಸೂಚನೆ!
ಆಸ್ಪತ್ರೆಯಲ್ಲಿ ದಾದಿಯರು ಬಳಸುತ್ತಿರುವ ಮಲಯಾಳಂ ಭಾಷೆ ಹಲವರಲ್ಲಿ ಇರಿಸು-ಮುನಿಸು ಮೂಡಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಕರ್ತವ್ಯ ನಿರತ ಕೇರಳ ಮೂಲದ ದಾದಿಯರು ಇನ್ನು ಮುಂದೆ ಆಸ್ಪತ್ರೆಯಲ್ಲಿ ಮಲಯಾಳಂ ಭಾಷೆ ಬಳಸುವಂತಿಲ್ಲ ಎಂದು ರಾಷ್ಟ್ರ ರಾಜಧಾನಿ ನವದೆಹಲಿಯ ಸರ್ಕಾರಿ ಆಸ್ಪತ್ರೆ ಸೂಚನೆ ನೀಡಿದೆ.

ಕೋವಿಡ್-19 ಒತ್ತಡ: 57 ಡಯಾಲಿಸಿಸ್ ರೋಗಿಗಳಿಗೆ ಚಿಕಿತ್ಸೆ ನೀಡಲು ಎರಡು ಪಾಳಿಗಳಲ್ಲಿ 3 ನರ್ಸ್ ಗಳು ಕೆಲಸ!
ಕೋವಿಡ್-19 ಎರಡನೇ ಅಲೆಯ ನಡುವೆ ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವ ಸಿಬ್ಬಂದಿಗಳಿಗೆ ಕೊರತೆ ಎದುರಾಗಿದೆ.

ಜನರಲ್ ಆಸ್ಪತ್ರೆಯನ್ನು ಕೋವಿಡ್ ಕೇಂದ್ರವಾಗಿ ಪರಿವರ್ತನೆ: ಬೆಳಗಾವಿಯ ಶಹಾಪುರದಲ್ಲಿ ನರ್ಸ್ ಗಳ ಅಂಗಿ ಹರಿದು ದುಷ್ಕರ್ಮಿಗಳಿಂದ ಹಲ್ಲೆ
ಸಾಮಾನ್ಯ ಇತರ ರೋಗಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಬದಲಿಸಿದ್ದಕ್ಕೆ ಕೆಲವು ದುಷ್ಕರ್ಮಿಗಳು ಕರ್ತವ್ಯದಲ್ಲಿದ್ದ ನರ್ಸ್ ಗಳ ಮೇಲೆ ಹಲ್ಲೆ ಮಾಡಿ ಅವರ ಬಟ್ಟೆಗಳನ್ನು ಹರಿದ ಘಟನೆ ಬೆಳಗಾವಿಯ ಶಹಾಪುರದಲ್ಲಿ ನಡೆದಿದೆ.

ಕೊರೋನಾ ವಿರುದ್ಧ ಹೋರಾಡಲು ಭಾರತಕ್ಕೆ 1.5 ಲಕ್ಷ ನರ್ಸ್'ಗಳು, 50,000 ವೈದ್ಯರ ಅಗತ್ಯವಿದೆ: ಡಾ.ದೇವಿ ಶೆಟ್ಟಿ
ಕೋವಿಡ್ ಕೇರ್ ಕೇಂದ್ರಗಳಲ್ಲಿ ಮುಂದಿನ ಒಂದು ವರ್ಷ ಕೆಲಸ ಮಾಡಲು ದೇಶಕ್ಕೆ 1.5 ಲಕ್ಷ ನರ್ಸ್'ಗಳು ಹಾಗೂ ಐಸಿಯುವಿನಲ್ಲಿ ಕಾರ್ಯನಿರ್ವಹಿಸಲು 50,000 ಯುವ ಹಾಗೂ ನುರಿತ ವೈದ್ಯರ ಅಗತ್ಯವಿದೆ ಎಂದು ಖ್ಯಾತ ಹೃದ್ರೋಗ ತಜ್ಞ ಡಾ.ದೇವಿ ಶೆಟ್ಟಿ ಸೋಮವಾರ ಹೇಳಿದ್ದಾರೆ.

ಪಶ್ಚಿಮ ಬಂಗಾಳ: ಸೇವೆಗೆ ರಾಜೀನಾಮೆ ನೀಡಿ ತವರು ರಾಜ್ಯಗಳಿಗೆ ಮರಳಿದ 600 ಶುಶ್ರೂಷಕಿಯರು!
ಪಶ್ಚಿಮ ಬಂಗಾಳದ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ 600ಕ್ಕೂ ಹೆಚ್ಚು ಶುಶ್ರೂಷಕಿಯರು ಸೇವೆಗೆ ರಾಜೀನಾಮೆ ಸಲ್ಲಿಸಿ ತವರು ರಾಜ್ಯಗಳಿಗೆ ವಾಪಸ್ ಮರಳಿದ್ದು, ಇದರೊಂದಿಗೆ ಕೊರೋನಾವೈರಸ್ ವಿರುದ್ಧದ ಭಾರತದ ಹೋರಾಟಕ್ಕೆ ಹಿನ್ನಡೆಯಾದಂತಾಗಿದೆ.

ಬಂಗಾಳ ಆಸ್ಪತ್ರೆಯಿಂದ 400 ನರ್ಸ್ಗಳು ರಾಜೀನಾಮೆ
ಭಾರತ, ಕೋವಿಡ್-19 ಸೋಂಕಿನ ವಿರುದ್ಧದ ಸವಾಲನ್ನು ಎದುರಿಸುತ್ತಿರುವ ಸಂದರ್ಭದಲ್ಲೇ ಬಂಗಾಳ ಆಸ್ಪತ್ರೆಗಳ ಸುಮಾರು 400 ನರ್ಸ್ ಗಳು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ.

