notice

4,389 ಕೋಟಿ ರೂ. ಆಮದು ಸುಂಕ ವಂಚನೆ; ಚೀನಾ ಮೂಲದ ಒಪ್ಪೊಗೆ ಭಾರತ ನೋಟಿಸ್
4,389 ಕೋಟಿ ರೂ.ಗಳ ಆಮದು ಸುಂಕ ವಂಚಿಸಿದ ಆರೋಪದ ಮೇಲೆ ಚೀನಾದ ಫೋನ್ ತಯಾರಕ ಕಂಪನಿ ಒಪ್ಪೊದ ಭಾರತ ಘಟಕಕ್ಕೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ಬುಧವಾರ ತಿಳಿಸಿದೆ.

ಜಮ್ಮು: ಎಲ್ ಇಟಿ ಉಗ್ರನೊಂದಿಗೆ ನಂಟು ಆರೋಪ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷನಿಗೆ ಬಿಜೆಪಿ ನೋಟಿಸ್
ಲಷ್ಕರ್ -ಇ- ತೊಯ್ಬಾ ಸಂಘಟನೆಯ ಬಂಧಿತ ಉಗ್ರ ತಾಲಿಬ್ ಹುಸೇನ್ ಷಾ ನೊಂದಿಗೆ ನಂಟಿನ ಆರೋಪದ ಮೇರೆಗೆ ಜಮ್ಮುವಿನ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಶೇಕ್ ಬಶೀರ್ ಗೆ ಮಂಗಳವಾರ ಬಿಜೆಪಿ ಶೋಕಾಸ್ ನೋಟಿಸ್ ನೀಡಿದೆ.

ಪಕ್ಷ ವಿರೋಧಿ ಚಟುವಟಿಕೆ: ಎಂ ಆರ್ ಸೀತಾರಾಮ್ ವಿರುದ್ಧ ಶಿಸ್ತು ಕ್ರಮ ಮುಂದೂಡಿದ ರೆಹಮಾನ್ ಖಾನ್
ವಿಧಾನಪರಿಷತ್ ಟಿಕೆಟ್ ತಪ್ಪಿದ ಬಗ್ಗೆ ಆಪ್ತರ ಸಭೆ ನಡೆಸಿ ಬಹಿರಂಗವಾಗಿ ರಾಜ್ಯ ಕಾಂಗ್ರೆಸ್ ನಾಯಕತ್ವ ವಿರುದ್ಧ ಅಸಮಾಧಾನ ಹೊರ ಹಾಕಿದ ಮಾಜಿ ಸಚಿವ ಎಂ.ಆರ್.ಸೀತಾರಾಂ ಅವರಿಗೆ ನೋಟಿಸ್ ನೀಡುವ ನಿರ್ಧಾರವನ್ನು ಮುಂದೂಡಲಾಗಿದೆ.

ಬೆಂಗಳೂರು: ಪ್ರಧಾನಿ ಮೋದಿ ಭೇಟಿ ಸಂದರ್ಭ ಕಳಪೆ ರಸ್ತೆ ಕಾಮಗಾರಿಗಾಗಿ ಎಂಜಿನಿಯರ್ಗಳಿಗೆ ನೋಟಿಸ್
ಕೊಮ್ಮಘಟ್ಟ ಮತ್ತು ಮರಿಯಪ್ಪನಪಾಳ್ಯದಲ್ಲಿ ಟಾರ್ ಕಿತ್ತುಹೋಗಿರುವುದಕ್ಕೆ ಮೂವರು ಇಂಜಿನಿಯರ್ ಗಳಿಗೆ ಷೋಕಾಸ್ ನೋಟಿಸ್ ನೀಡಲಾಗಿದೆ.

ರಾಷ್ಟ್ರ ಲಾಂಛನ ದುರ್ಬಳಕೆ: ಬಸವರಾಜ ಹೊರಟ್ಟಿ ವಿರುದ್ಧ ನೋಟಿಸ್ ಜಾರಿ
ಬಸವರಾಜ ಪಥ ಎಂಬ ಪುಸ್ತಕದ ಮುಖ ಪುಟದ ಮೇಲೆ ರಾಷ್ಟ್ರೀಯ ಲಾಂಛನ ಬಳಸಿದ ಆರೋಪ ಮತ್ತು ಪರಿಷತ್ ಸಭಾಪತಿ ಪೀಠದ ದುರ್ಬಳಕೆ ಮಾಡಿದ ಆರೋಪದ ಮೇಲೆ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಅವರಿಗೆ ಬೆಳಗಾವಿ ಪ್ರಾದೇಶಿಕ ಆಯುಕ್ತರು ನೋಟಿಸ್ ಜಾರಿ ಮಾಡಿದ್ದಾರೆಂದು ತಿಳಿದುಬಂದಿದೆ.

ಸಂಚಾರ ನಿಯಮ ಉಲ್ಲಂಘಿಸುವವರಿಗೆ ಎಸ್ಎಂಎಸ್ ಮೂಲಕ ನೋಟಿಸ್ ರವಾನೆ!
ಸಂಚಾರ ನಿಯಮ ಉಲ್ಲಂಘನೆ ಮಾಡುವವರಿಂದ ದಂಡ ವಸೂಲಿಗೆ ಬೆಂಗಳೂರು ಸಂಚಾರ ಪೊಲೀಸರು ಹೊಸ ಮಾರ್ಗ ಕಂಡುಕೊಂಡಿದ್ದು, ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರಿಗೆ ಇನ್ನು ಮುಂದೆ ಎಸ್ಎಂಎಸ್ ಮೂಲಕವೇ ದಂಡ ಪಾವತಿ ನೋಟಿಸ್ ಬರಲಿದೆ!..

ವಿಧಾನ ಪರಿಷತ್ ಚುನಾವಣೆ ನಾಮಪತ್ರ ಸಲ್ಲಿಕೆಯಲ್ಲಿ ಆಕ್ಷೇಪ: ಹೆಚ್ ಡಿ ರೇವಣ್ಣ ಪುತ್ರ ಡಾ ಸೂರಜ್ ಗೆ ಹೈಕೋರ್ಟ್ ನೊಟೀಸ್
ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧೆಗೆ ಹಾಸನ ಕ್ಷೇತ್ರದಿಂದ ಹೆಚ್ ಡಿ ರೇವಣ್ಣ(H D Revanna) ಅವರ ಪುತ್ರ ಡಾ ಸೂರಜ್(Dr Suraj) ಆರ್ ಅವರ ನಾಮಪತ್ರವನ್ನು ತಿರಸ್ಕರಿಸಲು ರಾಜ್ಯ ಚುನಾವಣಾ ಆಯೋಗಕ್ಕೆ ಆದೇಶ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ಹಿನ್ನೆಲೆಯಲ್ಲಿ ಹೈಕೋರ್ಟ್ ನೊಟೀಸ್ ಜಾರಿ ಮಾಡಿದೆ.

#MeToo ನಟಿ ಶ್ರುತಿ ಹರಿಹರನ್ಗೆ ಕಬ್ಬನ್ ಪಾರ್ಕ್ ಪೊಲೀಸರಿಂದ ನೋಟಿಸ್ ಜಾರಿ
ಸ್ಯಾಂಡಲ್ವುಡ್ನಲ್ಲಿ ಭಾರೀ ಸದ್ದು ಮಾಡಿದ್ದ ‘ಮೀಟೂ’ ಪ್ರಕರಣಕ್ಕೆ ಸಂಬಂಧಿಸಿ ನಟಿ ಶ್ರುತಿ ಹರಿಹರನ್ಗೆ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆಂದು ತಿಳಿದುಬಂದಿದೆ.

ಹೊಸ ವಾಹನಗಳ ನೋಂದಣಿ ತಿದ್ದುಪಡಿ ಅಧಿನಿಯಮ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಕರ್ನಾಟಕ ಮೋಟಾರು ವಾಹನ ಅಧಿನಿಯಮ-1989ರ ನಿಯಮ 33ಕ್ಕೆ ತಿದ್ದುಪಡಿ ತಂದು ಹೊಸ ವಾಹನಗಳ ನೋಂದಣಿ ಜವಾಬ್ದಾರಿಯನ್ನು ಡೀಲರ್ ಗಳಿಗೆ ವಹಿಸಿ ಸಾರಿಗೆ ಇಲಾಖೆ ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಮಂಗಳವಾರ ನೋಟಿಸ್ ಜಾರಿಗೊಳಿಸಿದೆ.

