ಬೆಂಗಳೂರು: ಪ್ರಧಾನಿ ಮೋದಿ ಭೇಟಿ ಸಂದರ್ಭ ಕಳಪೆ ರಸ್ತೆ ಕಾಮಗಾರಿಗಾಗಿ ಎಂಜಿನಿಯರ್‌ಗಳಿಗೆ ನೋಟಿಸ್
ಕೊಮ್ಮಘಟ್ಟ ಮತ್ತು ಮರಿಯಪ್ಪನಪಾಳ್ಯದಲ್ಲಿ ಟಾರ್ ಕಿತ್ತುಹೋಗಿರುವುದಕ್ಕೆ ಮೂವರು ಇಂಜಿನಿಯರ್ ಗಳಿಗೆ ಷೋಕಾಸ್ ನೋಟಿಸ್ ನೀಡಲಾಗಿದೆ.

ಬೆಂಗಳೂರು: ಕೊಮ್ಮಘಟ್ಟ ಮತ್ತು ಮರಿಯಪ್ಪನಪಾಳ್ಯದಲ್ಲಿ ಟಾರ್ ಕಿತ್ತುಹೋಗಿರುವುದಕ್ಕೆ ಮೂವರು ಇಂಜಿನಿಯರ್ ಗಳಿಗೆ ಷೋಕಾಸ್ ನೋಟಿಸ್ ನೀಡಲಾಗಿದೆ.ಆರ್‌ಆರ್‌ನಗರದ ಕಾರ್ಯಪಾಲಕ ಎಂಜಿನಿಯರ್ ಎಂಟಿ ಬಾಲಾಜಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಚ್‌ಜೆ ರವಿ ಮತ್ತು ಸಹಾಯಕ ಎಂಜಿನಿಯರ್ ಐಕೆ ವಿಶ್ವಾಸ್ ಅವರಿಗೆ ನೋಟಿಸ್ ನೀಡಲಾಗಿದೆ.
ಪ್ರಧಾನಿ ಮೋದಿಯವರ ಭೇಟಿಯ ವೇಳೆ ಬಿಬಿಎಂಪಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿತ್ತು. ಆದರೆ, ಮೋದಿ ನವದೆಹಲಿಗೆ ತೆರಳಿದ ನಂತರ ಹಲವು ಪ್ರದೇಶಗಳಲ್ಲಿ ಟಾರ್ ಕಿತ್ತು ಬಂದ ನಂತರ ಬಿಬಿಎಂಪಿಯನ್ನು ಹಲವು ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳು ಟೀಕಿಸುತ್ತಿವೆ.
ಈ ಕುರಿತು ಮಾಧ್ಯಮಗಳಲ್ಲಿ ವರದಿ ಬಂದ ನಂತರ ಬಿಬಿಎಂಪಿ ರಸ್ತೆ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ,ನಿರ್ಲಕ್ಷ್ಯದ ಶಂಕೆ ವ್ಯಕ್ತಪಡಿಸಿದ್ದು, ವಿವರಣೆ ಕೋರಿ ನೋಟಿಸ್ ಜಾರಿ ಮಾಡಿದೆ ಎನ್ನಲಾಗಿದೆ.
ರಸ್ತೆಗಳು, ಚರಂಡಿಗಳು, ಬೀದಿ ದೀಪಗಳು ಮತ್ತು ಹೊಸದಾಗಿ ಟಾರ್ ಮಾಡಿದ ರಸ್ತೆಗಳಲ್ಲಿ ಬಿಳಿ ಗೆರೆ ಹಾಕಲು 24 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ಬಿಬಿಎಂಪಿ ಹೇಳಿಕೊಂಡಿದೆ. ಹೆಚ್ಚಿನ ಅವಧಿಯನ್ನು ಕಾಯ್ದುಕೊಂಡು ಕಾಮಗಾರಿ ನಡೆಸಲಾಗಿದೆ ಎಂದು ವಿಶೇಷ ಆಯುಕ್ತ ರವೀಂದ್ರ ತಿಳಿಸಿದ್ದಾರೆ.
ಕಾಮಗಾರಿಯನ್ನು ಪಾರದರ್ಶಕವಾಗಿ ನಿರ್ವಹಿಸಲಾಗಿದ್ದು, ಸಂಬಂಧಪಟ್ಟ ಗುತ್ತಿಗೆದಾರರಿಗೆ ಸರಿಪಡಿಸಲು ತಿಳಿಸಲಾಗುವುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಾಮಪ್ರಸಾತ್ ಮನೋಹರ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


