Nirbhaya case

ವಿಧವೆ ಎನಿಸಿಕೊಳ್ಳಲು ಇಷ್ಟವಿಲ್ಲ, ವಿಚ್ಛೇದನ ನೀಡಿ.. ಆ ಮೇಲೆ ಗಲ್ಲಿಗೇರಿಸಿ: ಕೋರ್ಟ್ ಗೆ ನಿರ್ಭಯಾ ದೋಷಿ ಅಕ್ಷಯ್ ಪತ್ನಿ ಮನವಿ
2012 ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳು ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ದಿನಕ್ಕೊಂದು ತಂತ್ರ ಹೂಡುತ್ತಿರುವ ಬೆನ್ನಲ್ಲೇ ಇತ್ತ ಪ್ರಕರಣದ ಅಪರಾಧಿ ಅಕ್ಷಯ್ ಠಾಕೂರ್ ಪತ್ನಿ ವಿಚ್ಛೇಧನ ನೀಡದ ಹೊರತು ಗಲ್ಲು ಶಿಕ್ಷೆ ಜಾರಿ ಮಾಡಬಾರದು ಎಂದು ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ನ್ಯಾಯಾಲಯಕ್ಕೂ ಅವರ ತಂತ್ರಗಾರಿಕೆ ತಿಳಿದಿದೆ, ನಾಳೆ ನಮಗೆ ನ್ಯಾಯದೊರೆಯಲಿದೆ: ನಿರ್ಭಯಾ ತಾಯಿ
ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ನಿರ್ಭಯ ದೋಷಿಗಳು ಹೂಡುತ್ತಿರುವ ತಂತ್ರಗಾರಿಕೆ ನ್ಯಾಯಾಲಯದ ಗಮನಕ್ಕೂ ಬಂದಿದೆ. ಹೀಗಾಗಿ ನಾಳೆ ನಮಗೆ ನ್ಯಾಯ ದೊರೆಯಲಿದೆ ಎಂದು ನಿರ್ಭಾಯ ತಾಯಿ ಆಶಾದೇವಿ ಹೇಳಿದ್ದಾರೆ.

ನಿರ್ಭಯಾ ಪ್ರಕರಣ: ಕ್ಯುರೇಟಿವ್ ಅರ್ಜಿ ವಜಾ, 4 ಅಪರಾಧಿಗಳಿಗೆ ನಾಳೆಯೇ ಗಲ್ಲು ಶಿಕ್ಷೆ ಜಾರಿ!
ನಿರ್ಭಯಾ ಹತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಪವನ್ ಗುಪ್ತಾ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ ಪ್ರಕರಣ ಎಲ್ಲ ನಾಲ್ಕೂ ಅಪರಾಧಿಗಳನ್ನು ನಾಳೆಯೇ ಗಲ್ಲಿಗೇರಿಸಲಾಗುತ್ತದೆ ಎಂದು ತಿಳಿದುಬಂದಿದೆ.

ನಿರ್ಭಯಾ ಹಂತಕರಿಗೆ ಮತ್ತೆ ಹಿನ್ನಡೆ: ಅಪರಾಧಿ ಪವನ್ ಗುಪ್ತಾ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿ ವಜಾ
ನಿರ್ಭಯಾ ಹಂತಕರಿಗೆ ಮತ್ತೆ ಹಿನ್ನಡೆಯಾಗಿದ್ದು, ಅಪರಾಧಿ ಪವನ್ ಗುಪ್ತಾ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿ ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ.

ಘಟನೆ ನಡೆದ ದಿನ ನಾನು ದೆಹಲಿಯಲ್ಲೇ ಇರ್ಲಿಲ್ಲ: ನೇಣುಗಂಬಕ್ಕೇರಲು 3 ದಿನವಿರುವಾಗ ನಿರ್ಭಯಾ ಅಪರಾಧಿಯ ಹೊಸ ವರಸೆ
ಆಘಾತಕಾರಿ ಬೆಳವಣಿಗೆಯಲ್ಲಿ 2012 ರ ದೆಹಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳಲ್ಲಿ ಒಬ್ಬನಾದ ಮುಖೇಶ್ ಸಿಂಗ್ ತಾನು ಘಟನೆ ನಡೆದ ದಿನ (ಡಿಸೆಂಬರ್ 16 2012) ರಂದು ದೆಹಲಿಯಲ್ಲಿ ಇರಲೇ ಇಲ್ಲ ಹಾಗಾಗಿ ತನಗೆ ವಿಧಿಸಲಾಗಿರುವ ಮರಣದಂಡನೆಯನ್ನು ರದ್ದುಗೊಳಿಸಬೇಕೆಂದು ಕೋರಿ ನ್ಯಾಯಾಲಯದ ಮೊರೆ ಹೊಕ್ಕಿದ್ದಾನೆ. ನಾಲ್ವರು ಅಪರಾಧಿಗಳಿಗೆ ನೇಣುಗಂಬವೇರಲು

ನಿರ್ಭಯಾ ಪ್ರಕರಣ: ಮುಕೇಶ್ ಸಿಂಗ್ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್, ಕಾಮುಕರಿಗೆ ಗಲ್ಲೇ ಗತಿ
ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಅಪರಾಧಿಗಳು ಗಲ್ಲು ಶಿಕ್ಷೆಯಿಂದ ಪಾರಾಗಲು ಹುಡುಕುತ್ತಿರುವ ಎಲ್ಲಾ ದಾರಿಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ಬಂದ್ ಮಾಡಿದ್ದು, ಕಾಮುಕರು ಮಾರ್ಚ್ 20ಕ್ಕೆ ನೇಣಿಗೇರುವುದು ಬಹುತೇಕ ಖಚಿತವಾಗಿದೆ.

ನಿರ್ಭಯಾ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್: ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಅಪರಾಧಿ ಮುಕೇಶ್
ಇದೇ 20 ರಂದು ನಿರ್ಭಯಾ ಅಪರಾಧಿಗಳಿಗೆ ಡೆತ್ ವಾರಂಟ್ ವಿಧಿಸಿ ದೆಹಲಿ ಹೈಕೋರ್ಟ್ ಆದೇಶ ಹೊರಡಿಸಿದ ಬೆನ್ನಲ್ಲೇ ಪ್ರಕರಣದ ಆರೋಪಿ ಮುಕೇಶ್ ಮತ್ತೊಮ್ಮೆ ಸುಪ್ರೀಂಕೊರ್ಟ್ ಮೆಟ್ಟಿಲೇರಿದ್ದಾನೆ.

ಜೈಲಲ್ಲಿ ನನ್ನ ಮೇಲೆ ಹಲ್ಲೆಯಾಗಿದೆ, ನ್ಯಾಯ ಕೊಡಿಸಿ! ನಿರ್ಭಯಾ ಅಪರಾಧಿಯಿಂದ ಪೋಲೀಸರ ವಿರುದ್ಧ ದೂರು
ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಮರಣದಂಡನೆ ಶಿಕ್ಷೆಗೊಳಗಾದ ಅಪರಾಧಿಗಳ ಪೈಕಿ ಒಬ್ಬನಾದ ಪವನ್ ಕುಮಾರ್ ಗುಪ್ತಾ ತಾವು ಮಾಂಡೋಲಿ ಜೈಲಿನಲ್ಲಿದ್ದ ವೇಳೆ ದೈಹಿಕವಾಗಿ ಹಲ್ಲೆ ನಡೆಸಿದ ಆರೋಪದ ಮೇಲೆ ಇಬ್ಬರು ಪೊಲೀಸ್ ಕಾನ್‌ಸ್ಟೆಬಲ್‌ಗಳ ವಿರುದ್ಧ ಎಫ್‌ಐಆರ್ ನೋಂದಣಿ ಕೋರಿ ಬುಧವಾರ ದೆಹಲಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ನಿರ್ಭಯ ಪ್ರಕರಣ: ಜೀವದಾನಕ್ಕಾಗಿ ಲೆಫ್ಟಿನೆಂಟ್ ಗೌರ್ನರ್ ಮೊರೆ ಹೋದ ಅಪರಾಧಿ
ನಿರ್ಭಯ ಪ್ರಕರಣದ ಅಪರಾಧಿಗಳಿಗೆ ಕಾನೂನಿನ ಎಲ್ಲಾ ಬಾಗಿಲು ಮುಚ್ಚಿದ್ದರೂ, ಮರಣದಂಡನೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ.

