NGT

IPL 2024: ಚಿನ್ನಸ್ವಾಮಿ ಸ್ಟೇಡಿಯಂಗೆ ಮತ್ತೆ ಸಂಕಷ್ಟ; ಮೈದಾನದ ನೀರಿನ ಎಲ್ಲ ಮೂಲಗಳ ವಿವರ ಕೇಳಿದ NGT
ರಾಜ್ಯದಲ್ಲಿ ಭೀಕರ ಬರಗಾಲ ಮತ್ತು ತೀವ್ರ ನೀರಿನ ಕೊರತೆಯ ಹೊರತಾಗಿಯೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಾವಳಿ ಆಯೋಜನೆಗೆ ವಿರೋಧ ವ್ಯಕ್ತಪಡಿಸಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಮೈದಾನದ ನೀರಿನ ಎಲ್ಲ ಮೂಲಗಳ ವಿವರ ನೀಡುವಂತೆ ರಾಷ್ಟ್ರೀಯ ಹಸಿರು ಪ್ರಾಧಿಕಾರ(ಎನ್‌ಜಿಟಿ) ಸೂಚಿಸಿದೆ.

ನೇತ್ರಾವತಿ ವಾಟರ್‌ಫ್ರಂಟ್ ವಾಯುವಿಹಾರ ಯೋಜನೆ: ಪರಿಸರ ನಿಯಮ 'ಉಲ್ಲಂಘನೆಗಳ' ಮೇಲೆ NGT ನಿಗಾ!
ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ (ಎಂಎಸ್‌ಸಿಎಲ್) ಜಾರಿಗೊಳಿಸುತ್ತಿರುವ ನೇತ್ರಾವತಿ ವಾಟರ್‌ಫ್ರಂಟ್ ವಾಯುವಿಹಾರ ಯೋಜನೆಯು ಪರಿಸರ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂಬ ಆರೋಪದ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನಿಗಾವಹಿಸಿದೆ.

ಬೆಂಗಳೂರು: ಎನ್‌ಜಿಟಿ ಆದೇಶವಿದ್ದರೂ ನಿಧಾನಗತಿಯಲ್ಲಿ ಸಾಗುತ್ತಿದೆ ಬೆಳ್ಳಂದೂರು- ವರ್ತೂರು ಕೆರೆಗಳ ಪುನರುಜ್ಜೀವನ
ಐದು ವರ್ಷ ಕಳೆದರೂ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಹೂಳು ತೆಗೆಯುವ ಮತ್ತು ಕಾಯಕಲ್ಪ ಮಾಡುವ ಕಾಮಗಾರಿ ಶೇ 50ರಷ್ಟು ಮಾತ್ರ ಪೂರ್ಣಗೊಂಡಿದೆ. ಆದರೆ ಅತ್ಯಂತ ಆಘಾತಕಾರಿ ಸಂಗತಿಯೆಂದರೆ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನಿರ್ದೇಶನದ ಹೊರತಾಗಿಯೂ, ಬೆಳ್ಳಂದೂರು ಮತ್ತು ವರ್ತೂರು ಡೈವರ್ಶನ್ ಚಾನಲ್‌ಗಳಲ್ಲಿ ಸಂಸ್ಕರಿಸದ ಚರಂಡಿ ನೀರು ಹರಿಯುತ್ತಲೇ ಇದೆ.

ಘನತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಪಾಲಿಸದ ರಾಜ್ಯಗಳಿಗೆ 79,098 ಕೋಟಿ ರೂ. ದಂಡ!
2022-23ರಲ್ಲಿ ಪುರಸಭೆ ಘನತ್ಯಾಜ್ಯ ನಿರ್ವಹಣಾ ನಿಯಮಗಳು ಮತ್ತು ಇತರ ಪರಿಸರ ಉಲ್ಲಂಘನೆಗಳಿಗಾಗಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟು 79,098 ಕೋಟಿ ರೂಪಾಯಿ ದಂಡ ವಿಧಿಸಿದೆ ಎಂದು ಕೇಂದ್ರ ಸಚಿವರು ಸಂಸತ್ತಿಗೆ ತಿಳಿಸಿದ್ದಾರೆ.

ಬೆಳ್ಳಂದೂರು ಕೆರೆ ಬಳಿ ಯಾವುದೇ ರಸ್ತೆ ನಿರ್ಮಿಸಿಲ್ಲ: ಎನ್‌ಜಿಟಿಗೆ ಬಿಡಿಎ ಮಾಹಿತಿ
ಬೆಳ್ಳಂದೂರು ಕೆರೆ ಬಳಿ ಯಾವುದೇ ರಸ್ತೆ ನಿರ್ಮಿಸಿಲ್ಲ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಬುಧವಾರ ಚೆನ್ನೈನಲ್ಲಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ (ಎನ್‌ಜಿಟಿ) ಅಫಿಡವಿಟ್ ಸಲ್ಲಿಸಿದೆ.

ಬೆಂಗಳೂರಿನ ಅತ್ತಿಬೆಲೆಯಲ್ಲಿ ಪಟಾಕಿ ದುರಂತ; ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡ ಎನ್‌ಜಿಟಿ
ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯಲ್ಲಿನ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 14 ಮಂದಿ ಸಾವಿಗೀಡಾದ ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ) ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ರಾಜ್ಯ ಸರ್ಕಾರದಿಂದ ಸಮಗ್ರ ಮಾಹಿತಿ ಕೇಳಿದೆ.

ಕಸಾಯಿಖಾನೆಗೂ ‘ಪರಿಸರ ಇಲಾಖೆ ಅನುಮೋದನೆ’ ನೀಡುವ ಕುರಿತು ತೀರ್ಮಾನ ಕೈಗೊಳ್ಳಿ: ಸಚಿವಾಲಯಕ್ಕೆ ಹಸಿರು ನ್ಯಾಯಾಧಿಕರಣ ಸೂಚನೆ
ಕಸಾಯಿಖಾನೆಗಳು ಹಾಗೂ ಮಾಂಸ ಸಂಸ್ಕರಣಾ ಘಟಕಗಳನ್ನು ‘ಪರಿಸರ ಅನುಮೋದನೆ’ ವ್ಯಾಪ್ತಿಗೆ ಸೇರಿಸುವ ಕುರಿತು ಕ್ರಮ ಕೈಗೊಳ್ಳುವಂತೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ರಾಷ್ಟ್ರೀಯ ಹಸಿರು ನ್ಯಾಯಪೀಠ (ಎನ್‌ಜಿಟಿ) ನಿರ್ದೇಶನ ನೀಡಿದೆ.

ಕೆರೆಯ ಹೂಳು ತೆಗೆಯಲು ಪರಿಸರ ಅನುಮತಿ ಪಡೆಯಲು ವಿಫಲ: ನೀರಾವರಿ ಇಲಾಖೆಗೆ 50 ಕೋಟಿ ರೂ. ದಂಡ ವಿಧಿಸಿದ ಎನ್‌ಜಿಟಿ!
ಕೆರೆಗಳಲ್ಲಿ ಹೂಳು ತೆಗೆಯಲು ಪರಿಸರ ಅನುಮತಿ ಪಡೆಯಲು ವಿಫಲವಾದ ರಾಜ್ಯ ನೀರಾವರಿ ಇಲಾಖೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ರೂ.50 ಕೋಟಿ ದಂಡ ವಿಧಿಸಿದೆ.

ತ್ಯಾಜ್ಯ ನಿರ್ವಹಣೆಯಲ್ಲಿ ವಿಫಲ: ಕರ್ನಾಟಕಕ್ಕೆ 2,900 ಕೋಟಿ ರೂ. ದಂಡ ವಿಧಿಸಿದ ಎನ್‌ಜಿಟಿ
ಪರಿಸರಕ್ಕೆ ಹಾನಿ ಉಂಟುಮಾಡುವ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯನ್ನು ಸರಿಯಾಗಿ ನಿರ್ವಹಿಸದ ಆರೋಪದ ಮೇಲೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಕರ್ನಾಟಕಕ್ಕೆ 2,900 ಕೋಟಿ ರೂಪಾಯಿ ದಂಡ ವಿಧಿಸಿದೆ.

