ಕೆರೆಯ ಹೂಳು ತೆಗೆಯಲು ಪರಿಸರ ಅನುಮತಿ ಪಡೆಯಲು ವಿಫಲ: ನೀರಾವರಿ ಇಲಾಖೆಗೆ 50 ಕೋಟಿ ರೂ. ದಂಡ ವಿಧಿಸಿದ ಎನ್‌ಜಿಟಿ!
ಕೆರೆಗಳಲ್ಲಿ ಹೂಳು ತೆಗೆಯಲು ಪರಿಸರ ಅನುಮತಿ ಪಡೆಯಲು ವಿಫಲವಾದ ರಾಜ್ಯ ನೀರಾವರಿ ಇಲಾಖೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ರೂ.50 ಕೋಟಿ ದಂಡ ವಿಧಿಸಿದೆ.

ಬೆಂಗಳೂರು: ಕೆರೆಗಳಲ್ಲಿ ಹೂಳು ತೆಗೆಯಲು ಪರಿಸರ ಅನುಮತಿ ಪಡೆಯಲು ವಿಫಲವಾದ ರಾಜ್ಯ ನೀರಾವರಿ ಇಲಾಖೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ರೂ.50 ಕೋಟಿ ದಂಡ ವಿಧಿಸಿದೆ.
ಮಂಗಳೂರಿನ ಫಲ್ಗುಣಿ ನದಿಯ ಅದ್ಯಪಾಡಿ ಅಣೆಕಟ್ಟು ಮತ್ತು ಬಂಟ್ವಾಳದ ನೇತ್ರಾವತಿ ನದಿಯ ಶಂಬೂರು ಅಣೆಕಟ್ಟಿನ ಹಿನ್ನೀರಿನಿಂದ 14,51,680 ಮೆಟ್ರಿಕ್ ಟನ್ ಮರಳನ್ನು ತೆಗೆಯುವ ಪ್ರಕರಣದ ವಿಚಾರಣೆಯನ್ನು ಎನ್‌ಜಿಟಿ ನಡೆಸುತ್ತಿದೆ.
ವಾಣಿಜ್ಯ ಉದ್ದೇಶಕ್ಕಾಗಿ ಜಲಮೂಲಗಳಿಂದ ಮರಳು, ಹೂಳನ್ನು ತೆಗೆದರೆ, ಅದಕ್ಕೆ ಪರಿಸರದ ಅನುಮತಿ ಅಗತ್ಯವಿದೆ ಎಂದು ಹಲವು ಬಾರಿ ಸೂಚಿಸಲಾಗಿದೆ. ಈ ಪ್ರಕರಣದಲ್ಲಿ ಜಿಲ್ಲಾಧಿಕಾರಿಗಳ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಹೇಳಿದೆ.
ಇದೇ ವೇಳೆ ಮೇ 5, 2020 ರಂದು ರಾಜ್ಯ ಸರ್ಕಾರವು ಅಧಿಸೂಚನೆ ಹೊರಡಿಸಿದ ಮರಳು ನೀತಿಯನ್ನು ನ್ಯಾಯಮಂಡಳಿ ಗಮನಿಸಿತು.
ಪರಿಸರ ಸಚಿವಾಲಯದ ಸುಸ್ಥಿರ ಮರಳು ಗಣಿಗಾರಿಕೆ ಮಾರ್ಗಸೂಚಿಗಳು 2016, ಗಣಿಗಾರಿಕೆ ಕಾರ್ಯಾಚರಣೆಯ ಮೂಲಕ ಮರಳು ತೆಗೆಯುವುದನ್ನು ಒಳಗೊಂಡಿರುವ ಮರಳು-ಹೂಳೆತ್ತುವ ಕಾರ್ಯಗಳನ್ನು ವಿವರಿಸುತ್ತದೆ. ಹೂಳು ತೆಗೆದ ವಸ್ತುಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿದಾಗ ಪರಿಸರ ತೆರವು ಅಗತ್ಯ ಎಂದು ಎನ್‌ಜಿಟಿ ಪದೇ ಪದೇ ಆದೇಶ ನೀಡಿದ್ದರೂ, ಜಿಲ್ಲಾಧಿಕಾರಿಗಳ ಪ್ರಸ್ತುತ ಆದೇಶಗಳು ಸಂಪೂರ್ಣ ಉಲ್ಲಂಘನೆಯಾಗಿದೆ.
ಇಐಎ ಅಧಿಸೂಚನೆ 2006 ಪ್ರಕಾರ ನಿರ್ವಹಣೆ ಮತ್ತು ವಿಪತ್ತು ನಿರ್ವಹಣೆಯ ಉದ್ದೇಶಕ್ಕಾಗಿ ಮಾತ್ರ ಅಣೆಕಟ್ಟುಗಳ ಹೂಳೆತ್ತುವಿಕೆ ಮತ್ತು ಮರಳು ತೆಗೆಯಲು ವಿನಾಯಿತಿ ಇದೆ. ಇಲ್ಲಿ ವಾಣಿಜ್ಯ ಉದ್ದೇಶಕ್ಕೆ ಮರಳು ಗಣಿಗಾರಿಕೆ ನಡೆಸಬಾರದು. ವಾಣಿಜ್ಯ ಉದ್ದೇಶಕ್ಕೆ ಮರಳು ಗಣಿಗಾರಿಕೆ ನಡೆಸಿದರೆ, ಅದಕ್ಕೆ ಪರಿಸರ ಅನುಮತಿ ಪಡೆಯಬೇಕು ಎಂದು ಹೇಳಿದೆ. ಅಲ್ಲದೆ, ಜಲ ಮೂಲಗಳಿಂದ ಹೂಳೆತ್ತುವುದು/ಮರಳು ತೆಗೆಯುವ ಮೊದಲು ಪರಿಸರ ಅನುಮತಿ ಪಡೆಯುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಮುಖ್ಯ ಕಾರ್ಯದರ್ಶಿಗಳಿದೆ ಆದೇಶಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


