New year celebration

ದೆಹಲಿಯಲ್ಲಿ ನೈಟ್ ಕರ್ಫ್ಯೂ ಜಾರಿ: ಹೊಸ ವರ್ಷಾಚರಣೆಗೆ ಅವಕಾಶ ಇಲ್ಲ
ಹೊಸ ವರ್ಷದ ಆಚರಣೆಯನ್ನು ನಿರ್ಬಂಧಿಸಲು ದೆಹಲಿ ಸರ್ಕಾರ ರಾತ್ರಿ ಕರ್ಫ್ಯೂ ಘೋಷಿಸಿರುವುದರಿಂದ ದೆಹಲಿಯಲ್ಲಿ ಇಂದು ರಾತ್ರಿ ಮತ್ತು ನಾಳೆ ರಾತ್ರಿ 11 ರಿಂದ ಬೆಳಿಗ್ಗೆ 6 ರವರೆಗೆ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗುವುದಿಲ್ಲ.

ಈ ವರ್ಷ ಹೊಸ ವರ್ಷಾಚರಣೆ ಇಲ್ಲ, ಸಾರ್ವಜನಿಕ ಸಮಾರಂಭದಲ್ಲಿ ಜನರ ಸಂಖ್ಯೆ ಮಿತಿಗೆ ನಿರ್ಬಂಧ
ಕೋವಿಡ್ ಕಾರಣದಿಂದಾಗಿ ಹೊಸ ವರ್ಷಾಚರಣೆಯ ಬದಲು ಈ ವರ್ಷ ಶೋಕಾಚರಣೆಯನ್ನಾಗಿ ಮಾಡಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದ್ದಾರೆ.

ಯುಗಾದಿ ನಮಗೆ ಹೊಸ ವರ್ಷ, ಸಂಕಷ್ಟ ಸ್ಥಿತಿಯಲ್ಲಿ ಸಂಭ್ರಮಾಚರಣೆ ಅಗತ್ಯವಿದೆಯೇ? ಸುಧಾಕರ್ ಪ್ರಶ್ನೆ
ಹೊಸ ವರ್ಷಚಾರಣೆ ಮತ್ತು ಕ್ರಿಸ್ಮಸ್ ನಮ್ಮ ಸಂಸ್ಕೃತಿಯಲ್ಲ. ಕೋವಿಡ್‌ನ ಸಂಕಷ್ಟ ಸ್ಥಿತಿಯಲ್ಲಿ ಸಂಭ್ರಮಾಚರಣೆ ಅಗತ್ಯವಾದರೂ ಏನಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಪ್ರಶ್ನಿಸಿದ್ದಾರೆ.

ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಯುವತಿಯರ ಜೊತೆ ಅನುಚಿತ ವರ್ತನೆ: ನಾಲ್ವರ ಬಂಧನ
ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಕೆಲ ಕಾಮುಕರು ಕೀಟಲೆ ಮಾಡಿದ್ದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಈ ವಿಡಿಯೋಗಳನ್ನು ಮಾಧ್ಯಮದಲ್ಲಿ ಪ್ರಸಾರ ಮಾಡಲಾಗಿತ್ತು.

ಹೊಸ ವರ್ಷಾಚರಣೆಗೆ ಚಾಮುಂಡಿಬೆಟ್ಟಕ್ಕೆ ಪ್ರವೇಶ ಇಲ್ಲ: ಪೊಲೀಸ್ ಆಯುಕ್ತರ ಎಚ್ಚರಿಕೆ
ಹೊಸ ವರ್ಷಾಚರಣೆಗೆ ಚಾಮುಂಡಿ ಬೆಟ್ಟಕ್ಕೆ ತೆರಳಬೇಕು ಎಂದು ಕೊಂಡಿದ್ದವರಿಗೆ ಮೈಸೂರು ಪೊಲೀಸ್ ಆಯುಕ್ತರು ಶಾಕ್ ನೀಡಿದ್ದು, ಚಾಮುಂಡಿ ಬೆಟ್ಟದಲ್ಲಿ ವರ್ಷಾಚರಣೆಗೆ ಅವಕಾಶ ಇಲ್ಲ ಎಂದು ಹೇಳಿದ್ದಾರೆ.

ಹೊಸ ವರ್ಷಾಚರಣೆಗೆ ಭದ್ರತೆ: ಹೊಸ ವರ್ಷ ಪಾರ್ಟಿ ಮಾಡುವವರಿಗೆ ನಟ ಯಶ್ ವಿಡಿಯೋ ಸಂದೇಶ
ಹೊಸ ವರ್ಷವನ್ನು ಮೋಜುಮಸ್ತಿ, ಮದ್ಯಪಾನ ಗಾನಬಜಾನ ನೃತ್ಯ ಮೂಲಕ ಯುವಜನತೆ ಇತ್ತೀಚೆಗೆ ಬರಮಾಡಿಕೊಳ್ಳುವುದು ಸಹಜವೇ ಆಗಿದೆ. ಅಲ್ಲದೇ ಡಿ. 31ರ ಮಧ್ಯರಾತ್ರಿ ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಕೆಲವೊಮ್ಮೆ ಅಪಘಾತಕ್ಕೆ ಈಡಾಗುವುದು, ಮದ್ಯಪಾನದ ಮತ್ತಿನಲ್ಲಿ ಪೊಲೀಸರೊಂದಿಗೆ ಸಂಘರ್ಷಕ್ಕೆ ಇಳಿಯುವುದು ಸಾಮಾನ್ಯವಾಗಿದೆ.

ಸಿಂಗಾಪೂರ್ ನಲ್ಲಿ ಹೊಸ ವರ್ಷಚಾರಣೆಗೆ ತೆರಳುತ್ತಿದೆ ಕುಮಾರಸ್ವಾಮಿ ಕುಟುಂಬ
ಫಾರಿನ್ ಟ್ರಿಪ್‍ಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೂ ಸಿಕ್ಕಾಪಟ್ಟೆ ನಂಟು. ಅದರಲ್ಲೂ ಸಿಂಗಾಪುರ್ ಅಂದ್ರೆ ಹೆಚ್‍ಡಿಕೆಗೆ ಎಲ್ಲಿಲ್ಲದ ಪ್ರೀತಿ. ಸಮಯ ಸಿಕ್ಕಾಗಲೆಲ್ಲಾ ಸಿಂಗಾಪುರ್ ಗೆ ಹೋಗುತ್ತಲೇ ಇರುತ್ತಾರೆ.

ಬೆಂಗಳೂರು: ಪಾರ್ಕ್, ಆಟದ ಮೈದಾನಗಳಲ್ಲಿ ಹೊಸ ವರ್ಷದ ಪಾರ್ಟಿಗೆ ನಿಷೇಧ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸೇರಿದ ಯಾವುದೇ ಉದ್ಯಾನವನ ಮತ್ತು ಆಟದ ಮೈದಾನಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮಾಡಲು ಬಿಬಿಎಂಪಿ ನಿಷೇಧ ಹೇರಿದೆ.

ಹೊಸ ವರ್ಷಾಚರಣೆ ವೇಳೆ ಈ 3 ನಿಲ್ದಾಣದಿಂದ ಮೆಟ್ರೋ ರೈಲು ಟಿಕೆಟ್ ದರ 50 ರು.!
ಹೊಸ ವರ್ಷಾಚರಣೆ ವೇಳೆ ಮೆಟ್ರೋ ರೈಲು ನಿಲ್ದಾಣಗಳಿಗೆ ಹೆಚ್ಚಿನ ಜನರು ಆಗಮಿಸುವ ನಿರೀಕ್ಷೆ ಇದ್ದು, ಇದೇ ಕಾರಣಕ್ಕೆ ಮೆಟ್ರೋ ರೈಲು ಪ್ರಾಧಿಕಾರ ಪ್ರಮುಖ ಮೂರು ರೈಲು ನಿಲ್ದಾಣಗಳಲ್ಲಿನ ಟಿಕೆಟ್ ದರವನ್ನು 50 ರು.ಗೆ ನಿಗದಿ ಪಡಿಸಿದೆ.

