ರಾಜ್ಯ

ಹೊಸ ವರ್ಷಾಚರಣೆ ವೇಳೆ ಈ 3 ನಿಲ್ದಾಣದಿಂದ ಮೆಟ್ರೋ ರೈಲು ಟಿಕೆಟ್ ದರ 50 ರು.!

ಹೊಸ ವರ್ಷಾಚರಣೆ ವೇಳೆ ಮೆಟ್ರೋ ರೈಲು ನಿಲ್ದಾಣಗಳಿಗೆ ಹೆಚ್ಚಿನ ಜನರು ಆಗಮಿಸುವ ನಿರೀಕ್ಷೆ ಇದ್ದು, ಇದೇ ಕಾರಣಕ್ಕೆ ಮೆಟ್ರೋ ರೈಲು ಪ್ರಾಧಿಕಾರ ಪ್ರಮುಖ ಮೂರು ರೈಲು ನಿಲ್ದಾಣಗಳಲ್ಲಿನ ಟಿಕೆಟ್ ದರವನ್ನು 50 ರು.ಗೆ ನಿಗದಿ ಪಡಿಸಿದೆ.

ಹೊಸ ವರ್ಷಾಚರಣೆ ವೇಳೆ ಈ 3 ನಿಲ್ದಾಣದಿಂದ ಮೆಟ್ರೋ ರೈಲು ಟಿಕೆಟ್ ದರ 50 ರು.!
ಸಂಗ್ರಹ ಚಿತ್ರ
Published On :
ಬೆಂಗಳೂರು: ಹೊಸ ವರ್ಷಾಚರಣೆ ವೇಳೆ ಮೆಟ್ರೋ ರೈಲು ನಿಲ್ದಾಣಗಳಿಗೆ ಹೆಚ್ಚಿನ ಜನರು ಆಗಮಿಸುವ ನಿರೀಕ್ಷೆ ಇದ್ದು, ಇದೇ ಕಾರಣಕ್ಕೆ ಮೆಟ್ರೋ ರೈಲು ಪ್ರಾಧಿಕಾರ ಪ್ರಮುಖ ಮೂರು ರೈಲು ನಿಲ್ದಾಣಗಳಲ್ಲಿನ ಟಿಕೆಟ್ ದರವನ್ನು 50 ರು.ಗೆ ನಿಗದಿ ಪಡಿಸಿದೆ.
ಬಿಎಂಆರ್ ಸಿಎಲ್ ನೀಡಿರುವ ಮಾಹಿತಿಯಂತೆ ಹೊಸ ವರ್ಷಾಚರಣೆ ವೇಳೆ ಟ್ರಿನಿಟಿ ನಿಲ್ದಾಣ, ಎಂಜಿ ರಸ್ತೆ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳಲ್ಲಿ ಅತಿ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ. ಆ ಸಂದರ್ಭದಲ್ಲಿ ಈ ಮೂರು ನಿಲ್ದಾಣಗಳಲ್ಲಿ ಚಿಲ್ಲರೆ ಹೊಂದಾಣಿಕೆ ಮಾಡುವುದು ಕಷ್ಟಕರವಾದ್ದರಿಂದ ಈ ಮೂರು ನಿಲ್ದಾಣಗಳಲ್ಲಿ ಟಿಕೆಟ್ ದರವನ್ನು 50 ರು.ಗಳಿಗೆ ನಿಗದಿ ಪಡಿಸಲಾಗಿದೆ. ಅಂದರೆ ಡಿಸೆಂಬರ್ 31ರ ರಾತ್ರಿ 11ರ ಬಳಿಕ ಮತ್ತು ಜನವರಿ 1ರ ಬೆಳಗ್ಗೆ 1 ಗಂಟೆಯವರೆಗೂ ಈ ಮೂರು ನಿಲ್ದಾಣಗಳಿಂದ ಪ್ರಯಾಣಿಸುವ ಪ್ರಯಾಣಿಕರು ಯಾವುದೇ ನಿಲ್ದಾಣಕ್ಕೆ ಪ್ರಯಾಣಿಸಿದರೂ 50 ರು.ಗಳ ಟಿಕೆಟ್ ಪಡೆಯಬೇಕು.
ಇನ್ನುಳಿದಂತೆ ಹೊಸ ವರ್ಷಾಚರಣೆ ವೇಳೆ ಮೆಟ್ರೋ ಸ್ಮಾರ್ಟ್ ಕಾರ್ಡ್ ನ ರಿಯಾಯಿತಿ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬಿಎಂಆರ್ ಸಿಎಲ್ ಸ್ಪಷ್ಟಪಡಿಸಿದೆ. 
ಡಿಸೆಂಬರ್ 31ರ ರಾತ್ರಿ ಮೆಟ್ರೋ ರೈಲು ಸಂಚಾರ ಅವಧಿ ವಿಸ್ತರಣೆ
ಹೊಸ ವರ್ಷಾಚರಣೆ ನಿಮಿತ್ತ ಡಿಸೆಂಬರ್ 31ರ ರಾತ್ರಿ ಮೆಟ್ರೋ ರೈಲು ಸಂಚಾರ ಅವಧಿಯನ್ನು 4 ಗಂಟಗಳ ಕಾಲ ವಿಸ್ತರಣೆ ಮಾಡಲಾಗುತ್ತಿದ್ದು, ಅಂತೆಯೇ ಮೆಟ್ರೋ ರೈಲುಗಳ ನಡುವಿನ ಅಂತರವನ್ನೂ ಕೂಡ ಕಡಿತಗೊಳಿಸಲು ಬಿಎಂಆರ್ ಸಿಎಲ್ ನಿರ್ಧರಿಸಿದೆ. ಇನ್ನು ಡಿಸೆಂಬರ್ 31 ರಾತ್ರಿ 11ರಿಂದ ಮತ್ತು ಜನವರಿ 1 ರ ಬೆಳಗ್ಗೆ 2 ಗಂಟೆಯವರೆಗೂ ಎಂಜಿ ರಸ್ತೆ, ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳಿಂದ ಸುಮಾರು 15 ಸಾವಿರ ಮಂದಿ ಪ್ರಯಾಣ ಮಾಡುವ ನಿರೀಕ್ಷೆ ಇದ್ದು, ಇದೇ ಕಾರಣಕ್ಕೆ ಬಿಎಂಆರ್ ಸಿಎಲ್ ಸಕಲ ಸಿದ್ಧತೆ ಮಾಡಿಕೊಂಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.