Nepal

ಮೋದಿ - ಕ್ಸಿ ಅನೌಪಚಾರಿಕ ಶೃಂಗಸಭೆ ಅಂತ್ಯ: ನೇಪಾಳಕ್ಕೆ ತೆರಳಿದ ಚೀನಾ ಅಧ್ಯಕ್ಷ
ಎರಡು ದಿನಗಳ ಭಾರತ ಪ್ರವಾಸದಲ್ಲಿದ್ದ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗಿನ ಅನೌಪಚಾರಿಕ ಶೃಂಗಸಭೆ ಬಳಿಕ ಶನಿವಾರ ನೇಪಾಳಕ್ಕೆ ತೆರಳಿದ್ದಾರೆ.

ವ್ಯಾಪಾರ ಕೊರತೆ ಕುರಿತು ಕ್ರಮ ಕೈಗೊಳ್ಳಲು ಚೀನಾ ಸಿದ್ಧವಾಗಿದೆ: ವಿದೇಶಾಂಗ ಕಾರ್ಯದರ್ಶಿ
ವ್ಯಾಪಾರ ಕೊರತೆ ಕುರಿತ ಭಾರತದ ಕಳವಳ ಪರಿಹರಿಸಲು ಪ್ರಮಾಣಿಕ ಕ್ರಮ ಕೈಗೊಳ್ಳಲು ಚೀನಾ ಸಿದ್ಧವಾಗಿದೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆಯವರು ಶನಿವಾರ ಹೇಳಿದ್ದಾರೆ.

ಅತ್ಯಾಚಾರ ಆರೋಪ: ನೇಪಾಳ ಸ್ಪೀಕರ್ ರಾಜೀನಾಮೆ
ಫೆಡರಲ್ ಪಾರ್ಲಿಮೆಂಟ್ ಸೆಕ್ರೆಟರಿಯಟ್ ನಲ್ಲಿ ಮಹಿಳಾ ಸಿಬ್ಬಂದಿಯೊಬ್ಬರ ಮೇಲೆ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ನೇಪಾಳ ಸಂಸತ್ತಿನ ಸ್ಪೀಕರ್ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ನೇಪಾಳದ ಎರಡು ನಗರಗಳ ಮರು ನಿರ್ಮಾಣಕ್ಕೆ ಭಾರತ ಸಾಥ್: ಪ್ರಧಾನಿ ಮೋದಿ

ನೇಪಾಳದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ 32 ಜನ ಬಲಿ
ಗುರುವಾರ ಸಂಜೆ ನೇಪಾಳದಲ್ಲಿ ಸುರಿದ ಭಾರಿ ಮಳೆ ಹಾಗೂ ಭೂ ಕುಸಿತದಿಂದ 32 ಜನ ಸಾವನ್ನಪ್ಪಿದ್ದು, ಹಲವು ಮಂದಿ ತೀವ್ರ ಗಾಯಗೊಂಡಿದ್ದಾರೆ ಮಳೆಯಿಂದಾಗಿ ಸಂಭವಿಸಿದ ಪ್ರವಾಹದಿಂದಾಗಿ 17 ಜನ

ಮೌಂಟ್ ಎವರೆಸ್ಟ್ ನಲ್ಲೂ ಟ್ರಾಫಿಕ್ ಜಾಮ್: ತರಬೇತಿ ಇಲ್ಲದ ಪರ್ವತಾರೋಹಿಗಳನ್ನು ತಡೆಯಿರಿ ಎಂದ ಸಂತ್ರಸ್ಥೆ!
ವಿಶ್ವದ ಅತ್ಯಂತ ಶಿಖರ ಮೌಂಟ್ ಎವರೆಸ್ಟ್ ನಲ್ಲಿ ಟ್ರಾಫಿಕ್ ಜಾಮ್ ನಿಂದಾಗಿ ಮತ್ತು ಅವೈಜ್ಞಾನಿಕ ಪರ್ವತಾರೋಹಣದಿಂದಾಗಿ ಇಲ್ಲಿ ಸಾಕಷ್ಟು ಸಾವುನೋವ ಸಂಭವಿಸುತ್ತಿದ್ದು, ಈ ಪೈಕಿ ನಾನು ಕೂಡ ಓರ್ವ ಸಂತ್ರಸ್ಥೆ ಎಂದು ಪರ್ವತಾರೋಹಿಯೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಮೌಂಟ್ ಎವರೆಸ್ಟ್ ಶಿಖರದಲ್ಲಿ ಟನ್ ಗಟ್ಟಲೇ ತ್ಯಾಜ್ಯ ಹೊರತೆಗೆದ ನೇಪಾಳ
ವಿಶ್ವದ ಅತ್ಯಂತ ಎತ್ತರದ ಶಿಖರ ಮೌಂಟ್ ಎವರೆಸ್ಟ್ ನ ಸ್ವಚ್ಛತಾ ಅಭಿಯಾನ ಕೊನೆಗೂ ಅಂತ್ಯಗೊಂಡಿದ್ದು, ಹಲವು ದಶಕಗಳಿಂದ ಸಂಗ್ರಹಣೆಯಾಗಿದ್ದ ಸುಮಾರು 11 ಟನ್ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗಿದೆ.

ನೇಪಾಳ: ಕಾಂಚೆನ್ ಜುಂಗಾದಲ್ಲಿ ಭಾರತ ಮೂಲದ ಇಬ್ಬರು ಪರ್ವತಾರೋಹಿಗಳ ಸಾವು!
ನೇಪಾಳದ ಕಾಂಚೆನ್ ಜುಂಗಾ ಪರ್ವತದಲ್ಲಿ ಪರ್ವತಾರೋಹಣದ ವೇಳೆ ದುರಂತ ಸಂಭವಿಸಿದ್ದು, ಭಾರತ ಮೂಲದ ಇಬ್ಬರು ಪರ್ವತಾರೋಹಿಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಕಾವಲುಗಾರ ಬೇಕಾದ್ರೆ ನಾನು ನೇಪಾಳಕ್ಕೆ ಹೋಗ್ತೀನಿ, ಭಾರತದಲ್ಲಿ ಬೇಕಿರೋದು ಪ್ರಧಾನಿ: ಹಾರ್ದಿಕ್ ಪಟೇಲ್
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್, "ನನಗೆ ಕಾವಲುಗಾರ ಬೇಕಾದರೆ ನೇಪಾಳಕ್ಕೆ ಹೋಗುತ್ತೇನೆ" ಎಂದು ಹೇಳಿದ್ದಾರೆ.

