Nepal

ನೇಪಾಳ: ಕೆರೆಗೆ ಉರುಳಿ ಬಿದ್ದ ಕಾರು, ನಾಲ್ವರು ಭಾರತೀಯರ ಸಾವು
ದಕ್ಷಿಣ ನೇಪಾಳದ ರೌತಹತ್ ಜಿಲ್ಲೆಯಲ್ಲಿ ಕಾರೊಂದು ಕೆರೆಗೆ ಉರುಳಿ ಬಿದ್ದ ಪರಿಣಾಮ, ನಾಲ್ವರು ಭಾರತೀಯರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಛೆಟ್ರಿ ಡಬಲ್ ಗೋಲು, ಭಾರತ ಸ್ಯಾಫ್ ಚಾಂಪಿಯನ್ ಶಿಪ್ ಫೈನಲ್ ಗೆ
ಸ್ಟಾರ್ ಆಟಗಾರ ಸುನಿಲ್ ಛೆಟ್ರಿ ಬಾರಿಸಿದ ಎರಡು ಗೋಲುಗಳ ಸಹಾಯದಿಂದ ಭಾರತ ತಂಡದ ಇಲ್ಲಿ ನಡೆದಿರುವ ಎಸ್ಎಎಸ್ಎಫ್ ಚಾಂಪಿಯನ್ ಶಿಫ್ ಟೂರ್ನಿಯ ಫೈನಲ್ ಗೆ ಪ್ರವೇಶ ಪಡೆದಿದೆ.

ನೇಪಾಳಕ್ಕೆ 20 ಲಕ್ಷ ಡೋಸ್ ಕೊರೊನಾ ಲಸಿಕೆ ನೀಡಲಿರುವ ಚೀನಾ
ಕಳೆದ ತಿಂಗಳು ಚೀನಾ ಗಡಿ ಬಿಕ್ಕಟ್ಟಿನ ಕುರಿತು ಪರಾಮರ್ಶೆ ನಡೆಸಲು ನೇಪಾಳ ಸರ್ಕಾರ ಪ್ರತ್ಯೇಕ ಸಮಿತಿಯನ್ನು ರಚಿಸಿತ್ತು

ನೇಪಾಳದಲ್ಲಿ ಭೀಕರ ರಸ್ತೆ ಅಪಘಾತ: ಬಸ್ ಉರುಳಿ ಬಿದ್ದು 32 ಮಂದಿ ಸಾವು
ನೇಪಾಳದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬಸ್ ವೊಂದು ಉರುಳಿ ಬಿದ್ದ ಪರಿಣಾಮ 32 ಮಂದಿ ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ.

ನೇಪಾಳ ಪ್ರಧಾನಿ ಕೆ.ಪಿ ಶರ್ಮಾ ಓಲಿಗೆ ಮುಖಭಂಗ; ಶೇರ್ ಬಹದ್ದೂರ್ ದೇವುಬಾರನ್ನು ಪ್ರಧಾನಿಯನ್ನಾಗಿ ನೇಮಿಸಲು 'ಸುಪ್ರೀಂ' ಆದೇಶ
ನೇಪಾಳ ರಾಜಕೀಯ ಬಿಕ್ಕಟ್ಟು ವಿಚಾರದಲ್ಲಿ ನೇಪಾಳ ಪ್ರಧಾನಿ ಕೆ.ಪಿ ಶರ್ಮಾ ಓಲಿಗೆ ಭಾರಿ ಮುಖಭಂಗವಾಗಿದ್ದು, ಶೇರ್ ಬಹದ್ದೂರ್ ದೇವುಬಾ ಅವರನ್ನೇ ಪುನಃ ಪ್ರಧಾನಿಯನ್ನಾಗಿ ನೇಮಿಸುವಂತೆ ನೇಪಾಳ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ನೇಪಾಳ ರಾಜಕೀಯ ಬಿಕ್ಕಟ್ಟು: ಪ್ರಧಾನಿ ಒಲಿ ಸಂಪುಟದ 20 ಸಚಿವರ ನೇಮಕ ರದ್ದುಪಡಿಸಿದ ಸುಪ್ರೀಂ ಕೋರ್ಟ್
ನೇಪಾಳ ಪ್ರಧಾನಿ ಕೆ ಪಿ ಶರ್ಮಾ ಒಲಿಗೆ ದೊಡ್ಡ ಹಿನ್ನಡೆಯೊಂದರಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರ 20 ಮಂತ್ರಿಗಳ ನೇಮಕ ಅಸಂವಿಧಾನಿಕ ಎಂದು ತೀರ್ಪು ನೀಡಿದೆ, ಇದು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ವಿಸರ್ಜನೆಯ ನಂತರ ಅವರ ಇತ್ತೀಚಿನ ಎರಡು ಸಂಪುಟ ವಿಸ್ತರಣೆಗಳನ್ನು ಅಮಾನ್ಯಗೊಳಿಸಿದೆ.

ಆಗ ರಾಮನ ಅಯೋಧ್ಯೆ ಈಗ ಯೋಗ ನಮ್ಮದು ಎಂದ ನೇಪಾಳ ಪ್ರಧಾನಿ ಒಲಿ!
ಇಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗಿದೆ. ಆದರೆ ಭಾರತದ ನೆರೆರಾಷ್ಟ್ರ ನೇಪಾಳದ ಉಸ್ತುವಾರಿ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಯೋಗದ ಬಗ್ಗೆ ಹೇಳಿಕೆಯನ್ನು ನೀಡಿ ವಿವಾದ ಸೃಷ್ಟಿಸಿದ್ದಾರೆ. "ಯೋಗ" ನೇಪಾಳದಲ್ಲಿ ಹುಟ್ಟಿಕೊಂಡಿದ್ದು ಹೊರತು ಭಾರತದಲ್ಲಲ್ಲ ಎಂದಿದ್ದಾರೆ.

ಭಾರತದೊಂದಿಗಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲಾಗಿದೆ: ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ
ನೆರೆಯ ಭಾರತದೊಂದಿಗಿನ ತಪ್ಪು ತಿಳುವಳಿಕೆಯನ್ನು ಪರಿಹರಿಸಲಾಗಿದೆ ಎಂದು ನೇಪಾಳದ ಪ್ರಧಾನ ಮಂತ್ರಿ ಕೆ ಪಿ ಶರ್ಮಾ ಒಲಿ ಹೇಳಿದ್ದಾರೆ.

ಸರ್ಕಾರ ರಚಿಸಲು ವಿಪಕ್ಷಗಳು ವಿಫಲ; ಮತ್ತೆ ನೇಪಾಳ ಪ್ರಧಾನಿಯಾಗಿ ಕೆ.ಪಿ. ಶರ್ಮಾ ಒಲಿ ಮರುನೇಮಕ
ನೇಪಾಳ ಅಧ್ಯಕ್ಷ ಬಿಡ್ಯಾ ದೇವಿ ಭಂಡಾರಿ ಅವರ ನಿರ್ದೇಶನದಂತೆ 3 ದಿನಗಳಲ್ಲಿ ಸರ್ಕಾರ ರಚಿಸುವಲ್ಲಿ ವಿಪಕ್ಷಗಳು ವಿಫಲವಾಗಿರುವ ಹಿನ್ನಲೆಯಲ್ಲಿ ನೇಪಾಳ ಪ್ರಧಾನಿಯಾಗಿ ಮತ್ತೆ ಕೆ ಪಿ ಶರ್ಮಾ ಒಲಿ ಅವರನ್ನು ಮರುನೇಮಕ ಮಾಡಲಾಗಿದೆ.

