ಸರ್ಕಾರ ರಚಿಸಲು ವಿಪಕ್ಷಗಳು ವಿಫಲ; ಮತ್ತೆ ನೇಪಾಳ ಪ್ರಧಾನಿಯಾಗಿ ಕೆ.ಪಿ. ಶರ್ಮಾ ಒಲಿ ಮರುನೇಮಕ
ನೇಪಾಳ ಅಧ್ಯಕ್ಷ ಬಿಡ್ಯಾ ದೇವಿ ಭಂಡಾರಿ ಅವರ ನಿರ್ದೇಶನದಂತೆ 3 ದಿನಗಳಲ್ಲಿ ಸರ್ಕಾರ ರಚಿಸುವಲ್ಲಿ ವಿಪಕ್ಷಗಳು ವಿಫಲವಾಗಿರುವ ಹಿನ್ನಲೆಯಲ್ಲಿ ನೇಪಾಳ ಪ್ರಧಾನಿಯಾಗಿ ಮತ್ತೆ ಕೆ ಪಿ ಶರ್ಮಾ ಒಲಿ ಅವರನ್ನು ಮರುನೇಮಕ ಮಾಡಲಾಗಿದೆ.

ಕಠ್ಮಂಡು: ನೇಪಾಳ ಅಧ್ಯಕ್ಷ ಬಿಡ್ಯಾ ದೇವಿ ಭಂಡಾರಿ ಅವರ ನಿರ್ದೇಶನದಂತೆ 3 ದಿನಗಳಲ್ಲಿ ಸರ್ಕಾರ ರಚಿಸುವಲ್ಲಿ ವಿಪಕ್ಷಗಳು ವಿಫಲವಾಗಿರುವ ಹಿನ್ನಲೆಯಲ್ಲಿ ನೇಪಾಳ ಪ್ರಧಾನಿಯಾಗಿ ಮತ್ತೆ ಕೆ ಪಿ ಶರ್ಮಾ ಒಲಿ ಅವರನ್ನು ಮರುನೇಮಕ ಮಾಡಲಾಗಿದೆ.
ನೇಪಾಳದ ಇತರ ಪಕ್ಷಗಳು ತಮ್ಮ ಸ್ಥಾನವನ್ನು ಪಡೆಯಲು ಸಮ್ಮಿಶ್ರ ಸರ್ಕಾರವನ್ನು ರಚಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ, ಪ್ರಧಾನಿಯಾಗಿ ಮರುನೇಮಕಗೊಂಡಿರುವ ಕೆ ಪಿ ಶರ್ಮಾ ಒಲಿ ಅವರು ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು. ಅಧ್ಯಕ್ಷೆ ಬಿಡ್ಯಾ ದೇವಿ ಭಂಡಾರಿ ಅವರು ಕೆಪಿ ಶರ್ಮಾ ಒಲಿ ಮತ್ತು 24 ಮಂತ್ರಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಇದೇ ಮೇ 10ರಂದು ನೇಪಾಳದಲ್ಲಿ ಕೆಪಿ ಶರ್ಮಾ ಒಲಿ ಅವರಿಂದ ವಿಶ್ವಾಸಮತ ಯಾಚನೆ ನಡೆದಿತ್ತು. ನೇಪಾಳ ಸಂಸತ್ ಕೆಳಮನೆಯಲ್ಲಿ 275 ಸದಸ್ಯರಿದ್ದು ಈ ಪೈಕಿ ನಾಲ್ವರು ಅಮಾನತುಗೊಂಡಿದ್ದರು. ಹೀಗಾಗಿ ವಿಶ್ವಾಸ ಮತಯಾಚನೆಗೆ ಮುಂದಾಗಿದ್ದ ಓಲಿಗೆ 136 ಮತ ಬೇಕಿತ್ತಾದರೂ ಸಿಕ್ಕಿದ್ದು 93 ಮತ ಮಾತ್ರ. ಈ ಮೂಲಕ ಕೆ ಪಿ ಶರ್ಮಾ ಒಲಿ ಸರ್ಕಾರ ಪತನವಾಗಿತ್ತು. ನೇಪಾಳ ಸಂವಿಧಾನದ 76 (2)ನೇ ವಿಧಿಯ ಅನ್ವಯ ಹೊಸ ಸರ್ಕಾರ ರಚಿಸಲು ಅಧ್ಯಕ್ಷರಾದ ಬಿಡ್ಯಾ ದೇವಿ ಅವರು 3 ದಿನಗಳ ಕಾಲಾವಕಾಶ ನೀಡಿದ್ದರು.
ಒಲಿ ಅವರು ಸಂಸತ್ತಿನಲ್ಲಿ ವಿಶ್ವಾಸ ಮತವನ್ನು ಕಳೆದುಕೊಂಡ ನಂತರ ಸೋಮವಾರ, ಅಧ್ಯಕ್ಷರಾದ ಭಂಡಾರಿ ಅವರು ಗುರುವಾರ ಸಮ್ಮಿಶ್ರ ಸರ್ಕಾರ ರಚನೆಗೆ ರಾಜಕೀಯ ಪಕ್ಷಗಳನ್ನು ಕರೆದಿದ್ದರು. ನೇಪಾಳಿ ಕಾಂಗ್ರೆಸ್ ಪಕ್ಷ, ನೇಪಾಳದ ಕಮ್ಯುನಿಸ್ಟ್ ಪಕ್ಷ (ಮಾವೋವಾದಿ ಕೇಂದ್ರ) ಮತ್ತು ಜನತಾ ಸಮಾಜಬಾದಿ ಪಕ್ಷದ ಒಂದು ಭಾಗವು ಸರಣಿ ಮಾತುಕತೆಗಳ ನಂತರವೂ ಹೊಸ ಸರ್ಕಾರ ರಚಿಸಲು ಬಹುಮತವನ್ನು ನಿರ್ವಹಿಸುವಲ್ಲಿ ವಿಫಲವಾಗಿದೆ. ಅಧ್ಯಕ್ಷರು ನಿಗದಿಪಡಿಸಿದಂತೆ ಗುರುವಾರ ಸಂಜೆ ವೇಳೆಗೆ ಹೊಸ ಸರ್ಕಾರ ರಚಿಸಲು ಇತರ ಪಕ್ಷಗಳು ಶಾಸಕರ ಬಹುಮತದ ಬೆಂಬಲವನ್ನು ಪಡೆಯಲು ವಿಫಲವಾದ ಕಾರಣ ಒಲಿಯನ್ನು ಅಲ್ಪಸಂಖ್ಯಾತ ಸರ್ಕಾರದ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು.
ಬಹುಮತ ಸಾಬೀತಿಗೆ 30 ದಿನಗಳ ಗಡುವು
ಇದೇ ವೇಳೆ ಸರ್ಕಾರಕ್ಕೆ ಬಹುಮತ ಸಾಬೀತು ಪಡಿಸಲು 30 ದಿನಗಳ ಕಾಲಾವಕಾಶ ಕೂಡ ನೀಡಲಾಗಿದೆ. ಸಂವಿಧಾನದ ಪ್ರಕಾರ ಒಲಿ ಅವರು 30 ದಿನಗಳಲ್ಲಿ ಮನೆಯ ಮೇಲೆ ವಿಶ್ವಾಸ ಮತ ಚಲಾಯಿಸಬೇಕಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


