NCW

NCW ಗೆ 6 ತಿಂಗಳಲ್ಲಿ 12,600 ದೂರು; ಇದು ಇದುವರೆಗಿನ ಅತಿ ಹೆಚ್ಚು!
ಈ ವರ್ಷ ಜೂನ್ ವರೆಗೆ 12,600 ದೂರುಗಳನ್ನು ರಾಷ್ಟ್ರೀಯ ಮಹಿಳಾ ಆಯೋಗ(NCW) ಸ್ವೀಕರಿಸಿದೆ ಮತ್ತು ಇದು ಕೇವಲ 6 ತಿಂಗಳಲ್ಲಿ ಎನ್‌ಸಿಡಬ್ಲ್ಯು ಸ್ವೀಕರಿಸಿದ ಅತಿ ಹೆಚ್ಚು ದೂರುಗಳಾಗಿವೆ.

ಮಲಿವಾಲ್ ಹಲ್ಲೆ ಪ್ರಕರಣ: NCW ವಿಚಾರಣೆಗೆ ಕೇಜ್ರಿವಾಲ್ ಸಹಾಯಕ ಗೈರು; ಪೊಲೀಸರಿಂದ ಎಫ್ಐಆರ್ ದಾಖಲು
ಎನ್‌ಸಿಡಬ್ಲ್ಯು ಇಂದು ಬೆಳಗ್ಗೆ 11 ಗಂಟೆಗೆ ತಮ್ಮ ಮುಂದೆ ಹಾಜರಾಗುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭವ್ ಕುಮಾರ್‌ಗೆ ಸಮನ್ಸ್ ನೀಡಿತ್ತು.

ಸ್ವಾತಿ ಮಲಿವಾಲ್ ಪ್ರಕರಣ: ಕೇಜ್ರಿವಾಲ್ ಆಪ್ತನಿಗೆ NCW ಸಮನ್ಸ್
ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲಿವಾಲ್ ವಿರುದ್ಧದ ಹಲ್ಲೆ ಪ್ರಕರಣದಲ್ಲಿ ಕೇಜ್ರಿವಾಲ್ ಆಪ್ತನಿಗೆ ರಾಷ್ಟ್ರೀಯ ಮಹಿಳಾ ಆಯೋಗ (ಎನ್ ಸಿಡಬ್ಲ್ಯು) ಸಮನ್ಸ್ ಜಾರಿಗೊಳಿಸಿದೆ.

ಸೆಕ್ಸ್ ವೀಡಿಯೋ ಪ್ರಕರಣ: ಸಂತ್ರಸ್ತೆಗೆ ಬೆದರಿಕೆ ಕುರಿತು NCW ಮಾಹಿತಿ ಹಂಚಿಕೊಳ್ಳಲು ಗೃಹ ಸಚಿವ ಪರಮೇಶ್ವರ್ ಸೂಚನೆ
ಸೆಕ್ಸ್ ವೀಡಿಯೋ ಪ್ರಕರಣದಲ್ಲಿ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ ವಿರುದ್ಧ ದೂರು ದಾಖಲಿಸಿರುವ ಸಂತ್ರಸ್ತ ಮಹಿಳೆಗೆ ಬೆದರಿಕೆ ಹಾಕಿರುವ ಕುರಿತು ವಿಶೇಷ ತನಿಖಾ ತಂಡದೊಂದಿಗೆ (ಎಸ್‌ಐಟಿ) ಮಾಹಿತಿ ಹಂಚಿಕೊಳ್ಳುವಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ (ಎನ್‌ಸಿಡಬ್ಲ್ಯು) ಸೂಚಿಸಿದ್ದಾರೆ.

ಪ್ರಜ್ವಲ್ ವಿರುದ್ಧ ದೂರು ನೀಡುವಂತೆ ಮಹಿಳೆಗೆ ಬೆದರಿಕೆ: NCW. HD ರೇವಣ್ಣಗೆ ಇನ್ನು 3 ದಿನ ಜೈಲೇ ಗತಿ. SSLC ಫಲಿತಾಂಶ: ಶೇ. 73ರಷ್ಟು ವಿದ್ಯಾರ್ಥಿಗಳು ಪಾಸ್! ಇವು ಇಂದಿನ ಸುದ್ದಿ ಮುಖ್ಯಾಂಶಗಳು - 09-05-24

ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಟ್ವಿಸ್ಟ್: ಪೊಲೀಸರೆಂದು ಹೇಳಿಕೊಂಡ ಮೂವರಿಂದ ಸುಳ್ಳು ದೂರು ದಾಖಲಿಸಲು ಸಂತ್ರಸ್ತೆಗೆ ಒತ್ತಾಯ- NCW
ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಸೆಕ್ಸ್ ವಿಡಿಯೋ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಜನರ ಗುಂಪೊಂದು ಕಿರುಕುಳ ನೀಡುವುದಾಗಿ ಬೆದರಿಕೆ ಹಾಕಿದ ನಂತರ ಸುಳ್ಳು ದೂರು ದಾಖಲಿಸುವಂತೆ ತನ್ನನ್ನು ಒತ್ತಾಯಿಸಿದ್ದಾಗಿ ಸಂತ್ರಸ್ತೆಯೊಬ್ಬರು ಹೇಳಿರುವುದಾಗಿ ರಾಷ್ಟ್ರೀಯ ಮಹಿಳಾ ಆಯೋಗ ಗುರುವಾರ ಹೇಳಿದೆ.

ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣ: ಕರ್ನಾಟಕ ಪೊಲೀಸರಿಂದ ವರದಿ ಕೇಳಿದ NCW, ಆರೋಪಿ ಬಂಧನಕ್ಕೆ ಆಗ್ರಹ
ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರು ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಕುರಿತು ಮೂರು ದಿನಗಳಲ್ಲಿ ವರದಿ ನೀಡುವಂತೆ ರಾಷ್ಟ್ರೀಯ ಮಹಿಳಾ ಆಯೋಗ ಕರ್ನಾಟಕ ಪೊಲೀಸರಿಗೆ ಸೂಚಿಸಿದೆ.

2023ರಲ್ಲಿ ಮಹಿಳೆಯರ ವಿರುದ್ಧ 28,811 ಅಪರಾಧ, ಉತ್ತರ ಪ್ರದೇಶದಲ್ಲೇ ಶೇ. 55 ರಷ್ಟು ಪ್ರಕರಣ: NCW
ರಾಷ್ಟ್ರೀಯ ಮಹಿಳಾ ಆಯೋಗ(ಎನ್‌ಸಿಡಬ್ಲ್ಯು) ಕಳೆದ ವರ್ಷ ಮಹಿಳೆಯರ ವಿರುದ್ಧದ ಅಪರಾಧಕ್ಕೆ ಸಂಬಂಧಿಸಿದಂತೆ 28,811 ಪ್ರಕರಣಗಳನ್ನು ದಾಖಲಿಸಿದೆ ಮತ್ತು ಈ ಪೈಕಿ ಶೇಕಡಾ 55 ರಷ್ಟು ಪ್ರಕರಣಗಳು ಉತ್ತರ ಪ್ರದೇಶದಿಂದ ವರದಿಯಾಗಿವೆ.

ತ್ರಿಶಾ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ಮನ್ಸೂರ್ ಅಲಿ ಖಾನ್ ಬಂಧಿಸುವಂತೆ ತಮಿಳುನಾಡು ಪೊಲೀಸರಿಗೆ NCW ನಿರ್ದೇಶನ
ನಟಿ ತ್ರಿಶಾ ಕೃಷ್ಣನ್ ಬಗ್ಗೆ ಕೀಳು ಮಟ್ಟದ ಹೇಳಿಕೆ ಕೊಟ್ಟಿರುವ ನಟ ಮನ್ಸೂರ್ ಅಲಿ ಖಾನ್ ವಿರುದ್ಧ ಪ್ರಕರಣ ದಾಖಲಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗ (NCW) ತಮಿಳುನಾಡು ಪೊಲೀಸರಿಗೆ ನಿರ್ದೇಶನ ನೀಡಿದೆ.

