Namma Metro

ಭಾನುವಾರ ಜನತಾ ಕರ್ಫ್ಯೂ: ಮೆಟ್ರೋ, ಕೆಎಸ್ ಆರ್ ಟಿಸಿ ಬಂದ್, ಬೆಂಗಳೂರು ಸ್ತಬ್ಧ
ಮಹಾಮಾರಿ ಕೊರೋನಾ ವೈರಸ್ ಹರಡುವುದನ್ನು ತಡೆಯುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ದೇಶಾದ್ಯಂದ ಜನತಾ ಕರ್ಫ್ಯೂಗೆ ಕರೆ ನೀಡಿದ್ದು, ಅಂದು ಬೆಂಗಳೂರು ಸಂಪೂರ್ಣ ಸ್ತಬ್ಧವಾಗಲಿದೆ.

ಮೆಟ್ರೋ ಕಾಮಗಾರಿ ವೇಳೆ ಕಾರ್ಮಿಕನ ದುರ್ಮರಣ!
ಮೆಟ್ರೋ 2 ನೇ ಹಂತದ ವ್ಯಾಪ್ತಿಗೆ ಬರುವ ಪಟ್ಟಣಗೆರೆ ಮೆಟ್ರೋ ನಿಲ್ದಾಣದಲ್ಲಿ ಎಸ್ಕಲೇಟರ್ ಅಳವಡಿಕೆ ಕಾಮಗಾರಿ ವೇಳೆ 56 ವರ್ಷದ ಕಾರ್ಮಿಕರೊಬ್ಬರು ಸಾವನ್ನಪ್ಪಿದ್ದಾರೆ.

ನಮ್ಮ ಮೆಟ್ರೋ: ಅಂಜನಾಪುರ ಟೌನ್ಶಿಪ್ ವರಗೆ ಮತ್ತು ಕೆಂಗೇರಿ ವರಗೆ ವಿಸ್ತೃತ ಮಾರ್ಗ ಇದೇ ವರ್ಷ ಪ್ರಾರಂಭ!
ನಮ್ಮ ಮೆಟ್ರೋದ ಮತ್ತೊಂದು ಹಂತದ ಮಾರ್ಗ ಇದೇ ವರ್ಷ ಕಾರ್ಯಾರಂಭ ಮಾಡಲಿದೆ.

ನಮ್ಮ ಮೆಟ್ರೋ: ಸ್ಮಾರ್ಟ್ ಕಾರ್ಡ್ ಮೇಲಿನ ಮೂಲ ಪ್ರಯಾಣ ದರ ರಿಯಾಯ್ತಿ 15% ನಿಂದ 5% ಗೆ ಇಳಿಕೆ!
ನಮ್ಮ ಮೆಟ್ರೋದಲ್ಲಿ ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ ನೀಡಲಾಗುತ್ತಿದ್ದ ಮೂಲ ಪ್ರಯಾಣ ದರದ ರಿಯಾಯ್ತಿಯನ್ನು ಕಡಿತಗೊಳಿಸಲು ಬಿಎಂಆರ್ ಸಿಎಲ್ ನಿರ್ಧರಿಸಿದೆ.

ಹೊಸ ವರ್ಷಾಚರಣೆ ಸಂಭ್ರಮಕ್ಕೆ ಬಿಎಂಆರ್ಸಿಎಲ್ ಸಜ್ಜು: ಬೆಳಿಗ್ಗೆ 2ರವರೆಗೆ 'ನಮ್ಮ ಮೆಟ್ರೋ' ಸಂಚಾರ
ಹೊಸ ವರ್ಷದ ಮುನ್ನಾದಿನ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಪಾಲ್ಗೊಳ್ಳುವ ಜನರಿಗೆ ಬಿಎಂಆರ್ಸಿಎಲ್ ನಿಂದ ಇಲ್ಲಿದೆ ಶುಭ ಸುದ್ದಿ! ಹೊಸ ವರ್ಷಾಚರಣೆಗಾಗಿ ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಸೇರಿ ಹಲವೆಡೆ ಭಾರೀ ಜನಸ್ತೋಮ ಸೇರುವ ನಿರೀಕ್ಷೆ ಇದ್ದು ಇದಕ್ಕಾಗಿ ಬಿಎಂಆರ್ಸಿಎಲ್ ಮೆಟ್ರೊ ರೈಲು ಸೇವೆಗಳನ್ನು ಸಾಮಾನ್ಯ ದಿನಕ್ಕಿಂತ ಮೂರು ಗಂಟೆಗಳ ಕಾಲ ಹೆಚ್ಚುವರಿಯಾಗಿ ಒ

ಸಾರ್ವಜನಿಕರ ಒತ್ತಾಯಕ್ಕೆ ಮಣಿದ ಮೆಟ್ರೋ: ರೈಲು ಸೇವಾ ಅವಧಿ ರಾತ್ರಿ 12ರವರೆಗೆ ವಿಸ್ತರಣೆ, ಜ.1 ರಿಂದ ಜಾರಿ
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿಗಮ ಸಿಹಿ ಸುದ್ದಿ ನೀಡಿದ್ದು, ಜನವರಿ 1ರಿಂದ ಮೆಟ್ರೋ ರೈಲಿನ ಕೊನೆಯ ಸಂಚಾರದ ಅವಧಿಯನ್ನು ಅರ್ಧಗಂಟೆ ವಿಸ್ತರಿಸಲು ನಿರ್ಧರಿಸಿದೆ.

ಇಂದಿನಿಂದ ಮೆಟ್ರೋ ಹಸಿರು ಮಾರ್ಗದಲ್ಲಿ 6 ಬೋಗಿಯ 2 ರೈಲು ಸಂಚಾರ ಆರಂಭ
ನಮ್ಮ ಮೆಟ್ರೋ ರೈಲು ನಿಗಮದ ಹಸಿರು ಮಾರ್ಗ (ನಾಗಸಂದ್ರ-ಯಲಚೇನಹಳ್ಳಿ)ದಲ್ಲಿ ಸೋಮವಾರದಿಂದ ಆರು ಬೋಗಿಗಳ ಎರಡು ರೈಲುಗಳ ಸಂಚಾರ ಆರಂಭವಾಗಲಿದೆ.

ನಮ್ಮ ಮೆಟ್ರೋ ಕಾಮಗಾರಿ ಹಿನ್ನೆಲೆ: ಗ್ರೀನ್ ಲೈನ್ ಮಾರ್ಗದಲ್ಲಿ 4 ದಿನ ರೈಲು ಸಂಚಾರ ಸ್ಥಗಿತ
ನಮ್ಮ ಮೆಟ್ರೋ ಹಸಿರು ಮಾರ್ಗ (ಗ್ರೀನ್ ಲೈನ್) ಬಳಸುವ ಪ್ರಯಾಣಿಕರು ಈ ಸುದ್ದಿಯನ್ನು ಅಗತ್ಯವಾಗಿ ಗಮನಿಸಿ! ಮುಂದಿನ ವಾರ ಈ ಮಾರ್ಗದ ಆರ್.ವಿ. ರಸ್ತೆ-ಯೆಲಚೇನಹಳ್ಳಿ ನಡುವಿನ ಮೆಟ್ರೋ ಸಂಚಾರ ನಾಲ್ಕು ದಿನಗಳ ಕಾಲ ರದ್ದಾಗಲಿದೆ.

ದಸರಾ ದಾಖಲೆ ಮುರಿದ 'ನಮ್ಮ ಮೆಟ್ರೋ': ಒಂದೇ ದಿನದಲ್ಲಿ 4.83 ಲಕ್ಷ ಪ್ರಯಾಣಿಕರ ಸಂಚಾರ
ನಮ್ಮ ಮೆಟ್ರೋ ಕಾರ್ಯಾಚರಣೆಯಲ್ಲಿ ಈ ಹಿಂದಿನ ದಸರಾ ದಾಖಲೆಯನ್ನು ಸರಿಗಟ್ಟಿದ್ದು, ಒಂದೇ ದಿನ 4.83 ಲಕ್ಷ ಪ್ರಯಾಣಿಕರು ಸಂಚಾರ ನಡೆಸಿದ್ದಾರೆ.

