Namma Metro

ಮೆಟ್ರೋ ಪ್ರಯಾಣ ದರ ಏರಿಕೆ: ಶೇ. 51.5 ರಷ್ಟು ಹೆಚ್ಚಳಕ್ಕೆ ದರ ನಿಗದಿ ಸಮಿತಿ ಶಿಫಾರಸು; BMRCL ಇಟ್ಟಿದ್ದ ಬೇಡಿಕೆ ಎಷ್ಟು ಗೊತ್ತೆ?
ಸಮಿತಿಯು 7.5 ವರ್ಷಗಳಲ್ಲಿ ಶೇ. 51.5 ದರ ಹೆಚ್ಚಳವನ್ನು ಪ್ರಸ್ತಾಪಿಸಿತ್ತು, ಸುಮಾರು ಶೇ. 6.87ರಷ್ಟು ವಾರ್ಷಿಕವಾಗಿ ಏರಿಕೆ ಮಾಡಿತ್ತು. ಬಿಎಂಆರ್‌ಸಿಎಲ್ ಶೇ 105.5ರಷ್ಟು ದರ ಏರಿಕೆ ಮಾಡುವಂತೆ ಬೇಡಿಕೆ ಇಟ್ಟಿದ್ದು.

ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಮತ್ತೊಂದು ರೈಲು ಸೇರ್ಪಡೆ: ಇಂದಿನಿಂದ ಸಂಚಾರ ಆರಂಭ
4ನೇ ರೈಲಿನ ಸಂಚಾರದೊಂದಿಗೆ ರೈಲುಗಳ ಸಂಚಾರದ ವೇಳಾಪಟ್ಟಿ ಬದಲಾವಣೆಯಾಗಿದ್ದು, ರೈಲುಗಳ ನಡುವಿನ ಅಂತರ 25 ನಿಮಿಷದಿಂದ 19 ನಿಮಿಷಕ್ಕೆ ಇಳಿಕೆಯಾಗಿದೆ.

ನಮ್ಮ ಮೆಟ್ರೋ ನಿಲ್ದಾಣಕ್ಕೆ ಸೇಂಟ್ ಮೇರಿ ಹೆಸರು: ಪ್ರಸ್ತಾವನೆಗೆ ಸಿಎಂ ಒಪ್ಪಿಗೆ; ತೀವ್ರ ವಿರೋಧ
ಬೆಂಗಳೂರಿನಲ್ಲಿ ಮೆಟ್ರೋ ಕನಸು ಕಂಡ ವ್ಯಕ್ತಿಯ ಹೆಸರನ್ನೂ ಇನ್ನೂ ನಾಮಕರಣ ಮಾಡಿಲ್ಲ. ಇಂದು ಶಂಕರ್ ನಾಗ್'ಗೆ ಮಾಡಿದ ಅನ್ಯಾಯ.

ನಮ್ಮ ಮೆಟ್ರೊ ಹಳದಿ ಮಾರ್ಗ ಪ್ರಯಾಣಿಕರಿಗೆ ಶುಭ ಸುದ್ದಿ: ಈ ವಾರ 4ನೇ ರೈಲು ಸಂಚಾರ ಆರಂಭ, ಕಾಯುವಿಕೆ ಸಮಯ 10 ನಿಮಿಷ ಇಳಿಕೆ..!
ಈ ಮಾರ್ಗದಲ್ಲಿ ಪ್ರಸ್ತುತ 3 ರೈಲುಗಳನ್ನು ಸಂಚರಿಸುತ್ತಿದ್ದು, 4ನೇ ರೈಲಿನ ಸೇರ್ಪಡೆ ಪೀಕ್-ಅವರ್'ನಲ್ಲಿ ಕಾಯುವಿಕೆ ಸಮಯವನ್ನು 25 ನಿಮಿಷಗಳಿಂದ ಸುಮಾರು 15 ನಿಮಿಷಗಳಿಗೆ ಇಳಿಸುವ ನಿರೀಕ್ಷೆಯಿದೆ.

'Delhi Metro ಗೆ ಹೋಲಿಸಿದರೆ Bengaluru Metro ದರ ಅತ್ಯಂತ ದುಬಾರಿ': BMRCL, ರಾಜ್ಯ ಸರ್ಕಾರದ ವಿರುದ್ಧ Tejasvi Surya ಕಿಡಿ!
ಬೆಂಗಳೂರು ಮೆಟ್ರೋದ ದರ ಶೇಕಡಾ 136ರಷ್ಟು ಏರಿಕೆಯಾಗಿದ್ದು, ಇದು ದೇಶದಲ್ಲೇ ಅತಿ ದುಬಾರಿಯಾಗಿದೆ. ದೆಹಲಿ ಮೆಟ್ರೋದ ದರ ಏರಿಕೆ ಜತೆ ಬೆಂಗಳೂರು ಮೆಟ್ರೋ ದರ ಹೆಚ್ಚಳ ಹೋಲಿಕೆ ಮಾಡಿ ಅಂಕಿಅಂಶಗಳನ್ನು ನೀಡಿದರು.

ಬೆಂಗಳೂರು ಮೆಟ್ರೋಗಿಂತ ದೆಹಲಿ ಮೆಟ್ರೋ ಅಗ್ಗ: ದೇಶದಲ್ಲೇ 'ನಮ್ಮ ಮೆಟ್ರೋ' ಅತಿ ದುಬಾರಿಯೇಕೆ? FFC ವರದಿ ಬಿಡುಗಡೆ ಮಾಡುತ್ತಿಲ್ಲವೇಕೆ?
ದೆಹಲಿ ಮೆಟ್ರೋ 395 ಕಿಲೋ ಮೀಟರ್ ವಿಸ್ತಾರ ಜಾಲ ಹೊಂದಿದ್ದರೂ ಪ್ರಯಾಣಿಕರಿಗೆ ಹೊರೆ ಆಗದಂತೆ ಕಡಿಮೆ ಪ್ರಮಾಣದಲ್ಲಿ ದರ ಹೆಚ್ಚಳ ಮಾಡಿದೆ.

Ragigudda Metro ನಿಲ್ದಾಣದಲ್ಲಿ ತಪ್ಪಿದ ದುರಂತ: ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ! Video
ಹಳದಿ ಮಾರ್ಗದ ರಾಗಿಗುಡ್ಡ ನಿಲ್ದಾಣದಲ್ಲಿ ಬೆಂಗಳೂರು ಮೆಟ್ರೋದ ಭದ್ರತಾ ಸಿಬ್ಬಂದಿಯೊಬ್ಬರು ಆಕಸ್ಮಿಕವಾಗಿ ರೈಲು ಹಳಿಗಳ ಮೇಲೆ ಬಿದ್ದಿದ್ದು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಮ್ಮ ಮೆಟ್ರೋ ಹಳದಿ ಮಾರ್ಗ: ನಿಲ್ದಾಣಗಳ ಹೆಸರು ಅದಲು-ಬದಲು?; ಅಧಿಕಾರಿಗಳ ಎಡವಟ್ಟಿನಿಂದ ಪ್ರಯಾಣಿಕರಿಗೆ ಗೊಂದಲ
ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಸ್ಟೇಷನ್ ಇರುವ ಜಾಗದಲ್ಲಿ ಇನ್ಫೋಸಿಸ್ ಫೌಂಡೇಶನ್- ಕೋನಪ್ಪನ ಅಗ್ರಹಾರ ಎಂದು ಹೆಸರಿಡಲಾಗಿದೆ. ಕೋನಪ್ಪನ ಅಗ್ರಹಾರ ಮೆಟ್ರೋ ಸ್ಟೇಷನ್ ಎಂದು ಇರಬೇಕಾದ ಜಾಗದಲ್ಲಿ ಎಲೆಕ್ಟ್ರಾನಿಕ್ ಸಿಟಿ ಎಂದು ಹೆಸರಿಡಲಾಗಿದೆ.

Namma Metro ಹೊಸ ದಾಖಲೆ: ಒಂದೇ ದಿನ 10.48 ಲಕ್ಷ ಪ್ರಯಾಣಿಕರ ಓಡಾಟ!
ಹಳದಿ ಮಾರ್ಗದಲ್ಲಿ ರೈಲು ಓಡಾಟ ಆರಂಭಿಸಿದ ಒಂದು ದಿನದ ನಂತರ ನಮ್ಮ ಮೆಟ್ರೋ ಹೊಸ ದಾಖಲೆ ಬರೆದಿದೆ.

