Mysuru Dasara

ಮೈಸೂರು ದಸರಾ ಮಹೋತ್ಸವಕ್ಕೆ ವೈಭವಯುತ ಚಾಲನೆ
ಮೈಸೂರು ದಸರಾ-2022ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ವೃಶ್ಚಿಕ ಲಗ್ನ ಮುಹೂರ್ತದಲ್ಲಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಸೇರಿದಂತೆ ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಇತರ ಗಣ್ಯರು ಹಾಜರಿದ್ದರು.

ದುಷ್ಟ ಸಂಹಾರ, ಶಿಷ್ಟ ಪಾಲನೆ ನಾಡಹಬ್ಬದ ಆಶಯ; ರಾಷ್ಟ್ರಪತಿಗಳು ದಸರಾ ಉದ್ಘಾಟನೆ ಮಾಡಿದ್ದು ಸಂತಸ ತಂದಿದೆ: ಸಿಎಂ ಬೊಮ್ಮಾಯಿ
ನಾಡದೇವತೆ ಚಾಮುಂಡೇಶ್ವರಿ ಅಗ್ರಪೂಜೆಯೊಂದಿಗೆ ದೇಶದ ಮೊದಲ ಪ್ರಜೆ ದ್ರೌಪದಿ ಮುರ್ಮು ಅವರು ದಸರಾಗೆ ಚಾಲನೆ ನೀಡಿದ್ದಾರೆ. ರಾಷ್ಟ್ರಪತಿಗಳಾದ ನಂತರ ಅವರು ಭಾರತದಲ್ಲಿ ಕರ್ನಾಟಕ ರಾಜ್ಯಕ್ಕೆ ಮೊದಲ ಭೇಟಿ ನೀಡಿದ್ದು, ಅದರಲ್ಲೂ ದಸರಾ ಉದ್ಘಾಟನೆಗೆ ಬಂದಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Live: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಕ್ಕೆ ಚಾಲನೆ: ಚಾಮುಂಡಿ ದೇವಿಗೆ ರಾಷ್ಟ್ರಪತಿ ಸೇರಿ ಗಣ್ಯರಿಂದ ಪುಷ್ಪಾರ್ಚನೆ
ನಾಡದೇವತೆ ಚಾಮುಂಡೇಶ್ವರಿಗೆ ದೀಪ ಬೆಳಗಿ ಪುಷ್ಪಾರ್ಚನೆ ಸಲ್ಲಿಸಿ ನಮಿಸುವ ಮೂಲಕ ನಾಡಹಬ್ಬ ದಸರಾ 2022ಕ್ಕೆ ಅದ್ದೂರಿ ಚಾಲನೆ ಸೋಮವಾರ ಸಿಕ್ಕಿದೆ. ವೃಶ್ಚಿಕ ಲಗ್ನದಲ್ಲಿ ಬೆಳಗ್ಗೆ 10.10ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್,ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಇತರ ಗಣ್ಯರು ಚಾಲನೆ ನೀಡಿದರು.

ನವರಾತ್ರಿಯ ಒಂಭತ್ತು ದಿನ ಯಾವ ದೇವಿಗೆ ಯಾವ ಹೂವಿನ ಅಲಂಕಾರ ಮಾಡಬೇಕು? ಯಾವ ಶ್ಲೋಕ ಪಠಿಸಬೇಕು?
ನವರಾತ್ರಿಯ ಪ್ರತೀ ದಿನದ ದೇವಿಯ ಅಲಂಕಾರ, ಆಕೆಗೆ ಇಷ್ಟವಾದ ಹೂವು, ಅಂದು ಇಷ್ಟವಾದ ನೈವೇದ್ಯ. ಆ ದಿನ ಇಡಬೇಕಾದ ರಂಗೋಲಿ, ಆಕೆಯನ್ನು ಒಲಿಸಿಕೊಳ್ಳಲು ರಾಗದ ಜೊತೆಗೆ ಅವಳನ್ನು ಆರಾಧಿಸುವ ಶ್ಲೋಕಗಳು ಈ ರೀತಿಯಾಗಿವೆ.

ಮೈಸೂರು ದಸರಾಕ್ಕೆ ದಿನಗಣನೆ ಆರಂಭ: ರಾಷ್ಟ್ರಪತಿಗಳಿಗೆ ವಿದ್ಯುಕ್ತ ಆಹ್ವಾನ, ಗಜಪಡೆಗಳಿಗೆ ಇಂದು ಮೂರನೇ ಸಿಡಿಮದ್ದು ತಾಲೀಮು
ವಿಶ್ವ ವಿಖ್ಯಾತ ಮೈಸೂರು ದಸರಾ ಆಚರಣೆಗೆ ವೇದಿಕೆ ಸಿದ್ದವಾಗುತ್ತಿದೆ. ಇದೇ ಸೋಮವಾರದಿಂದ ವಿಶ್ವವಿಖ್ಯಾತ ಮೈಸೂರು (Mysuru Dasara festival ) ದಸರಾ ಮಹೋತ್ಸವ ಉದ್ಘಾಟನೆಯಾಗಲಿದೆ. ಈ ಬಾರಿ ದೇಶದ ರಾಷ್ಟ್ರಪತಿಗಳು ದಸರಾ ಉದ್ಘಾಟನೆ ಮಾಡುತ್ತಿರುವುದು ವಿಶೇಷ.

ಸೋಮವಾರ ರಾಷ್ಟ್ರಪತಿಗಳಿಂದ ಮೈಸೂರು ದಸರಾ ಉದ್ಘಾಟನೆ, ದ್ರೌಪದಿ ಮುರ್ಮು ಕಾರ್ಯಕ್ರಮ ಪಟ್ಟಿ ಹೀಗಿದೆ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಉದ್ಘಾಟಿಸಲಿದ್ದು, ದೇಶದ ಮೊದಲ ಪ್ರಜೆಗೆ ಅದ್ಧೂರಿ ಸ್ವಾಗತ ನೀಡಲು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ.

ಮೈಸೂರು ದಸರಾಕ್ಕೆ ಮುನ್ನುಡಿ, ಕಾಡಿನಿಂದ ಅರಮನೆಯತ್ತ ಹೊರಟ ಗಜಪಡೆ, ಪೂಜೆ ಸಲ್ಲಿಕೆ
ವಿಶ್ವವಿಖ್ಯಾತ ದಸರಾ ಹಬ್ಬಕ್ಕೆ ಇನ್ನೆರಡು ತಿಂಗಳು ಬಾಕಿಯಿದೆ. ಅದಕ್ಕೆ ಸಿದ್ಧತೆ ಈಗಲೇ ಆರಂಭವಾಗಿದೆ. ಕಳೆದ ಎರಡು ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಗಿದ್ದ ಮೈಸೂರು ದಸರಾವನ್ನು(Mysuru Dasara) ಈ ವರ್ಷ ಅದ್ದೂರಿಯಾಗಿ ಆಚರಿಸಲು ರಾಜ್ಯ ಸರ್ಕಾರ ಕೂಡ ನಿರ್ಧರಿಸಿದೆ.

ದಸರಾ ಗೋಲ್ಡನ್ ಪಾಸ್ ನಲ್ಲಿ ಥೀಮ್ ಆಧಾರಿತ ಪ್ಯಾಕೇಜ್ ಟೂರ್ ಸೇರಿಸಲು ಚಿಂತನೆ!
ನಾಡಹಬ್ಬ ಮೈಸೂರು ದಸರಾ ವೇಳೆಯಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಸೆಳೆಯಲು ಪ್ಯಾಕೇಜ್ ಟೂರುಗಳ ಬಗ್ಗೆ ಪ್ರವಾಸೋದ್ಯಮ ಇಲಾಖೆ ಚಿಂತನೆ ನಡೆಸುತ್ತಿದೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ: ಮೈಸೂರು ದಸರಾ ಬಹಿಷ್ಕಾರ; ಮಾವುತರ ಎಚ್ಚರಿಕೆ
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿರುವ ಮಾವುತರು ಇದೀಗ ಮೈಸೂರು ದಸರಾ ಬಹಿಷ್ಕಾರಿಸುವ ಎಚ್ಚರಿಕೆ ನೀಡಿದ್ದಾರೆ.

