Murugha Mutt

ಪೋಕ್ಸೋ ಕೇಸಿನಡಿ ಜೈಲು ಸೇರಿದ ಮುರುಘಾ ಶರಣರು: ಹಂಗಾಮಿ ಪೀಠಾಧಿಪತಿಯಾಗಿ ಹೆಬ್ಬಾಳು ಮಠದ ಮಹಾಂತ ರುದ್ರಸ್ವಾಮಿ ನೇಮಕ
ಪೋಕ್ಸೋ ಪ್ರಕರಣದಲ್ಲಿ ಮುರುಘಾ ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಶಿವಾಚಾರ್ಯ ಮುರುಘಾ ಸ್ವಾಮೀಜಿ ಬಂಧನವಾಗಿದೆ. ಹಾಗೆಂದು ಮಠದ ದಿನನಿತ್ಯದ ಪೂಜೆ-ಪುನಸ್ಕಾರ, ಕೆಲಸ ಕಾರ್ಯ ವ್ಯವಹಾರಗಳು ನಿಲ್ಲುವ ಹಾಗಿಲ್ಲ. ಹೀಗಾಗಿ ಮುರುಘಾ ಮಠದ ವ್ಯಾಪ್ತಿಗೆ ಬರುವ ಹೆಬ್ಬಾಳು ಮಠದ ಮಹಾಂತ ರುದ್ರಸ್ವಾಮೀಜಿಗೆ ಮಠದ ಜವಾಬ್ದಾರಿಯನ್ನು ವಹಿಸಲಾಗಿದೆ.

ಮುರುಘಾ ಮಠದಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ಎರಡನೇ ಆರೋಪಿ ರಶ್ಮಿ ಬಂಧನ
ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮುಖ್ಯ ಆರೋಪಿ ಚಿತ್ರದುರ್ಗ ಮುರುಘಾ ಮಠದ ಡಾ ಶಿವಮೂರ್ತಿ ಶಿವಾಚಾರ್ಯ ಶರಣರನ್ನು ಕಳೆದ ರಾತ್ರಿ ಬಂಧಿಸಿರುವ ಚಿತ್ರದುರ್ಗ ಪೊಲೀಸರು ಇದೀಗ ಎರಡನೇ ಆರೋಪಿಯನ್ನು ಬಂಧಿಸಿದ್ದಾರೆ.

ಕಾರಾಗೃಹದಲ್ಲಿ ರಾತ್ರಿಯಿಡೀ ಕಳೆದ ಮುರುಘಾ ಶ್ರೀಗಳಿಗೆ ಎದೆನೋವು: ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಶಿಫ್ಟ್
ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಚಿತ್ರದುರ್ಗದ ಮುರುಘಾ ಮಠದ ಡಾ ಶಿವಮೂರ್ತಿ ಶಿವಾಚಾರ್ಯ ಶರಣರನ್ನು ಪೋಕ್ಸೋ ಕಾಯ್ದೆಯಡಿ ಚಿತ್ರದುರ್ಗ ಪೊಲೀಸರು ರಾತ್ರೋರಾತ್ರಿ ಬಂಧಿಸಿ ಮುಂಜಾನೆಯವರೆಗೆ ಜೈಲಿನಲ್ಲಿದ್ದ ಶ್ರೀಗಳು ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಂದು ಶುಕ್ರವಾರ ಬೆಳಗ್ಗೆ ಜಿಲ್ಲಾಸ್ಪತ್ರೆಗೆ ಕರೆತರಲಾಗಿದೆ.

ಲೈಂಗಿಕ ದೌರ್ಜನ್ಯ ಆರೋಪ: ಮುರುಘಾ ಶ್ರೀ ಬಂಧನ, ಮಠದಿಂದಲೇ ಕರೆದೊಯ್ದ ಪೊಲೀಸರು!
ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿದ್ದ ಮುರುಘಾ ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಮುರುಘಾ ಶರಣರನ್ನು ಪೊಲೀಸರು ಬಂಧಿಸಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.

ಚಿತ್ರದುರ್ಗದ ಮುರುಘಾ ಮಠದ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ತನಿಖಾ ವರದಿ ಕೇಳಿದ ಎನ್ ಸಿಪಿಸಿಆರ್
ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಪ್ರಭಾವಿ ಪ್ರಸಿದ್ಧ ಮುರುಘಾ ಮಠದ ಪ್ರಧಾನ ಮಠಾಧೀಶ ಡಾ ಶಿವಮೂರ್ತಿ ಶಿವಾಚಾರ್ಯರ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪದ ಕುರಿತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (NCPCR) ಕರ್ನಾಟಕ ಪೊಲೀಸರಿಂದ ತನಿಖಾ ವರದಿಯನ್ನು ಕೇಳಿದೆ.

ಮುರುಘಾ ಶ್ರೀಗಳ ಮೇಲೆ ಎಫ್ ಐಆರ್, ತನಿಖೆ ನಂತರ ಸತ್ಯ ಹೊರಬೀಳಲಿದೆ- ಸಿಎಂ ಬಸವರಾಜ ಬೊಮ್ಮಾಯಿ
ಮುರುಘಾ ಶ್ರೀಗಳ ಮೇಲೆ ಪೋಕ್ಸೋ ಅಡಿ ಎಫ್ ಐ ಆರ್ ದಾಖಲಾಗಿದ್ದು, ತನಿಖೆಯ ನಂತರ ಸತ್ಯ ಹೊರಬೀಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಕೋವಿಡ್-19 ಏರಿಕೆ ಹಿನ್ನೆಲೆ, ಭಕ್ತಾದಿಗಳ ಭೇಟಿಗೆ ಮುರುಘ ಮಠದಿಂದ ನಿರ್ಬಂಧ!
ಕೋವಿಡ್-19 ಏರಿಕೆ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿರುವ ಮುರುಘ ಮಠಕ್ಕೆ ಭಕ್ತಾದಿಗಳ ಭೇಟಿಯನ್ನು ನಿರ್ಬಂಧಿಸಲಾಗಿದೆ ಎಂದು ಮಠದ ಮುಖ್ಯಸ್ಥರಾದ ಡಾ.ಶಿವಮೂರ್ತಿ ಮುರುಘ ಶರಣರು ತಿಳಿಸಿದ್ದಾರೆ.

'ಲಿಂಗಾಯತ ಧರ್ಮದ ಶಿಫಾರಸು ಅಂಗೀಕರಿಸಿ': ಅಮಿತ್ ಶಾಗೆ ಶಿವಮೂರ್ತಿ ಶರಣರ ಪತ್ರ
ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಕರ್ನಾಟಕ ಸರ್ಕಾರ ಮಾಡಿರುವ ಶಿಫಾರಸ್ಸನ್ನು ಅಂಗೀಕರಿಸಿ ಲಿಂಗಾಯತ ಧರ್ಮಕ್ಕೆ ಅಲ್ಪ ಸಂಖ್ಯಾತ ಸ್ಥಾನಮಾನ ನೀಡುವತೆ ಮುರುಘ ರಾಜೇಂದ್ರ ಮಠದ ಶಿವಮೂರ್ತಿ ಮುರುಘ ಶರಣರು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಮನವಿ ಮಾಡಿದ್ದಾರೆ.

