ಪೋಕ್ಸೋ ಕೇಸಿನಡಿ ಜೈಲು ಸೇರಿದ ಮುರುಘಾ ಶರಣರು: ಹಂಗಾಮಿ ಪೀಠಾಧಿಪತಿಯಾಗಿ ಹೆಬ್ಬಾಳು ಮಠದ ಮಹಾಂತ ರುದ್ರಸ್ವಾಮಿ ನೇಮಕ
ಪೋಕ್ಸೋ ಪ್ರಕರಣದಲ್ಲಿ ಮುರುಘಾ ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಶಿವಾಚಾರ್ಯ ಮುರುಘಾ ಸ್ವಾಮೀಜಿ ಬಂಧನವಾಗಿದೆ. ಹಾಗೆಂದು ಮಠದ ದಿನನಿತ್ಯದ ಪೂಜೆ-ಪುನಸ್ಕಾರ, ಕೆಲಸ ಕಾರ್ಯ ವ್ಯವಹಾರಗಳು ನಿಲ್ಲುವ ಹಾಗಿಲ್ಲ. ಹೀಗಾಗಿ ಮುರುಘಾ ಮಠದ ವ್ಯಾಪ್ತಿಗೆ ಬರುವ ಹೆಬ್ಬಾಳು ಮಠದ ಮಹಾಂತ ರುದ್ರಸ್ವಾಮೀಜಿಗೆ ಮಠದ ಜವಾಬ್ದಾರಿಯನ್ನು ವಹಿಸಲಾಗಿದೆ.

ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಮುರುಘಾ ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಶಿವಾಚಾರ್ಯ ಮುರುಘಾ ಸ್ವಾಮೀಜಿ ಬಂಧನವಾಗಿದೆ. ಹಾಗೆಂದು ಮಠದ ದಿನನಿತ್ಯದ ಪೂಜೆ-ಪುನಸ್ಕಾರ, ಕೆಲಸ ಕಾರ್ಯ ವ್ಯವಹಾರಗಳು ನಿಲ್ಲುವ ಹಾಗಿಲ್ಲ. ಹೀಗಾಗಿ ಮುರುಘಾ ಮಠದ ವ್ಯಾಪ್ತಿಗೆ ಬರುವ ಹೆಬ್ಬಾಳು ಮಠದ ಮಹಾಂತ ರುದ್ರಸ್ವಾಮೀಜಿಗೆ ಮಠದ ಜವಾಬ್ದಾರಿಯನ್ನು ವಹಿಸಲಾಗಿದೆ.
ಮಹಾಂತ ರುದ್ರಸ್ವಾಮೀಜಿ ಅವರು ಮಠದ ಹಂಗಾಮಿ ಮುಖ್ಯಸ್ಥರಾಗಿ ಮಠದ ದೈನಂದಿನ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಾರೆ. ಮಠದ ಶಿಕ್ಷಣ ಸಂಸ್ಥೆಗಳು, ಕಾರ್ಯಕ್ರಮಗಳು, ಸಮಾಜ ಸೇವಾ ಉಪಕ್ರಮಗಳು ಮತ್ತು ಇತರ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗುತ್ತಾರೆ.
ಮುರುಘಾ ಮಠ ಶಾಲೆಗಳು ಮತ್ತು ಕಾಲೇಜುಗಳನ್ನು ನಡೆಸುತ್ತದೆ, ಸಾಮಾಜಿಕ ಸೇವಾ ಚಟುವಟಿಕೆಗಳನ್ನು ನಡೆಸುತ್ತದೆ. ಹೆಚ್ಚಿನ ಸಂಖ್ಯೆಯ ಆಸ್ತಿಗಳನ್ನು ಹೊಂದಿದೆ, ಅವುಗಳನ್ನು ರಕ್ಷಿಸಬೇಕಾಗಿದೆ ಎಂದು ಮಠದ ಮೂಲಗಳು ಹೇಳುತ್ತವೆ.
ಮುರುಘಾ ಮಠದ ಶಾಖೆಯಾದ ಹೆಬ್ಬಾಳು ರುದ್ರಸ್ವಾಮಿ ಮಠದ ಉಸ್ತುವಾರಿ ವಹಿಸಿರುವ ಮಹಾಂತ ರುದ್ರಸ್ವಾಮೀಜಿ ಅವರ ಹಿರಿತನವನ್ನು ಪರಿಗಣಿಸಿ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಸಮಾಜ ಸೇವಕ ಅನಿತ್ ಕುಮಾರ್ ಜಿಎಸ್ ಅವರನ್ನು ಸ್ವಾಮೀಜಿಗಳ ಆಪ್ತ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


