ರಾಜ್ಯಪೋಕ್ಸೋ ಕೇಸಿನಡಿ ಜೈಲು ಸೇರಿದ ಮುರುಘಾ ಶರಣರು: ಹಂಗಾಮಿ ಪೀಠಾಧಿಪತಿಯಾಗಿ ಹೆಬ್ಬಾಳು ಮಠದ ಮಹಾಂತ ರುದ್ರಸ್ವಾಮಿ ನೇಮಕ
ಪೋಕ್ಸೋ ಪ್ರಕರಣದಲ್ಲಿ ಮುರುಘಾ ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಶಿವಾಚಾರ್ಯ ಮುರುಘಾ ಸ್ವಾಮೀಜಿ ಬಂಧನವಾಗಿದೆ. ಹಾಗೆಂದು ಮಠದ ದಿನನಿತ್ಯದ ಪೂಜೆ-ಪುನಸ್ಕಾರ, ಕೆಲಸ ಕಾರ್ಯ ವ್ಯವಹಾರಗಳು ನಿಲ್ಲುವ ಹಾಗಿಲ್ಲ. ಹೀಗಾಗಿ ಮುರುಘಾ ಮಠದ ವ್ಯಾಪ್ತಿಗೆ ಬರುವ ಹೆಬ್ಬಾಳು ಮಠದ ಮಹಾಂತ ರುದ್ರಸ್ವಾಮೀಜಿಗೆ ಮಠದ ಜವಾಬ್ದಾರಿಯನ್ನು ವಹಿಸಲಾಗಿದೆ.