Munirathna,

ಆರ್ ಆರ್ ನಗರಕ್ಕೆ ಮುನಿರತ್ನ ಅಭ್ಯರ್ಥಿಯಾಗಲು ಕೋರ್ ಕಮಿಟಿಯಲ್ಲಿ ನಿರ್ಧಾರ: ಬಿಜೆಪಿ ಉಸ್ತುವಾರಿಗಳ ನೇಮಕ
ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆ ಹಿನ್ನೆಲೆಯಲ್ಲಿ ಮಹತ್ವದ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಿತು.

ಮುನಿರತ್ನಗೆ ಟಿಕೆಟ್ ಖಚಿತ, ಯಾವುದೇ ಪ್ರತಿರೋಧವಿಲ್ಲದೆ ಗೆಲುವು: ಸಚಿವ ಸುಧಾಕರ್
ಪಕ್ಷದ ಭರವಸೆಯಂತೆ ಆರ್ ಆರ್. ನಗರ ಕ್ಷೇತ್ರದ ಉಪ ಚುನಾವಣೆಗೆ ಮುನಿರತ್ನ ಅವರಿಗೇ ಟಿಕೆಟ್ ಸಿಗುವ ವಿಶ್ವಾಸವಿದ್ದು, ಯಾವುದೇ ಪ್ರತಿರೋಧವಿಲ್ಲದೇ ಉಪಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರು ಮಂಗಳವಾರ ಹೇಳಿದ್ದಾರೆ.

ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತು ಮುನಿರತ್ನಗೆ ಕೊರೋನಾ ಪಾಸಿಟಿವ್
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತು ನಿರ್ಮಾಪಕ ಮುನಿರತ್ನಗೂ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ.

ಓರ್ವ ನಟನಾಗಿ ನಿರ್ಮಾಪಕ ಮುನಿರತ್ನಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದರಲ್ಲಿ ತಪ್ಪಿಲ್ಲ: ನಿಖಿಲ್ ಗೌಡ ಸ್ಪಷ್ಟನೆ
ನಿರ್ಮಾಪಕ ಹಾಗೂ ರಾಜಕಾರಣಿ ಮುನಿರತ್ನ ಅವರ ಹುಟ್ಟುಹಬ್ಬಕ್ಕೆ ಜೆಡಿಎಸ್ ಯುವ ನಾಯಕ ನಿಖಿಲ್ ಗೌಡ ಶುಭಾಶಯ ಕೋರಿದ್ದಕ್ಕೆ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಿಖಿಲ್ ಗೌಡ ಫೇಸ್‌ಬುಕ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಮುನಿರತ್ನ ವಿರುದ್ದ ನಕಲಿ ಗುರುತಿನ ಚೀಟಿ ಪ್ರಕರಣ; ಅರ್ಜಿ ವಜಾಗೊಳಿಸಲು ಹೈಕೋರ್ಟ್ ನಕಾರ
ನಕಲಿ ಮತದಾರರ ಗುರುತಿನ ಚೀಟಿಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ತಕರಾರು ಅರ್ಜಿಯನ್ನು ವಿಚಾರಣೆಯಿಂದ ಕೈಬಿಡಬೇಕು ಎಂಬ ಮುನಿರತ್ನ ಅವರ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.

ಡಿ ಬಾಸ್ ಅಭಿಮಾನಿಗಳಿಗೆ ಮುನಿರತ್ನ ಸರ್ ಪ್ರೈಸ್: ವಿಂಗ್ ಕಮಾಂಡರ್ ಅಭಿನಂದನ್ ಪಾತ್ರಕ್ಕೆ ದರ್ಶನ್
ತಮ್ಮ ನಿರ್ಮಾಣದ ಮುಂದಿನ ಚಿತ್ರದಲ್ಲಿ ನಟ ದರ್ಶನ್ ತೂಗುದೀಪ ಅವರು ವಿಂಗ್ ಕಮಾಂಡರ್ ಅಭಿನಂದನ್ ಪಾತ್ರ ಮಾಡಲಿದ್ದಾರೆ ಎಂದು ಮುನಿರತ್ನ ತಿಳಿಸಿದ್ದಾರೆ.

ಮುನಿರತ್ನ ಚುನಾವಣಾ ಅಕ್ರಮಕ್ಕೆ ಸಾಕ್ಷಿ ಏನಿದೆ; ಹೈಕೋರ್ಟ್ ಪ್ರಶ್ನೆ?
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಹಿಂದೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮುನಿರತ್ನ ಅಕ್ರಮ ಎಸಗಿ, ಜಯ ಗಳಿಸಿದ್ದಾರೆ ಎಂಬುದಕ್ಕೆ ಸಾಕ್ಷಿ ಏನಿದೆ ಎಂದು ಹೈಕೋರ್ಟ್ ಪ್ರಶ್ನಿಸಿದ್ದಾರೆ.

ಕೆಜಿಎಫ್ ಬಳಿಕ ಕನ್ನಡದಲ್ಲಿ 2ನೇ ಸಾರ್ವಕಾಲಿಕ ದಾಖಲೆ ಬರೆದು ಕುರುಕ್ಷೇತ್ರ, ಬಾಕ್ಸ್ ಆಫೀಸ್ ಕೊಳ್ಳೆ!
ವರಮಹಾಲಕ್ಷ್ಮಿ ಹಬ್ಬದಂದು ಬಿಡುಗಡೆಯಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಯನದ 50ನೇ ಚಿತ್ರ ಕುರುಕ್ಷೇತ್ರ ಎಲ್ಲೆಡೆ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ಬಿಡುಗಡೆಯಾದ ಮೂರನೇ ವಾರದಲ್ಲೇ ಶತ ಕೋಟಿ ಗಳಿಸಿ ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸಿದೆ.

ಆಗಸ್ಟ್ 2ರಂದು 'ಕುರುಕ್ಷೇತ್ರ' ಬಿಡುಗಡೆ, ಅಭಿಮಾನಿಗಳ ಕಾತರ
ಬಹು ತಾರಾಗಣವಿರುವ ಕಾಂಗ್ರೆಸ್ ಶಾಸಕ ಮುನಿರತ್ನ ನಿರ್ಮಾಣದ ‘ಕುರುಕ್ಷೇತ್ರ’ ಬಿಡುಗಡೆಗೆ ಎರಡೇ ವಾರ ಬಾಕಿಯಿರುವಾಗಲೇ ಚಾಲೆಂಜಿಂಗ್ ಸ್ಟಾರ್....

